ರಾಜಸ್ಥಾನದಲ್ಲಿ ಮೇಲ್ಜಾತಿ ವ್ಯಕ್ತಿಯ ಬಕೆಟ್ ಮುಟ್ಟಿದ್ದಕ್ಕೆ 8 ವರ್ಷದ ದಲಿತ ಬಾಲಕನಿಗೆ ಥಳಿತ
ದಿ ಸಿಯಾಸತ್ ದೈನಿಕದ ವರದಿಯ ಪ್ರಕಾರ, ರಾತಿರಾಮ್ ಠಾಕೂರ್ ಎಂಬ ಮೇಲ್ಜಾತಿಯ ವ್ಯಕ್ತಿ ಅದೇ ಹ್ಯಾಂಡ್ ಪಂಪ್‌ನಿಂದ ಬಕೆಟ್‌ನಲ್ಲಿ ನೀರು ತುಂಬಿಸುತ್ತಿದ್ದ. ಚಿರಾಗ್ ಸ ನೀರು ಕುಡಿಯಲು ಬಕೆಟ್ ಅನ್ನು ಸರಿಸಿದ್ದ. ಆತ ಮುಟ್ಟಿದ್ದಕ್ಕೆ ಕೋಪಗೊಂಡ ಠಾಕೂರ್, ಚಿರಾಗ್ ಮೇಲೆ ಹಲ್ಲೆ ಮಾಡಿದ್ದಾನೆ.ಚಿರಾಗ್ ಅವರ ತಂದೆ ಪನ್ನಾಲಾಲ್ ಅವರು ಠಾಕೂರ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದು, ನೀರು ಕುಡಿಯಲು ಪ್ರಯತ್ನಿಸುತ್ತಿರುವಾಗ ತನ್ನ ಮಗ 'ಆಕಸ್ಮಿಕವಾಗಿ' ಬಕೆಟ್ ಅನ್ನು ಮುಟ್ಟಿದ್ದಾನೆ ಎಂದು ಹೇಳಿದ್ದಾರೆ
ದೆಹಲಿ ಏಪ್ರಿಲ್ 01: ಜಾತಿ ಸಂಬಂಧಿತ ಹಿಂಸಾಚಾರದ (caste-related violence)ಮತ್ತೊಂದು ಪ್ರಕರಣದಲ್ಲಿ, ರಾಜಸ್ಥಾನದ (Rajasthan) ಅಲ್ವಾರ್ ಜಿಲ್ಲೆಯ ಶಾಲೆಯೊಂದರಲ್ಲಿ ಹ್ಯಾಂಡ್ ಪಂಪ್ ಬಳಿ ಇರಿಸಲಾಗಿದ್ದ ನೀರಿನ ಬಕೆಟ್ ಅನ್ನು ಮುಟ್ಟಿದ್ದಕ್ಕಾಗಿ ಎಂಟು ವರ್ಷದ ದಲಿತ (Dalit) ಬಾಲಕನನ್ನು ಥಳಿಸಲಾಗಿದೆ. ಇಂಡಿಯಾ ಟುಡೇ ವರದಿ ಪ್ರಕಾರ, ಅಲ್ವಾರ್‌ನ ಮಂಗಳೇಶಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಿರಾಗ್ ಎಂದು ಗುರುತಿಸಲಾದ ಬಾಲಕ ನಾಲ್ಕನೇ ತರಗತಿ ವಿದ್ಯಾರ್ಥಿಯಾಗಿದ್ದು, ನೀರು ಕುಡಿಯಲು ಶಾಲೆಯಲ್ಲಿ ಅಳವಡಿಸಿದ್ದ ಹ್ಯಾಂಡ್ ಪಂಪ್ ಹತ್ತಿರ ಹೋಗಿದ್ದ.
ದಿ ಸಿಯಾಸತ್ ದೈನಿಕದ ವರದಿಯ ಪ್ರಕಾರ, ರತಿರಾಮ್ ಠಾಕೂರ್ ಎಂಬ ಮೇಲ್ಜಾತಿಯ ವ್ಯಕ್ತಿ ಅದೇ ಹ್ಯಾಂಡ್ ಪಂಪ್‌ನಿಂದ ಬಕೆಟ್‌ನಲ್ಲಿ ನೀರು ತುಂಬಿಸುತ್ತಿದ್ದ. ಚಿರಾಗ್ ಸ ನೀರು ಕುಡಿಯಲು ಬಕೆಟ್ ಅನ್ನು ಸರಿಸಿದ್ದ. ಆತ ಮುಟ್ಟಿದ್ದಕ್ಕೆ ಕೋಪಗೊಂಡ ಠಾಕೂರ್, ಚಿರಾಗ್ ಮೇಲೆ ಹಲ್ಲೆ ಮಾಡಿದ್ದಾನೆ.
ಇಂಡಿಯಾ ಟುಡೇ ಪ್ರಕಾರ, ಚಿರಾಗ್ ಅವರ ತಂದೆ ಪನ್ನಾಲಾಲ್ ಅವರು ಠಾಕೂರ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದು, ನೀರು ಕುಡಿಯಲು ಪ್ರಯತ್ನಿಸುತ್ತಿರುವಾಗ ತನ್ನ ಮಗ ‘ಆಕಸ್ಮಿಕವಾಗಿ’ ಬಕೆಟ್ ಅನ್ನು ಮುಟ್ಟಿದ್ದಾನೆ ಎಂದು ಹೇಳಿದ್ದಾರೆ. ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಶಾಲೆಯ ಆವರಣದೊಳಗೆ ಒಂದು ಹ್ಯಾಂಡ್ ಪಂಪ್ ಇದೆ, ಅಲ್ಲಿ ಗ್ರಾಮದ ಇತರ ಜನರು ತಮ್ಮ ನೀರನ್ನು ತುಂಬುತ್ತಾರೆ. ನನ್ನ ಮಗ ನೀರು ಕುಡಿಯಲು ಬಕೆಟ್ ಅನ್ನು ಪಕ್ಕಕ್ಕೆ ಸರಿಸಿದ್ದಾನೆ. ಇದಕ್ಕಾಗಿ ನನ್ನ ಮಗನಿಗೆ ಆತರ ಗಂಭೀರ ರೀತಿಯಲ್ಲಿ ಥಳಿಸಿದ್ದಾನೆ.ಅವನ ಕಿರುಚಾಟವನ್ನು ಕೇಳಿ ಶಾಲೆಯ ಬಳಿ ಹೋಗುತ್ತಿದ್ದ ನನ್ನ ಸಂಬಂಧಿ ಸ್ಥಳಕ್ಕಾಗಮಿಸಿ ನೋಡಿದಾಗ ನನ್ನ ಮಗ ಅಳುತ್ತಿದ್ದುದನ್ನು ನೋಡಿ ನನಗೆ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದೆ. ನಂತರ ನಾವು ಅಪರಾಧಿಯ ಮನೆಗೆ ಹೋದೆವು ಎಂದು ಪನ್ನಾಲಾಲ್ ಹೇಳಿದ್ದಾರೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಚಿರಾಗ್‌ನ ತಂದೆ ಠಾಕೂರ್ ಅವರಲ್ಲಿ ಕ್ಷಮೆ ಕೇಳಿದ್ದರೂ ಅದನ್ನು ಸ್ವೀಕರಿಸಿಲ್ಲ.ಬದಲಿಗೆ ಠಾಕೂರ್, ಪನ್ನಾಲಾಲ್ ಮತ್ತು ಅವರ ಕುಟುಂಬದ ವಿರುದ್ಧ ಜಾತಿ ನಿಂದನೆ ಮಾಡಿ ಬೈದಿದ್ದಾನೆ.
“ನನ್ನ ಮಗ ಶಾಲೆಗೆ ಹೋಗಲು ಭಯಪಡುತ್ತಾನೆ. ಈ ದೂರನ್ನು ಹಿಂಪಡೆಯಲು ಅವನು ನನ್ನಲ್ಲಿ ಕೇಳಿದ್ದಾನೆ. ಆ ವ್ಯಕ್ತಿ ಮತ್ತೆ ಹೊಡೆಯುತ್ತಾನೆ ಎಂಬ ಭಯದಿಂದ ಅವನು ಶಾಲೆಗೆ ಹೋಗಲು ಸಿದ್ಧವಾಗಿಲ್ಲ. ನಮಗೆ ನ್ಯಾಯ ಸಿಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಚಿರಾಗ್ ಅಪ್ಪ ಹೇಳಿದ್ದಾರೆ. ಚಿರಾಗ್ ಅವರ ಕುಟುಂಬ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಿದೆ. ಆದರೆ ಇದು ಪೊಲೀಸ್ ವಿಷಯ ಎಂದು ತಿಳಿಸಿದ ನಂತರ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ.
ಇಂಡಿಯಾ ಟುಡೇ ಪ್ರಕಾರ, ಕುಟುಂಬ ಸದಸ್ಯರು ರಾಮಗಢ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ನಂತರ ಎಸ್‌ಸಿ/ಎಸ್‌ಟಿ ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ವಿಷಯದ ಬಗ್ಗೆ ತನಿಖೆ ಪ್ರಾರಂಭವಾಗಿದೆ. ಪ್ರಕಟಣೆಯ ಪ್ರಕಾರ, ಬಾಲಕ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಆರೋಪಿಯನ್ನು ಬಂಧಿಸಲು ಪೊಲೀಸ್ ತಂಡವನ್ನು ಕಳುಹಿಸಲಾಗಿದೆ ಎಂದು ಎಸ್‌ಎಚ್‌ಒ ಸವಾಯಿ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಸ್ವರ್ಣಯುಗ ಆರಂಭ ಎಂದು ರಾಮಲಲ್ಲಾ ಕಿವಿಯಲ್ಲಿ ಹೇಳಿದಂತಿತ್ತು; ರಾಮಮಂದಿರ ಪ್ರಾಣಪ್ರತಿಷ್ಠೆ ಅನುಭವ ಹಂಚಿಕೊಂಡ ಪ್ರಧಾನಿ
ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, “ನಾವು ಆರೋಪಿಯನ್ನು ವಿಚಾರಣೆ ನಡೆಸಿದ್ದೇವೆ. ಅವನು ತಪ್ಪಿತಸ್ಥನೆಂದು ಕಂಡುಬಂದರೆ, ಕ್ರಮ ಕೈಗೊಳ್ಳಲಾಗುವುದು. ಹುಡುಗ ಸುರಕ್ಷಿತವಾಗಿ ಶಾಲೆಗೆ ಹೋಗಲಿದ್ದು ಅವನಿಗೆ ಇನ್ನು ಮುಂದೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ನಾವು ಭರವಸೆ ನೀಡಿರುವುದಾಗಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ