ಚೆನ್ನೈ: ವೃದ್ಧೆಯನ್ನು ಕೊಂದು, ತುಂಡು ತುಂಡಾಗಿ ಕತ್ತರಿಸಿ ನದಿಗೆ ಎಸೆದ ದುರುಳರು

ವೃದ್ಧೆಯೊಬ್ಬರನ್ನು ಹತ್ಯೆ ಮಾಡಿ, ತುಂಡು, ತುಂಡಾಗಿ ಕತ್ತರಿಸಿ ನದಿಗೆ ಎಸೆದಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ವೃದ್ಧೆ ಕಳೆದ 10 ದಿನಗಳಿಂದ ನಾಪತ್ತೆಯಾಗಿದ್ದರು. ಕೊಲೆಗೆ ಸಂಬಂಧಿಸಿದಂತೆ ವಿರುದುನಗರದಲ್ಲಿ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಚೆನ್ನೈ: ವೃದ್ಧೆಯನ್ನು ಕೊಂದು, ತುಂಡು ತುಂಡಾಗಿ ಕತ್ತರಿಸಿ ನದಿಗೆ ಎಸೆದ ದುರುಳರು
ಕೊಲೆ
Image Credit source: India Today

Updated on: Jul 29, 2024 | 8:09 AM

ವೃದ್ಧೆಯೊಬ್ಬರನ್ನು ಹತ್ಯೆ ಮಾಡಿ, ತುಂಡು, ತುಂಡಾಗಿ ಕತ್ತರಿಸಿ ನದಿಗೆ ಎಸೆದಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ವೃದ್ಧೆ ಕಳೆದ 10 ದಿನಗಳಿಂದ ನಾಪತ್ತೆಯಾಗಿದ್ದರು. ಕೊಲೆಗೆ ಸಂಬಂಧಿಸಿದಂತೆ ವಿರುದುನಗರದಲ್ಲಿ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ಮಹಿಳೆಯನ್ನು ವಿಜಯಾ ಎಂದು ಗುರುತಿಸಲಾಗಿದ್ದು, ಅವರು ಮೈಲಾಪುರದ ಎಂಜಿಆರ್ ನಗರದಲ್ಲಿ ವಾಸಿಸುತ್ತಿದ್ದರು. ದಿನಗೂಲಿ ಕೆಲಸ ಮಾಡುತ್ತಿದ್ದರು. ಜುಲೈ 17 ರಂದು ವಿಜಯಾ ಕೆಲಸ ಮುಗಿಸಿ ಮನೆಗೆ ಬಾರದೆ ಇದ್ದುದನ್ನು ಕಂಡು ಮಗಳು ಲೋಕನಾಯಕಿ ಆತಂಕಗೊಂಡಿದ್ದರು. ಹುಡುಕಾಟ ನಡೆಸಿದರೂ ಫಲಕಾರಿಯಾಗದೆ ಲೋಕನಾಯಕಿ ಜುಲೈ 19ರಂದು ಎಂಜಿಆರ್ ನಗರ ಪೊಲೀಸರಿಗೆ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ.

ವಿಜಯಾ ನಾಪತ್ತೆಯಾದ ನಂತರ ಎಂಜಿಆರ್ ನಗರ ಪೊಲೀಸರು ತನಿಖೆ ಆರಂಭಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅವರು ಆಕೆಯ ನೆರೆಹೊರೆಯವರಾದ ಪಾರ್ತಿಬನ್ ಮೇಲೆ ಅನುಮಾನಗೊಂಡರು. ಜುಲೈ 23 ರಂದು ಅವರನ್ನು ವಿಚಾರಣೆಗೆ ಕರೆಸಲಾಯಿತು ಆದರೆ ಅವರು ಹಾಜರಾಗಲಿಲ್ಲ.

ಮತ್ತಷ್ಟು ಓದಿ: ನಿಂಬೆಹಣ್ಣು ಇಟ್ಟು ಪೂಜೆ ಮಾಡಿ ಬಳಿಕ ಮನೆ ಬಾಗಿಲು ಮುರಿದು ಕಳ್ಳತನ

ಪಾರ್ಥಿಬನ್‌ನ ಸೆಲ್‌ಫೋನ್ ಟ್ರ್ಯಾಕ್ ಮಾಡಿದ ಪೊಲೀಸರು ವಿರುದುನಗರ ಜಿಲ್ಲೆಯಲ್ಲಿ ಪತ್ನಿಯೊಂದಿಗೆ ತಲೆಮರೆಸಿಕೊಂಡಿದ್ದ ಜಾಗವನ್ನು ಪತ್ತೆ ಮಾಡಿದರು. ಕಳ್ಳತನ ಮಾಡುತ್ತಿದ್ದಾಗ ತಾವು ಸಿಕ್ಕಿಬಿದ್ದ ಬಳಿಕ ಆಕೆಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ಆಕೆಯ ಕತ್ತು ಹಿಸುಕಿ, ಆಕೆಯ ದೇಹವನ್ನು ಕತ್ತರಿಸಿ, ಭಾಗಗಳನ್ನು ಅಡ್ಯಾರ್ ನದಿಗೆ ಎಸೆದಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ಚಿನ್ನಾಭರಣ ಕದಿಯುವುದೇ ಅವರ ಉದ್ದೇಶವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಹೆಚ್ಚಿನ ತನಿಖೆಗಾಗಿ ದಂಪತಿಯನ್ನು ಚೆನ್ನೈಗೆ ಕರೆತರುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us