ಮಾಧ್ಯಮಗಳು ಹೈಕೋರ್ಟ್ ಅಭಿಪ್ರಾಯ ವರದಿ ಮಾಡದಂತೆ ನಿರ್ಬಂಧ ವಿಧಿಸಲಾಗುವುದಿಲ್ಲ: ಸುಪ್ರೀಂಕೋರ್ಟ್

|

Updated on: May 03, 2021 | 12:55 PM

Election Commission: ರಾಜಕೀಯ ಪಕ್ಷಗಳು ಕೊವಿಡ್ ನಿರ್ಬಂಧ ಮತ್ತು ನಿಯಮಾವಳಿಗಳನ್ನು ಉಲ್ಲಂಘಿಸಿ ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುವಾಗ ಅದಕ್ಕೆ ತಡೆಯೊಡ್ಡದಿರುವುದಕ್ಕೆ ಭಾರತೀಯ ಚುನಾವಣಾ ಆಯೋಗವನ್ನು ಮದ್ರಾಸ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.

ಮಾಧ್ಯಮಗಳು ಹೈಕೋರ್ಟ್ ಅಭಿಪ್ರಾಯ ವರದಿ ಮಾಡದಂತೆ ನಿರ್ಬಂಧ ವಿಧಿಸಲಾಗುವುದಿಲ್ಲ: ಸುಪ್ರೀಂಕೋರ್ಟ್
ಸುಪ್ರೀಂ​ ಕೋರ್ಟ್
Follow us on

ದೆಹಲಿ: ದೇಶದಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಲು ಚುನಾವಣೆಗಳೇ ಕಾರಣ. ಹಾಗಾಗಿ ಚುನಾವಣಾ ಆಯೋಗದ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಹೇಳಿತ್ತು. ಮದ್ರಾಸ್ ಹೈಕೋರ್ಟ್ ಹೇಳಿಕೆ ಅವಮಾನಕರ ಮತ್ತು ಅವಹೇಳನಕಾರಿ ಎಂದು ಪ್ರತಿಕ್ರಿಯಿಸಿದ ಚುನಾವಣಾ ಆಯೋಗ ಮದ್ರಾಸ್ ಹೈಕೋರ್ಟ್ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.  ಚುನಾವಣಾ ಆಯೋಗ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನಡೆಸಿದ ಸುಪ್ರೀಂಕೋರ್ಟ್  ಮಾಧ್ಯಮವು ಪ್ರಜಾಪ್ರಭುತ್ವದಲ್ಲಿ ಪ್ರಬಲ ಕಾವಲುಗಾರ.  ಉನ್ನತ ನ್ಯಾಯಾಲಯಗಳಲ್ಲಿ ಚರ್ಚೆಗಳನ್ನು ವರದಿ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ. ಮಾಧ್ಯಮಗಳು  ಮೌಖಿಕ ಹೇಳಿಕೆ  ಬಗ್ಗೆ ವರದಿ ಮಾಡಬಾರದು ಎಂಬಂತಹ ಪರಿಹಾರವನ್ನು ಹುಡುಕುವುದು ಕಷ್ಟ ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಹೈಕೋರ್ಟ್   ಪ್ರಜಾಪ್ರಭುತ್ವದ ಪ್ರಮುಖ ಆಧಾರ ಸ್ತಂಭಗಳಾಗಿರುವುದರಿಂದ ಅವರನ್ನು ನಿರಾಶೆಗೊಳಿಸಲು ನಾವು ಬಯಸುವುದಿಲ್ಲ ಎಂದು  ಸೋಮವಾರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಹೇಳಿದೆ.

ಮದ್ರಾಸ್ ಹೈಕೋರ್ಟ್ ಹೇಳಿದ್ದೇನು?

ರಾಜಕೀಯ ಪಕ್ಷಗಳು ಕೊವಿಡ್ ನಿರ್ಬಂಧ ಮತ್ತು ನಿಯಮಾವಳಿಗಳನ್ನು ಉಲ್ಲಂಘಿಸಿ ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುವಾಗ ಅದಕ್ಕೆ ತಡೆಯೊಡ್ಡದಿರುವುದಕ್ಕೆ ಭಾರತೀಯ ಚುನಾವಣಾ ಆಯೋಗವನ್ನು ಮದ್ರಾಸ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ದೇಶದಲ್ಲಿ ಕೊವಿಡ್ ಎರಡನೇ ಅಲೆ ಉಲ್ಬಣವಾಗಲು ಚುನಾವಣಾ ಆಯೋಗವೇ ಜವಾಬ್ದಾರರು. ಆಯೋಗದ ವಿರುದ್ದ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಹೇಳಿತ್ತು.

ರಾಜಕಾರಣಿಗಳು ಬೃಹತ್ ಮೆರವಣಿಗೆ, ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುವಾಗ ಅದನ್ನು ತಡೆಯದೇ ಇದ್ದಿದ್ದು ಚುನಾವಣಾ ಆಯೋಗದ ತಪ್ಪು . ದೇಶ ಈಗ ಎದುರಿಸುತ್ತಿರುವ ಪರಿಸ್ಥಿತಿಗೆ ಏಕೈಕ ಜವಾಬ್ದಾರರು ಚುನಾವಣಾ ಆಯೋಗ. ದೇಶದಲ್ಲಿ ಎರಡನೇ ಅಲೆ ಇಷ್ಟೊಂದು ತೀವ್ರವಾಗಲು ಆಯೋಗವೇ ಕಾರಣ ಎಂದು ಹೈಕೋರ್ಟ್ ಹೇಳಿದೆ.

ರಾಜಕೀಯ ಪಕ್ಷಗಳು ಕೊವಿಡ್ ನಿರ್ಬಂಧಗಳನ್ನು ಗಾಳಿಗೆ ತೂರುತ್ತಿರುವಾಗ ಚುನಾವಣಾ ಆಯೋಗ ಅವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಹಾಗಾಗಿ ಚುನಾವಣಾ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ತಮ್ಮ ಕೆಲಸಗಳನ್ನು ಸರಿಯಾಗಿ ನಿರ್ವಹಿಸಲು ವಿಫಲವಾಗಿರುವುದಕ್ಕೆ ವಿಚಾರಣೆಗೊಳಪಡಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಲ್ ಕುಮಾರ್ ರಾಮಮೂರ್ತಿ ಅವರ ನ್ಯಾಯಪೀಠ ಹೇಳಿತ್ತು.

ಕೊವಿಡ್ -19 ಪ್ರಕರಣಗಳ ಹೆಚ್ಚಳಕ್ಕೆ ಚುನಾವಣಾ ಆಯೋಗವನ್ನು ದೂಷಿಸುವ ನ್ಯಾಯಾಲಯದ ಮೌಖಿಕ ಅವಲೋಕನಗಳನ್ನು ಪ್ರಕಟಿಸುವುದನ್ನು ತಡೆಯಲು ಕೋರಿ ಚುನಾವಣಾ ಆಯೋಗವು ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ತಳ್ಳಿದೆ.

ಚುನಾವಣಾ ಆಯೋಗವನ್ನು ಪ್ರತಿನಿಧಿಸುವ ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರ ವರದಿಗಳನ್ನು ಲಿಖಿತ ಆದೇಶಗಳಿಗೆ ಸೀಮಿತಗೊಳಿಸಲು ಮತ್ತು ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ನ್ಯಾಯಾಧೀಶರ ಮೌಖಿಕ ಅವಲೋಕನಗಳನ್ನು ವರದಿ ಮಾಡುವುದರಿಂದ ದೂರವಿರಲು ಮಾಧ್ಯಮಗಳಿಗೆ ನಿರ್ದೇಶನ ನೀಡುವಂತೆ ಮಾಡಿದ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಯಾವುದೇ ಕ್ಷುಲ್ಲಕವಾದರೆ ದೂರುಗಳನ್ನು ನೀಡಿದರೆ ಆಯೋಗವು ನ್ಯಾಯಾಲಯದ ಮೆಟ್ಟಿಲೇರಬಹುದು ಎಂದಿತ್ತು.

ಇದನ್ನೂ ಓದಿ: ಕೊವಿಡ್ 2ನೇ ಅಲೆಗೆ ಚುನಾವಣಾ ಆಯೋಗವೇ ಹೊಣೆ; ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು: ಮದ್ರಾಸ್ ಹೈಕೋರ್ಟ್

(Election Commission moves Supreme Court against Madras High Courts murder charges remark)

Published On - 12:39 pm, Mon, 3 May 21