ಎಲೆಕ್ಟ್ರಿಲ್ ವಾಹನಗಳು ಬೆಂಕಿಗೀಡಾಗುವುದು ಸಾಮಾನ್ಯ : ಓಲಾ ಸಿಇಒ ಟ್ವೀಟ್

ಎಲೆಕ್ಟ್ರಿಕ್ ವಾಹನಗಳು (EV) ಬೆಂಕಿಗೀಡಾಗುವುದು ಜಾಗತಿಕ ವಿದ್ಯಮಾನವಾಗಿದೆ. ಇದು ಅಂತರರಾಷ್ಟ್ರೀಯ ಕಂಪನಿಗಳು ತಯಾರಿಸಿದ ವಾಹನಗಳಲ್ಲಿಯೂ ಸಂಭವಿಸುತ್ತದೆ ಎಂದು ಓಲಾ ಸಿಇಒ ಭವಿಶ್ ಅಗರ್ವಾಲ್ ಟ್ವೀಟ್

ಎಲೆಕ್ಟ್ರಿಲ್ ವಾಹನಗಳು ಬೆಂಕಿಗೀಡಾಗುವುದು ಸಾಮಾನ್ಯ : ಓಲಾ ಸಿಇಒ ಟ್ವೀಟ್
ಭವಿಶ್ ಅಗರ್ವಾಲ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jun 23, 2022 | 8:42 PM

ಇತ್ತೀಚಿನ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಯ ಘಟನೆಗಳಿಂದಾಗಿ ಓಲಾ (Ola) ಟೀಕೆಗಳನ್ನೆದುರಿಸುತ್ತಿದ್ದು, ಎಲೆಕ್ಟ್ರಿಕ್ ವಾಹನಗಳು (EV) ಬೆಂಕಿಗೀಡಾಗುವುದು ಸಾಮಾನ್ಯ. ಇದು ಅಂತರರಾಷ್ಟ್ರೀಯ ಕಂಪನಿಗಳು ತಯಾರಿಸಿದ ವಾಹನಗಳಲ್ಲಿಯೂ ಸಂಭವಿಸುತ್ತದೆ ಎಂದು ಓಲಾ ಸಿಇಒ ಭವಿಶ್ ಅಗರ್ವಾಲ್ (Bhavish Aggarwal) ಹೇಳಿದ್ದಾರೆ. ಅಗರ್ವಾಲ್ ಅವರು ಟ್ವಿಟರ್‌ನಲ್ಲಿ ಟಾಟಾ ನೆಕ್ಸಾನ್ ಇವಿಗೆ ಮುಂಬೈನ ಉಪನಗರ ವಸೈನಲ್ಲಿ ಬೆಂಕಿ ಹೊತ್ತಿಕೊಂಡಿರುವ ವಿಡಿಯೊವನ್ನು ಶೇರ್ ಮಾಡಿ, ಇವಿಗೆ ಬೆಂಕಿ ಹೊತ್ತಿಕೊಳ್ಳುತ್ತದೆ. ಎಲ್ಲಾ ಜಾಗತಿಕ ಉತ್ಪನ್ನಗಳಲ್ಲಿಯೂ ಸಹ ಇದು ಸಂಭವಿಸುತ್ತದೆ. ಐಸಿಇ ಬೆಂಕಿಗಿಂತ ಇವಿ ಬೆಂಕಿಯು ಕಡಿಮೆ ಬಾರಿ ಸಂಭವಿಸುತ್ತದೆ ಎಂದು ಹೇಳಿದ್ದಾರೆ. ಆದಾಗ್ಯೂ, ಭವಿಶ್ ಅಗರ್ವಾಲ್ ಅವರ ಕಾಮೆಂಟ್ ಟ್ವಿಟರ್ ಬಳಕೆದಾರರಲ್ಲಿ ಕಳವಳವನ್ನು ಹೆಚ್ಚಿಸಿದೆ.  ನಿಮಗೆ ಇನ್ನೂ ಇದು ಅರ್ಥವಾಗಿಲ್ಲವೇ ಭವಿಶ್? ನೀವು ಅದ್ಭುತ ಉತ್ಪನ್ನವನ್ನು ಹೊಂದಿದ್ದೀರಿ. ನಾನು ವೈಯಕ್ತಿಕವಾಗಿ ಅದನ್ನು ಬಯಸುತ್ತೇನೆ. ಆದರೆ ಕೆಲವು ವೈಫಲ್ಯಗಳು ಎದುರಾದ ರೀತಿಯಲ್ಲಿ ಮನುಷ್ಯನ ಜೀವಕ್ಕೆ ಅಪಾಯವಿದೆ. ಸಾಫ್ಟ್‌ವೇರ್ ತಂಡವು ಪೂರ್ಣ ಒತ್ತಡ ಮತ್ತು ಎಎಸ್‌ಎಪಿ ಕೆಲಸ ಮಾಡುವ ಮೂಲಕ ಪರಿಹರಿಸಬೇಕು ಎಂದು APT ((@imahungrybiker) ಎಂಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

“ಆದರೆ ಅನುಪಾತ ಏನು? ಇವಿಗೆ ಬೆಂಕಿ ಹೊತ್ತುಕೊಂಡಾಗ ಅದರ ಸಂಶೋಧನೆ ಮತ್ತು ಅಭಿವೃದ್ಧಿ ತಂಡವು ಅದನ್ನು ಸರಿಪಡಿಸುವವರೆಗೆ ಯಾವುದೇ ಕಂಪನಿಯು ಉತ್ಪನ್ನವನ್ನು ಬಿಡುಗಡೆ ಮಾಡುವುದು ಸರಿಯಲ್ಲ. ಓಲಾ ಸ್ಕೂಟರ್‌ಗಳಂತೆ ಬೆಂಕಿಗೀಡಾಗುವ ಟೆಸ್ಲಾ ಇವಿಗಳ ಸಂಖ್ಯೆಯು ಮಾರಾಟದ ಪ್ರಮಾಣಕ್ಕನುಗುಣವಾಗಿ 1:100 ಆಗಿದೆ ಎಂದು ನನಗೆ ಖಾತ್ರಿಯಿದೆ. ಓಲಾ ಕಾರುಗಳಿಗೆ ಬೆಂಕಿ ಬೀಳುತ್ತದೆ ಎಂದು ನಾವು ನಿರೀಕ್ಷಿಸಬಹುದೇ? ಎಂದು ಮನಹರ್ ಸಿಂಗ್ (@Manhar_Aman) ಎಂದು ಕೇಳಿದ್ದಾರೆ.  ಮತ್ತೊಬ್ಬ ಟ್ವಿಟರ್ ಬಳಕೆದಾರ ಚೇತನ್ ಶೆಟ್ಟಿ ((@chethszone) “ಇವಿ ಬೆಂಕಿ ಆಕಸ್ಮಿಕವಾಗಿ ಸಂಭವಿಸುತ್ತದೆ ಎಂದು ನೀವು ಹೇಳುತ್ತಿದ್ದೀರಿ. ಜನರ ಜೀವನ ಮುಖ್ಯವಲ್ಲವೇ?” ಎಂದು ಕೇಳಿದ್ದಾರೆ

ಆದಾಗ್ಯೂ, ಇವಿ ಬೆಂಕಿಯ ಬಗ್ಗೆ ಅಗರ್ವಾಲ್ ಅವರ ನಿಲುವನ್ನು ಕೆಲವರು ಸಮರ್ಥಿಸಿಕೊಂಡರು. ” ತಯಾರಕರು ಎಷ್ಟು ಪ್ರಬಲ ಗುಣಮಟ್ಟದ ಕ್ರಮಗಳನ್ನು ಹೊಂದಿದ್ದರೂ ಬೆಂಕಿ ಸಂಭವಿಸುವ ಸನ್ನಿವೇಶಗಳೂ ಇರುತ್ತವೆ ಎಂದು ಎಂದು ಹರ್ಷ್ ನಾರಾಯಣ್ (@hurshnarayan) ಬರೆದಿದ್ದಾರೆ. ಇತ್ತೀಚೆಗೆ ದೇಶದ ವಿವಿಧ ಭಾಗಗಳಲ್ಲಿ ಇವಿಗಳು ಬೆಂಕಿಗೆ ಆಹುತಿಯಾದ ಘಟನೆಗಳು ನಡೆದಿದ್ದು, ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಓಲಾ ಎಲೆಕ್ಟ್ರಿಕ್‌ಗೆ ನೋಟಿಸ್ ನೀಡಿದೆ ಎಂದು ಮೂಲಗಳು ಸಿಎನ್ ಬಿಸಿ ಟಿವಿ18ಗೆ ತಿಳಿಸಿವೆ. ನೋಟಿಸ್‌ಗೆ ಉತ್ತರಿಸಲು ಓಲಾ ಎಲೆಕ್ಟ್ರಿಕ್‌ಗೆ 15 ದಿನಗಳ ಕಾಲಾವಕಾಶ ನೀಡಿದೆ.

ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ