ವಿದ್ಯುತ್ ತಿದ್ದುಪಡಿ ಕಾಯ್ದೆಗೆ ವಿರೋಧ; ಇನ್ನು ಮೂರು ದಿನ ದೇಶಾದ್ಯಂತ ವಿದ್ಯುತ್ ನೌಕರರ ಪ್ರತಿಭಟನೆ

ವಿದ್ಯುತ್ ತಿದ್ದುಪಡಿ ಕಾಯ್ದೆಗೆ ವಿರೋಧ; ಇನ್ನು ಮೂರು ದಿನ ದೇಶಾದ್ಯಂತ ವಿದ್ಯುತ್ ನೌಕರರ ಪ್ರತಿಭಟನೆ
ಸಾಂದರ್ಭಿಕ ಚಿತ್ರ

Electricity Amendment Bill 2021: ವಿದ್ಯುತ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ವಿದ್ಯುತ್ ಕಂಪನಿಗಳನ್ನು ಖಾಸಗೀಕರಣ ಮಾಡುತ್ತಿರುವುದನ್ನು ವಿರೋಧಿಸಿ ವಿದ್ಯುತ್ ನೌಕರರು ಆಗಸ್ಟ್ 6ರವರೆಗೆ ಪ್ರತಿಭಟನೆ ನಡೆಸಲಿದ್ದಾರೆ.

TV9kannada Web Team

| Edited By: Sushma Chakre

Aug 03, 2021 | 9:06 PM

ನವದೆಹಲಿ: ವಿದ್ಯುತ್ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಇನ್ನೂ ಮೂರು ದಿನಗಳ ಕಾಲ ದೇಶಾದ್ಯಂತ ವಿದ್ಯುತ್ ವಲಯದ ನೌಕರರು ಮತ್ತು ಇಂಜಿನಿಯರ್​ಗಳು ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದ ಹಲವು ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ. ವಿದ್ಯುತ್ ಖಾಸಗೀಕರಣವನ್ನು ವಿರೋಧಿಸಿ ವಿದ್ಯುತ್ ನೌಕರರು ಇಂದಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಒಟ್ಟು 4 ದಿನಗಳ ಕಾಲ ನಡೆಯುವ ಈ ಪ್ರತಿಭಟನೆಯ ಭಾಗವಾಗಿ ದೆಹಲಿಯ ಜಂತರ್ ಮಂತರ್​ನಲ್ಲಿ ಸತ್ಯಾಗ್ರಹ ನಡೆಯಲಿದೆ. ವಿದ್ಯುತ್ ಕಂಪೆನಿಗಳನ್ನು ಸರ್ಕಾರ ಖಾಸಗೀಕರಣ ಮಾಡಲು ಹೊರಟಿರುವ ಕ್ರಮವನ್ನು ವಿರೋಧಿಸಿ ದೇಶಾದ್ಯಂತ ಈ ಪ್ರತಿಭಟನೆ ನಡೆಯಲಿದೆ.

ದೇಶಕ್ಕೆ ವಿದ್ಯುತ್ ಕಂಪೆನಿಗಳಿಂದ ಆಗಿರುವ ಲಕ್ಷಾಂತರ ಕೋಟಿ ನಷ್ಟವನ್ನು ಹೊಂದಿಸಲು ಕೇಂದ್ರ ಸರ್ಕಾರ ಖಾಸಗೀಕರಣಕ್ಕೆ ಮುಂದಾಗಿದೆ. ಖಾಸಗೀಕರಣದಿಂದ ರೈತರು, ಬಡವರಿಗೆ ತೀವ್ರ ಸಂಕಷ್ಟ ಎದುರಾಗಲಿದೆ. ವಿದ್ಯುತ್ ಕಾಯ್ದೆ ತಿದ್ದುಪಡಿಯಿಂದ ಬಡವರಿಗೆ ಹಾಗೂ ರೈತರಿಗೆ ನೀಡುತ್ತಿರುವ ಭಾಗ್ಯಜ್ಯೋತಿ ಉಚಿತ ಯೋಜನೆಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಈಗಾಗಲೇ ಹಲವು ವಲಯಗಳನ್ನು ಖಾಸಗೀಕರಣ ಮಾಡಿದೆ. ಅದೇ ರೀತಿ ವಿದ್ಯುತ್ ಕಂಪೆನಿಗಳನ್ನು ಖಾಸಗೀಕರಣ ಮಾಡಲು ಮುಂದಾಗಿದೆ. ಇದನ್ನು ವಿರೋಧಿಸಿ ನಡೆಸಲಾಗುತ್ತಿರುವ ಪ್ರತಿಭಟನೆಗೆ ಹಲವು ಸಂಘ-ಸಂಸ್ಥೆಗಳು ಕೂಡ ಬೆಂಬಲ ವ್ಯಕ್ತಪಡಿಸಿವೆ.

ಇಂದು ದೆಹಲಿಯಲ್ಲಿ ನಡೆದ ಸತ್ಯಾಗ್ರಹದಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ರಾಜಸ್ಥಾನ, ಚಂಡೀಗಢ, ದೆಹಲಿಯ ಸಾಕಷ್ಟು ವಿದ್ಯುತ್ ನೌಕರರು ಪಾಲ್ಗೊಂಡಿದ್ದರು. ಇಂದಿನಿಂದ ದೆಹಲಿಯ ಜಂತರ್​ ಮಂತರ್​ನಲ್ಲಿ ಸತ್ಯಾಗ್ರಹ ಆರಂಭವಾಗಿದ್ದು, ಆಗಸ್ಟ್ 6ರವರೆಗೆ ವಿದ್ಯುತ್ ನೌಕರರ ಪ್ರತಿಭಟನೆ ಮುಂದುವರೆಯಲಿದೆ.

ಇದನ್ನೂ ಓದಿ: ಆಫ್ರಿಕನ್ ಪ್ರಜೆ ಸಾವು, ಪ್ರತಿಭಟನೆ ಮಾಡುತ್ತಿದ್ದ ಆಫ್ರಿಕನ್ ಪ್ರಜೆಗಳಿಂದ ಬೆಂಗಳೂರು ಪೊಲೀಸರ ಮೇಲೆ ಹಲ್ಲೆ

Fake Universities: ಕರ್ನಾಟಕದ ಈ ವಿಶ್ವವಿದ್ಯಾಲಯವೇ ಫೇಕ್!; ಭಾರತದ 24 ನಕಲಿ ಯುನಿವರ್ಸಿಟಿಗಳ ಪಟ್ಟಿ ಇಲ್ಲಿದೆ

(Electricity Amendment Bill Power sector employees engineers Begins Protest till August 6)

Follow us on

Most Read Stories

Click on your DTH Provider to Add TV9 Kannada