ಕೇರಳ: ಆರಾಟ್ಟುಪುಳ ಉತ್ಸವದ ವೇಳೆ ಎರಡು ಆನೆಗಳ ಕಾಳಗ

|

Updated on: Mar 24, 2024 | 9:37 AM

ಕೇರಳದ ತ್ರಿಶೂರ್​ನಲ್ಲಿ ನಡೆದ ಆರಾಟ್ಟುಪುಳ ಉತ್ಸವದ ಸಂದರ್ಭದಲ್ಲಿ ಎರಡು ಆನೆಗಳ ನಡುವೆ ಕಾಳಗ ಏರ್ಪಟ್ಟಿತ್ತು, ಈ ಘಟನೆ ಕಾಲ್ತುಳಿತಕ್ಕೂ ಕಾರಣವಾಯಿತು, ರಾತ್ರಿ ಆನೆಗಳ ಮೇಲೆ ದೇವರನ್ನಿಟ್ಟು ಮೆರವಣಿಗೆ ನಡೆಸಲಾಗುತ್ತಿತ್ತು ಈ ವೇಳೆ ಆನೆ ಅಲ್ಲಿದ್ದ ಜನರ ಮೇಲೆ ಮೊದಲ ದಾಳಿ ನಡೆಸಲು ಮುಂದಾಯಿತು ಬಳಿಕ ಮತ್ತೊಂದು ಆನೆಯ ಮೇಲೆ ದಾಳಿ ನಡೆಸಿತು.

ಕೇರಳ: ಆರಾಟ್ಟುಪುಳ ಉತ್ಸವದ ವೇಳೆ ಎರಡು ಆನೆಗಳ ಕಾಳಗ
ಆನೆಗಳ ಕಾಳಗ
Follow us on

ಕೇರಳದ ಆರಾಟ್ಟುಪುಳ ಉತ್ಸವದ ವೇಳೆ ಎರಡು ಆನೆಗಳ ನಡುವೆ ಕಾಳಗ ನಡೆದಿದ್ದು, ಕಾಲ್ತುಳಿತದಿಂದ ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಉತ್ಸವಗಳಲ್ಲಿ ದೇವರನ್ನು ಆನೆಯ ಮೇಲೆ ಕೂರಿಸಿ ಮೆರವಣಿಗೆ ಮಾಡುವುದು ಸಂಪ್ರದಾಯ, ಆನೆಗಳು ಮೆರವಣಿಗೆಯಲ್ಲಿ ಭಾಗಿಯಾಗುತ್ತವೆ. ಈ ಆನೆಗಳ ನೋಡಲೆಂದೇ ಭಕ್ತರು ಅಂದು ದೇವಾಲಯದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.

ಕೆಲವು ಆನೆಗಳು ಮಾವುತನ ಮಾತು ಕೇಳದೆ ನಿಂತು ಬಿಟ್ಟರೆ ಇನ್ನೂ ಕೆಲವು ಆನೆಗಳು ಜನರ ದಂಡು, ಪಟಾಕಿ ಸದ್ದು, ಮೈಕ್ ಶಬ್ಧ, ಗದ್ದಲಗಳಿಗೆ ದಿಕ್ಕಾಪಾಲಾಗಿ ಓಡುತ್ತವೆ. ಅದೇ ರೀತಿಯ ಘಟನೆ ಕೇರಳದ ಜಾತ್ರೆಯಲ್ಲೂ ನಡೆದಿದೆ. ಆರಾಟ್ಟುಪುಳ ದೇವಾಲಯದ ಆಚರಣೆ ವೇಳೆ ಎರಡು ಆನೆಗಳ ನಡುವೆ ನಡೆದ ಕಾಳಗದಲ್ಲಿ ಹಲವರು ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ.

ಶನಿವಾರ ರಾತ್ರಿ 10.30ರ ಸುಮಾರಿಗೆ ಘಟನೆ ನಡೆದಿದೆ, ಘಟನೆಯಲ್ಲಿ ಮೂವರಿಗೆ ಸಣ್ಣ ಗಾಯಗಳಾಗಿವೆ. ಈ ದೇವಾಲಯವನ್ನು 8ನೇ ಶತಮಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಶ್ರೀರಾಮನ ಗುರು ವಶಿಷ್ಠರ ದೈವಿ ಆತ್ಮವು ಈ ದೇವಾಲಯದ ವಿಗ್ರಹಗಳಲ್ಲಿ ನೆಲೆಸಿದೆ ಎನ್ನಲಾಗಿದೆ.

ಆನೆಗಳ ಕಾಳಗದ ವಿಡಿಯೋ

ಎರಡು ಆನೆಗಳಿಗೆ ಅಲಂಕಾರ ಮಾಡಿ ಅವುಗಳ ಮೇಲೆ ದೇವರ ಮೂರ್ತಿ ಇಟ್ಟು ಮೆರವಣಿಗೆ ಹೊರಟಿತ್ತು, ಈ ದೇವಾಲಯದ ಮೆರವಣಿಗೆ ಕಣ್ತುಂಬಿಕೊಳ್ಳಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಆದರೆ ಇದ್ದಕ್ಕಿದ್ದಂತೆ ಆನೆ ಕೆರಳಿತ್ತು, ಅದರ ಮುಂದೆ ಹೋಗುತ್ತಿದ್ದವನ ಮೇಲೆ ದಾಳಿ ಮಾಡಿತ್ತು. ಆತ ತಪ್ಪಿಸಿಕೊಂಡಾಗ ಅಲ್ಲಿದ್ದವರು ಆನೆ ಬಳಿ ಓಡಿದ್ದಾರೆ ಅದರಿಂದ ಮತ್ತಷ್ಟು ಕೆರಳಿದ ಆನೆ ಎಲ್ಲರ ಮೇಲೂ ದಾಳಿಗೆ ಮುಂದಾಗಿತ್ತು.

ಮತ್ತಷ್ಟು ಓದಿ: Viral: ಕೇರಳದ ದೇವಾಲಯಕ್ಕೆ ರೋಬೋ ಆನೆ ಉಡುಗೊರೆ ನೀಡಿದ ನಟಿ ಪ್ರಿಯಾಮಣಿ

ಬಳಿಕ ಎದುರು ಹೋಗುತ್ತಿದ್ದ ಆನೆಯ ಮೇಲೆ ಮತ್ತೊಂದು ಆನೆ ದಾಳಿಗೆ ಮುಂದಾಗಿ ಎರಡೂ ಆನೆಗಳ ನಡುವೆ ಕಾಳಗ ನಡೆಯಿತು. ಆನೆಗಳನ್ನು ಹತೋಟೆಗೆ ತರಲು ಮಾವುತರು ಪರದಾಡಿದ್ದಾರೆ. ಒಂದು ಗಂಟೆಯ ಬಳಿಕ ಆನೆಗಳು ಶಾಂತವಾದವು ಬಳಿಕ ಸರಪಳಿ ಹಾಕಿ ದೇವಸ್ಥಾನಕ್ಕೆ ಕರೆತರಲಾಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ