ಭಯೋತ್ಪಾದಕ ಸಂಘಟನೆಗೆ ಸೇರುವ ಇಚ್ಛೆ ವ್ಯಕ್ತಪಡಿಸಿದ ಐಐಟಿ ಗುವಾಹಟಿ ವಿದ್ಯಾರ್ಥಿಯ ಬಂಧನ

ಐಐಟಿ ಗುವಾಹಟಿಯ ವಿದ್ಯಾರ್ಥಿಯೊಬ್ಬ ತಾನು ಭಯೋತ್ಪಾದಕ ಸಂಘಟನೆಗೆ ಸೇರಲಿದ್ದೇನೆ ಎಂದು ಇ-ಮೇಲ್ ಕಳುಹಿಸಿ ನಾಪತ್ತೆಯಾಗಿದ್ದ, ಇದೀಗ ಪೊಲೀಸರು ಆತನನ್ನು ಪತ್ತೆಹಚ್ಚಿದ್ದು, ವಿಚಾರಣೆ ಆರಂಭಿಸಿದ್ದಾರೆ.

ಭಯೋತ್ಪಾದಕ ಸಂಘಟನೆಗೆ ಸೇರುವ ಇಚ್ಛೆ ವ್ಯಕ್ತಪಡಿಸಿದ ಐಐಟಿ ಗುವಾಹಟಿ ವಿದ್ಯಾರ್ಥಿಯ ಬಂಧನ
ವಿದ್ಯಾರ್ಥಿImage Credit source: India Today
Follow us
|

Updated on: Mar 24, 2024 | 8:33 AM

ಭಯೋತ್ಪಾದಕ ಸಂಘಟನೆಗೆ ಸೇರುವ ಇಚ್ಛೆ ವ್ಯಕ್ತಪಡಿಸಿದ ಐಐಟಿ ಗುವಾಹಟಿಯ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ನಾಲ್ಕನೇ ವರ್ಷದ ವಿದ್ಯಾರ್ಥಿಯೊಬ್ಬ ತಾನು ಭಯೋತ್ಫಾದಕ ಸಂಘಟನೆಗೆ ಸೇರಬೇಕೆಂದುಕೊಂಡಿದ್ದೇನೆ ಶೀಘ್ರವೇ ಈ ಕ್ಯಾಂಪಸ್​ನಿಂದ ಹೊರಗೆ ಹೋಗುತ್ತೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದ. ಇ-ಮೇಲ್ ಸ್ವೀಕರಿಸಿದ ನಂತರ, ನಾವು ವಿಷಯಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಹೋದೆವು ಮತ್ತು ತನಿಖೆಯನ್ನು ಪ್ರಾರಂಭಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಇಮೇಲ್ ಅನ್ನು ವಿದ್ಯಾರ್ಥಿಯೊಬ್ಬ ಕಳುಹಿಸಿದ್ದು, ಅದರಲ್ಲಿ ತಾನು ಐಸಿಸ್‌ಗೆ ಸೇರುವ ಹಾದಿಯಲ್ಲಿದ್ದೇನೆ ಎಂದು ಹೇಳಿಕೊಂಡಿದ್ದಾನೆ ಎಂದು ಅವರು ಹೇಳಿದರು. ನಂತರ, ಐಐಟಿ-ಗುವಾಹಟಿ ಅಧಿಕಾರಿಗಳನ್ನು ತಕ್ಷಣವೇ ಸಂಪರ್ಕಿಸಲಾಯಿತು, ಅವರು ಹೇಳಿದ ವಿದ್ಯಾರ್ಥಿಯು ಮಧ್ಯಾಹ್ನದಿಂದ ಕಾಣೆಯಾಗಿದ್ದಾನೆ ಮತ್ತು ಅವನ ಮೊಬೈಲ್ ಫೋನ್ ಸಹ ಸ್ವಿಚ್ಡ್​ ಆಫ್ ಆಗಿದೆ ಎಂದು ಹೇಳಿದ್ದರು.

ಆತನ ಹುಡುಕಾಟ ತಕ್ಷಣವೇ ಆರಂಭಿಸಿ, ಗುವಾಹಟಿಯಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಹಜೋ ಪ್ರದೇದಲ್ಲಿ ಸಂಜೆ ವೇಳೆಗೆ ಸ್ಥಳೀಯರ ನೆರವಿನಿಂದ ಆತನನ್ನು ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪ್ರಾಥಮಿಕ ವಿಚಾರಣೆಯ ನಂತರ, ಅವರನ್ನು ಎಸ್‌ಟಿಎಫ್ ಕಚೇರಿಗೆ ಕರೆತರಲಾಯಿತು.

ಮತ್ತಷ್ಟು ಓದಿ: ತನ್ನ ಭಯೋತ್ಪಾದಕ ಮಾಗಜಿನ್ ಖುರಾಸನ್​ನಲ್ಲಿ ಭಾರತಕ್ಕೆ ಬೆದರಿಕೆ ಹಾಕಿದ ಐಸಿಸ್

ದೆಹಲಿಯ ಓಖ್ಲಾದಿಂದ ಬಂದಿರುವ ವಿದ್ಯಾರ್ಥಿಯ ಹಾಸ್ಟೆಲ್ ಕೋಣೆಯಲ್ಲಿ ಕಪ್ಪು ಬಾವುಟವಿದ್ದು, ಕೆಲವು ಹಸ್ತಪ್ರತಿಗಳು ಪತ್ತೆಯಾಗಿವೆ.

ನಾವು ವಶಪಡಿಸಿಕೊಂಡ ವಸ್ತುಗಳನ್ನು ಪರಿಶೀಲಿಸುತ್ತಿದ್ದೇವೆ, ಇಮೇಲ್ ಕಳುಹಿಸುವ ಉದ್ದೇಶವನ್ನು ನಾವು ತನಿಖೆ ಮಾಡುತ್ತಿದ್ದೇವೆ. ವಿದ್ಯಾರ್ಥಿಯು ಕೆಲವು ವಿವರಗಳನ್ನು ನೀಡಿದ್ದಾನೆ, ಆದರೆ ನಾವು ಈಗ ಏನನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ