AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Congress 4th candidate list: ಕಾಂಗ್ರೆಸ್ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ; ಮೋದಿ ವಿರುದ್ಧ ಅಜಯ್ ರೈ ಸ್ಪರ್ಧೆ

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆಯಾಗಿದೆ. ಉತ್ತರಪ್ರದೇಶ, ಮಹಾರಾಷ್ಟ್ರ ಸೇರಿದಂತೆ 13 ರಾಜ್ಯಗಳಿಂದ ಕಣಕ್ಕಿಳಿಯುವ 46 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ಪರ್ಧಿಸುತ್ತಿರುವ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಅಜಯ್ ರೈ ಅವರು ಸ್ಪರ್ಧಿಸಲಿದ್ದಾರೆ.

Congress 4th candidate list: ಕಾಂಗ್ರೆಸ್ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ; ಮೋದಿ ವಿರುದ್ಧ ಅಜಯ್ ರೈ ಸ್ಪರ್ಧೆ
ಕಾಂಗ್ರೆಸ್ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ; ಮೋದಿ ವಿರುದ್ಧ ಅಜಯ್ ರೈ ಸ್ಪರ್ಧೆ
ಹರೀಶ್ ಜಿ.ಆರ್​.
| Edited By: |

Updated on:Mar 23, 2024 | 11:12 PM

Share

ನವದೆಹಲಿ, ಮಾ.23: ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ (Congress’ fourth candidate list) ಬಿಡುಗಡೆಯಾಗಿದೆ. ಉತ್ತರಪ್ರದೇಶ, ಮಹಾರಾಷ್ಟ್ರ ಸೇರಿದಂತೆ 13 ರಾಜ್ಯಗಳಿಂದ ಕಣಕ್ಕಿಳಿಯುವ 46 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸ್ಪರ್ಧಿಸುತ್ತಿರುವ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಅಜಯ್ ರೈ (Ajay Rai) ಅವರು ಸ್ಪರ್ಧಿಸಲಿದ್ದಾರೆ.

ಉತ್ತರಪ್ರದೇಶ, ಮಹಾರಾಷ್ಟ್ರ, ಛತ್ತೀಸ್​ಗಢ, ತಮಿಳುನಾಡು, ಮಧ್ಯಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಮಣಿಪುರ, ಜಮ್ಮು-ಕಾಶ್ಮೀರ, ಅಸ್ಸಾಂ, ಅಂಡಮಾನ್​​-ನಿಕೋಬಾರ್, ಮಿಜೋರಾಂನ ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್ ಪಟ್ಟಿ ಬಿಡುಗಡೆಯಾಗಿದೆ.

ಮಧ್ಯಪ್ರದೇಶದ ರಾಜ್ ಗಡ್​ನಲ್ಲಿ ದಿಗ್ವಿಜಯ್ ಸಿಂಗ್ ಸ್ಪರ್ಧೆ ಮಾಡಲಿದ್ದಾರೆ. 2018 – 2019ರಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಶಶಿಕಾಂತ್​​ ಸೇಂಥಿಲ್​ ಅವರಿಗೆ ತಮಿಳುನಾಡಿನ ತಿರುವಳ್ಳೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಅಸ್ಸಾಂನ ಲಿಖಿಂಪುರ ಕ್ಷೇತ್ರದ ಟಿಕೆಟ್ ಉದಯ್ ಶಂಕರ್ ಹಜರಿಕ ಅವರಿಗೆ ಘೋಷಣೆಯಾದರೆ, ಅಂಡಮಾನ್-ನಿಕೋಬರ್ ಐಸ್​ಲ್ಯಾಂಡ್ ಕ್ಷೇತ್ರದ ಟಿಕೆಟ್ ಕುಲದೀಪ್ ರೈ ಶರ್ಮ, ಬಸ್ತರ್ (ಎಸ್​ಟಿ) ಕ್ಷೇತ್ರದ ಟಿಕೆಟ್ ಕವಾಸಿ ಕಖ್ಮ, ಉದಮ್​ಪುರ ಕ್ಷೇತ್ರದ ಟಿಕೆಟ್ ಲಾಲ್ ಸಿಂಗ್, ಜಮ್ಮು ಕ್ಷೇತ್ರದ ಟಿಕೆಟ್ ರಾಮನ್ ಭಳ್ಳ ಅವರಿಗೆ ಘೋಷಣೆಯಾಗಿದೆ.

ಕಾಂಗ್ರೆಸ್ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ

ಇದನ್ನೂ ಓದಿ: ಕರ್ನಾಟಕದ 17 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ, ಸಚಿವರ ಮಕ್ಕಳಿಗೆ ಮಣೆ

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:01 pm, Sat, 23 March 24