ಅಕ್ರಮ ಹಣ ವ್ಯವಹಾರ: ಪತ್ರಕರ್ತೆ ರಾಣಾ ಅಯೂಬ್ ವಿರುದ್ಧ ಜಾರಿ ನಿರ್ದೇಶನಾಲಯ ಆರೋಪ ಪಟ್ಟಿ
ರಾಣಾ ಅಯೂಬ್ ಪರಿಹಾರ ಕಾರ್ಯದ ಹೆಸರಿನಲ್ಲಿ ಆನ್‌ಲೈನ್ ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್ ಕೆಟ್ಟೊ ಮೂಲಕ ಭಾರಿ ಹಣವನ್ನು ಸಂಗ್ರಹಿಸಿದ್ದಾರೆ. ಆದರೆ ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪರಿಹಾರ ಕಾರ್ಯಕ್ಕಾಗಿ ಸಂಗ್ರಹಿಸಿದ ನಿಧಿಯಲ್ಲಿನ ಅಕ್ರಮಗಳ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಪತ್ರಕರ್ತೆ ರಾಣಾ ಅಯೂಬ್ (Rana Ayyub)ವಿರುದ್ಧ ಜಾರಿ ನಿರ್ದೇಶನಾಲಯ (ED) ಗುರುವಾರ ಆರೋಪ ಪಟ್ಟಿ ದಾಖಲಿಸಿದೆ. ಕಳೆದ ವರ್ಷ ಉತ್ತರ ಪ್ರದೇಶ ಪೊಲೀಸರು ದಾಖಲಿಸಿದ ಎಫ್‌ಐಆರ್ ಅನ್ನು ಆಧರಿಸಿ ಇಡಿ ಪ್ರಕರಣ ದಾಖಲಿಸಿದೆ. ರಾಣಾ ಅಯೂಬ್ ಪರಿಹಾರ ಕಾರ್ಯದ ಹೆಸರಿನಲ್ಲಿ ಆನ್‌ಲೈನ್ ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್ ಕೆಟ್ಟೊ ಮೂಲಕ ಭಾರಿ ಹಣವನ್ನು ಸಂಗ್ರಹಿಸಿದ್ದಾರೆ. ಆದರೆ ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿಯಲ್ಲಿ ಏಜೆನ್ಸಿಯು ಅಯೂಬ್‌ಗೆ ಸೇರಿದ 1.77 ಕೋಟಿ ರೂ.ಗಳ ಬ್ಯಾಂಕ್ ಠೇವಣಿಗಳನ್ನು ಮುಟ್ಟುಗೋಲು ಹಾಕಿತ್ತು. ಇಡಿ ಹೊರಡಿಸಿದ ಲುಕ್‌ಔಟ್ ಸುತ್ತೋಲೆಯ ಆಧಾರದ ಮೇಲೆ ಮಾರ್ಚ್‌ನಲ್ಲಿ ಆಕೆ ವಿದೇಶಕ್ಕೆ ಪ್ರಯಾಣಿಸುವುದನ್ನೂ ತಡೆಯಲಾಗಿತ್ತು. ಸಂಪೂರ್ಣ ಪೂರ್ವ ಯೋಜಿತ ಮತ್ತು ವ್ಯವಸ್ಥಿತ ರೀತಿಯಲ್ಲಿ ದಾನದ ಹೆಸರಿನಲ್ಲಿ ಹಣವನ್ನು ಸಂಗ್ರಹಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ನಡೆಸಿದ ತನಿಖೆಗಳಿಂದ ತಿಳಿದು ಬಂದಿದೆ. ಆದಾಗ್ಯೂ ಹಣವನ್ನು ಸಂಗ್ರಹಿಸಲಾದ ಉದ್ದೇಶಕ್ಕಾಗಿ ಅದನ್ನು ಸಂಪೂರ್ಣವಾಗಿ ಬಳಸಲಾಗಿಲ್ಲ ಎಂದು ಇಡಿ ಹೇಳಿದೆ.
ಇಡಿ ಪ್ರಕಾರ, ಅದರ ತನಿಖೆಗಳು ಪರಿಹಾರ ಕಾರ್ಯಕ್ಕಾಗಿ ಹಣವನ್ನು ಬಳಸಿಕೊಳ್ಳುವ ಬದಲು ಪ್ರತ್ಯೇಕ ಚಾಲ್ತಿ ಬ್ಯಾಂಕ್ ಖಾತೆಯನ್ನು ತೆರೆಯುವ ಮೂಲಕ ಅದರಲ್ಲಿ ಕೆಲವು ಮೊತ್ತ ಇಟ್ಟಿದ್ದಾರೆ. ರಾಣಾ ಅಯೂಬ್ 50 ಲಕ್ಷ ರೂ.ಗಳ ಸ್ಥಿರ ಠೇವಣಿಯನ್ನೂ ರಚಿಸಿದ್ದಾರೆ. ಕೆಟ್ಟೋದಲ್ಲಿ ಸಂಗ್ರಹಿಸಿದ ನಿಧಿಯಿಂದ ಪರಿಹಾರ ಕಾರ್ಯಗಳಿಗೆ ಹಣ ಬಳಸಲಿಲ್ಲ. ಅವರು ಪಿಎಂ ಕೇರ್ಸ್ ನಿಧಿ ಮತ್ತು ಸಿಎಂ ಪರಿಹಾರ ನಿಧಿಯಲ್ಲಿ ಒಟ್ಟು 74.50 ಲಕ್ಷ ರೂ.ಗಳನ್ನು ಠೇವಣಿ ಮಾಡಿದ್ದಾರೆ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.
“ಅದಕ್ಕೆ ಅನುಗುಣವಾಗಿ, ತನಿಖೆಯ ಹಂತದಲ್ಲಿ, ಅಪರಾಧದ ಆದಾಯವನ್ನು ರೂ.1,77,27,704/ ಮತ್ತು ಎಫ್ ಡಿಯ ಮೇಲೆ ಉತ್ಪತ್ತಿಯಾಗುವ ಬಡ್ಡಿ ರೂ. 50 ಲಕ್ಷ ಎಂದು ಹೇಳಿಕೆ ತಿಳಿಸಿದೆ. ಇಡಿ ಲಗತ್ತಿಸಿದ ಹಣವು ಮೂರು ವಿಭಿನ್ನ ಬ್ಯಾಂಕ್ ಖಾತೆಗಳಲ್ಲಿ ಬ್ಯಾಂಕ್ ಠೇವಣಿಗಳ ರೂಪದಲ್ಲಿದೆ.
ವಿಕಾಸ್ ಸಾಂಕೃತ್ಯಾಯನ್ ಅವರ ದೂರಿನ ಆಧಾರದ ಮೇಲೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಗಾಜಿಯಾಬಾದ್‌ನ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ಅಯೂಬ್ ವಿರುದ್ಧ ಯುಪಿ ಪೊಲೀಸ್ ಎಫ್‌ಐಆರ್ ದಾಖಲಾಗಿತ್ತು. ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಐಟಿ ಕಾಯ್ದೆಯ ಸೆಕ್ಷನ್‌ಗಳ ಹೊರತಾಗಿ, ದಾನದ ಹೆಸರಿನಲ್ಲಿ ಸಾರ್ವಜನಿಕರಿಂದ ಅಕ್ರಮವಾಗಿ ಹಣವನ್ನು ಸಂಪಾದಿಸಿದ್ದಾರೆ ಎಂದು ಆರೋಪಿಸಿ ಕಪ್ಪುಹಣ ಕಾಯ್ದೆಯ ಸೆಕ್ಷನ್ 4 ಅಡಿಯಲ್ಲೂ ರಾಣಾ ವಿರುದ್ಧ ಕೇಸು ದಾಖಲಿಸಲಾಗಿದೆ.
ಇಡಿ ಪ್ರಕಾರ, ಎಫ್‌ಐಆರ್‌ನಲ್ಲಿ ಅಯೂಬ್ ಅವರು 2020ರ ಏಪ್ರಿಲ್-ಮೇ ಅವಧಿಯಲ್ಲಿ ಕೊಳೆಗೇರಿ ನಿವಾಸಿಗಳು ಮತ್ತು ರೈತರಿಗೆ ಮೂರು ಅಭಿಯಾನಗಳಲ್ಲಿ ಕೆಟ್ಟೊ ಮೂಲಕ ಕೋಟಿಗಟ್ಟಲೆ ರೂಪಾಯಿಗಳ ಬೃಹತ್ ಮೊತ್ತವನ್ನು ಸಂಗ್ರಹಿಸಿದ್ದಾರೆ. ಜೂನ್‌ನಿಂದ ಸೆಪ್ಟೆಂಬರ್ 2020 ರವರೆಗೆ ಅಸ್ಸಾಂ, ಬಿಹಾರ ಮತ್ತು ಮಹಾರಾಷ್ಟ್ರಗಳಿಗೆ ಪರಿಹಾರ ಕಾರ್ಯಗಳು ಮತ್ತು ಮೇ-ಜೂನ್ 2021 ರ ಅವಧಿಯಲ್ಲಿ ಭಾರತದಲ್ಲಿ ಕೋವಿಡ್-19 ಬಾಧಿತ ಜನರಿಗೆ ಸಹಾಯ ಮಾಡುವುದಕ್ಕಾಗಿ ಈ ನಿಧಿ ಸಂಗ್ರಹಣೆ ಮಾಡಲಾಗಿತ್ತು.
ರಾಣಾ ಅಯ್ಯುಬ್ ಅವರು ಕೆಟ್ಟೊದಲ್ಲಿ ಒಟ್ಟು ಮೊತ್ತ ರೂ. 2,69,44,680/-ಗಳನ್ನು ಸಂಗ್ರಹಿಸಿದ್ದರು. ಈ ಹಣವನ್ನು ಆಕೆಯ ಸಹೋದರಿ/ತಂದೆಯ ಬ್ಯಾಂಕ್ ಖಾತೆಗಳಿಂದ ಹಿಂಪಡೆಯಲಾಗಿದೆ. ಈ ಮೊತ್ತದಲ್ಲಿ ರೂ.72,01,786/- ಅನ್ನು ಆಕೆಯ ಸ್ವಂತ ಬ್ಯಾಂಕ್ ಖಾತೆಯಲ್ಲಿ ಹಿಂಪಡೆಯಲಾಗಿದೆ, ರೂ. 37,15,072/- ಆಕೆಯ ಸಹೋದರಿ ಇಫ್ಫತ್ ಶೇಖ್ ಖಾತೆಯಲ್ಲಿ ಮತ್ತು ರೂ 1,60,27,822/- ಆಕೆಯ ತಂದೆ ಮೊಹಮ್ಮದ್ ಅಯ್ಯೂಬ್ ವಕಿಫ್ ಅವರ ಬ್ಯಾಂಕ್ ಖಾತೆಯಲ್ಲಿ ಹಿಂಪಡೆಯಲಾಗಿದೆ. . ಆಕೆಯ ಸಹೋದರಿ ಮತ್ತು ತಂದೆಯ ಖಾತೆಗಳಿಂದ ಈ ಎಲ್ಲಾ ಹಣವನ್ನು ನಂತರ ಆಕೆಯ ಸ್ವಂತ ಖಾತೆಗೆ ವರ್ಗಾಯಿಸಲಾಗಿತ್ತು ಎಂದು ಇಡಿ ಹೇಳಿಕೆ ತಿಳಿಸಿದೆ.
31,16,770 ಮೊತ್ತ ವೆಚ್ಚದ ಮಾಹಿತಿ ಮತ್ತು ದಾಖಲೆಗಳನ್ನು ಅಯೂಬ್ ಸಲ್ಲಿಸಿದ್ದಾರೆ. “ಆದಾಗ್ಯೂ, ಕ್ಲೈಮ್ ಮಾಡಿದ ವೆಚ್ಚಗಳ ಪರಿಶೀಲನೆಯ ನಂತರ, ವಾಸ್ತವಿಕ ವೆಚ್ಚಗಳು ರೂ. 17,66,970/. ಪರಿಹಾರ ಕಾರ್ಯದ ವೆಚ್ಚವನ್ನು ಪಡೆಯಲು ಕೆಲವು ಘಟಕಗಳಲ್ಲಿ ರಾಣಾ ಅಯೂಬ್ ಅವರು ನಕಲಿ ಬಿಲ್‌ಗಳನ್ನು ಸಿದ್ಧಪಡಿಸಿದ್ದಾರೆ ಎಂದು ಕಂಡುಬಂದಿದೆ. ವಿಮಾನದಲ್ಲಿ ವೈಯಕ್ತಿಕ ಪ್ರಯಾಣಕ್ಕಾಗಿ ಮಾಡಿದ ವೆಚ್ಚವನ್ನು ಪರಿಹಾರ ಕಾರ್ಯಗಳಿಗೆ ವೆಚ್ಚವೆಂದು ಹೇಳಲಾಗಿದೆ ಎಂದು ಅದು ಹೇಳಿದೆ.
Published On - 5:22 pm, Thu, 13 October 22