ದೆಹಲಿ: ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆಯ (ISRO) ಭೂಮಿಯ ಅವಲೋಕನ ಉಪಗ್ರಹ ಇಒಎಸ್-3 (EOS-3) ಇಂದು (ಆಗಸ್ಟ್ 12) ಬೆಳಿಗ್ಗೆ 5.45ಕ್ಕೆ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಉಡಾವಣೆಯಾಗಿತ್ತು. ಆದರೆ ಉಪಗ್ರಹ ಕಕ್ಷೆಗೆ ತಲುಪುವಲ್ಲಿ ವಿಫಲವಾಗಿದೆ. ಕ್ರಯೋಜನಿಕ್ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ ವಿಫಲವಾಗಿದೆ ಎಂದು ತಿಳಿದುಬಂದಿದೆ. ಉಪಗ್ರಹ 2020ರ ಮಾರ್ಚ್ನಲ್ಲಿ ಉಡಾವಣೆಯಾಗಬೇಕಿತ್ತು. ಆದರೆ ತಾಂತ್ರಿಕ ದೋಷ ಹಿನ್ನೆಲೆ ಕೊನೆಯ ಕ್ಷಣದಲ್ಲಿ ರದ್ದಾಗಿತ್ತು.
ಬೆಳಿಗ್ಗೆ 5.45ಕ್ಕೆ ಇಒಎಸ್-3 ಉಪಗ್ರಹ ಉಡಾವಣೆಯಾಗಿತ್ತು. ಆದರೆ ಕಕ್ಷೆಗೆ ತಲುಪುವಲ್ಲಿ ಇಒಎಸ್-3 ವಿಫಲವಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್ಎಲ್ವಿ- ಎಫ್ 10 (GSLV-F10) ಮೂಲಕ ಉಪಗ್ರಹ ಉಡಾವಣೆಯಾಗಿತ್ತು.
ಇಒಎಸ್-3 ಉಪಗ್ರಹವು ಪ್ರವಾಹ, ಚಂಡಮಾರುತ ಸೇರಿ ಪ್ರಾಕೃತಿಕ ವಿಕೋಪಗಳನ್ನು ಮುಂದಾಗಿ ಗ್ರಹಿಸಲಿತ್ತು. ಇದನ್ನು ಜಿಯೋಸಿಂಕ್ರೋನಸ್ ಸೆಟಲೈಟ್ ಲಾಂಚ್ ವೆಹಿಕಲ್-ಎಫ್10 ಮೂಲಕ ಎಸ್‌ಡಿಎಸ್‌ಸಿಯ 2ನೇ ಲಾಂಚ್‌ಪ್ಯಾಡ್‌ನಿಂದ ಹೊತ್ತೊಯ್ದಿತ್ತು. ಆದರೆ ಕ್ರಯೋಜನಿಕ್ ಯಂತ್ರದಲ್ಲಿ ತಾಂತ್ರಿಕ ದೋಷದ ಹಿನ್ನೆಲೆ ಕಕ್ಷೆಗೆ ತಲುಪುವಲ್ಲಿ ವಿಫಲವಾಗಿದೆ.
ಇದನ್ನೂ ಓದಿ
EOS-03: ಭೂಚಲನೆ ಅವಲೋಕಿಸುವ ಇಒಎಸ್-03 ಯಶಸ್ವಿ ಉಡಾವಣೆ, ಫೋಟೋ ಹಂಚಿಕೊಂಡ ಇಸ್ರೋ
ಚಂದ್ರಯಾನ -2ರ ನಂತರ ಆಗಸ್ಟ್ 12ರಂದು ಇಒಎಸ್3 ಉಪಗ್ರಹ ಉಡಾವಣೆ ಮಾಡಲಿದೆ ಇಸ್ರೊ
(EOS-3 failed again to reach satellite orbit)
Published On - 8:35 am, Thu, 12 August 21