ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಪ್ರಕರಣ: ಮಹಿಳೆಯರ ರಕ್ಷಣೆಗಾಗಿ ರಾಷ್ಟ್ರೀಯ ಏಜೆನ್ಸಿ ಸ್ಥಾಪಿಸಿ: ಸದ್ಗುರು
ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ 31 ವರ್ಷದ ಸ್ನಾತಕೋತ್ತರ ತರಬೇತಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿದಂತೆ ಸದ್ಗುರು ಸರ್ಕಾರಕ್ಕೆ ಒಂದು ಮಹತ್ವ ಸಲಹೆಯನ್ನು ನೀಡಿದ್ದಾರೆ. ಈ ಮೂಲಕ ಮಹಿಳೆಯರ ರಕ್ಷಣೆಯಾಗಬೇಕಿದೆ. ಸಂತೋಷ, ಶಾಂತಿ ಮತ್ತು ಸಮತೋಲನ, ಮಾನವೀಯತೆ ಉಳಿಯಬೇಕಾದರೆ ಮೊದಲು ಭಾರತ ಮಹಾಭಾರತವಾಗಬೇಕು. ಅದಕ್ಕಾಗಿ ಸರ್ಕಾರ ಮೊದಲು ಮಹಿಳೆಯರ ರಕ್ಷಣೆ ಮಾಡಬೇಕು.
ಭಾರತವನ್ನು ಬೆಚ್ಚಿಬೀಳಿಸಿದ ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ 31 ವರ್ಷದ ಸ್ನಾತಕೋತ್ತರ ತರಬೇತಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿದಂತೆ ರಾಷ್ಟ್ರವ್ಯಾಪಿ ಪ್ರತಿಭಟನೆ, ಮುಷ್ಕರ, ಆಕ್ರೋಶ ಎಲ್ಲವು ವ್ಯಕ್ತವಾಗಿದೆ. ಇದರ ನಡುವೆ ಇಶಾ ಫೌಂಡೇಶನ್‌ನ ಸಂಸ್ಥಾಪಕರು ಸದ್ಗುರು ಸರ್ಕಾರಕ್ಕೆ ಒಂದು ಮಹತ್ವ ಸಲಹೆಯನ್ನು ನೀಡಿದ್ದಾರೆ. ಭಾರತದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚುತ್ತಿದೆ. ಅದನ್ನು ತಡೆಯಲು ರಾಷ್ಟ್ರೀಯ ಏಜೆನ್ಸಿಗಳನ್ನು ಸ್ಥಾಪಿಸುವಂತೆ ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಅವರು ಇಂತಹ ಘೋರ ಅಪರಾಧಗಳನ್ನು ರಾಜ್ಯ ಮಾತ್ರವಲ್ಲ, ರಾಷ್ಟ್ರೀಯ ಏಜೆನ್ಸಿಗಳು ಪರಿಹರಿಸಬೇಕು .ಈ ದೇಶದಲ್ಲಿ ಮಹಿಳೆಯರ ವಿರುದ್ಧದ ಅತ್ಯಂತ ಭೀಕರ ಕೃತ್ಯಗಳು ನಡೆಯುತ್ತಿದೆ. ಇದನ್ನು ಪರಿಹಾರ ಮಾಡಲು ಸರ್ಕಾರ ರಾಜ್ಯದಲ್ಲಿ ಮಾತ್ರವಲ್ಲ ಮಹಿಳೆಯರಿಗಾಗಿ ರಾಷ್ಟ್ರೀಯ ಏಜೆನ್ಸಿಗಳು ಬೇಕು ಎಂದು ಹೇಳಿದ್ದಾರೆ. ಇಂತಹ ಕ್ರೂರ ಕೃತ್ಯಗಳು ನಡೆದಾಗ ಯಾವ ಪ್ರಜೆಯು ಸುಮ್ಮನಿರುವುದಿಲ್ಲ. ಅದಕ್ಕಾಗಿ ಇಂತಹ ಕ್ರೂರತೆಯನ್ನು ತಡೆಯಲು ಮೊದಲು ಸರ್ಕಾರಗಳು ಏಜೆನ್ಸಿಗಳನ್ನು ಸ್ಥಾಪನೆ ಮಾಡಬೇಕು ಎಂದು ಹೇಳಿದ್ದಾರೆ.
It is time that there is a National agency to address the most horrific crimes against Women in this country, beyond state agencies, as what is happening right now is a cruel joke on the Nation. No citizen with a beating heart in Bharat can just watch this go by. Action Now! -Sg… https://t.co/CwRqMso7Bu
— Sadhguru (@SadhguruJV) August 16, 2024
ಈ ಘಟನೆಯ ನಂತರ ಅನೇಕರು ಸ್ವಾತಂತ್ರ ದಿನಾಚರಣೆಯಂದು, ಪ್ರತಿಭಟನೆ, ಆ ಹೆಣ್ಣು ಮಗಳ ಫೋಟೋಗಳನ್ನು ಹಾಕಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದ್ದಾರೆ. ಭಾರತ ಪ್ರಜಾಪ್ರಭುತ್ವ ರಾಷ್ಟ್ರ ಅಲ್ಲಿ ಎಲ್ಲರನ್ನೂ ರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ, ಅದರಲ್ಲೂ ಮಹಿಳೆಗೆ ಭಾರತದಲ್ಲಿ ಮಾತೃ ಸ್ಥಾನಮಾನ ಇದೆ. ಸ್ವಾತಂತ್ರ್ಯ ಸಿಕ್ಕ ದಿನವೇ ಈ ರೀತಿಯ ಕೃತ್ಯ ನಡೆದಿರುವುದು ತುಂಬಾ ನೋವು ಉಂಟು ಮಾಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೊಲ್ಕತ್ತಾ ವೈದ್ಯೆಯ ಅತ್ಯಾಚಾರ, ಕೊಲೆ ಕೇಸ್; ಮಮತಾ ಬ್ಯಾನರ್ಜಿ ರಾಜೀನಾಮೆಗೆ ಬಿಜೆಪಿ ಆಗ್ರಹ
ಎಕ್ಸ್ನಲ್ಲಿ ಸದ್ಗುರು ಟ್ವೀಟ್
When we say Bharat, it is not a culture of absolutism, of you versus me, this is a culture of inclusiveness. Inclusiveness is the need of the hour. On the level of the individual, it is only through inclusion that we can experience joy, peace and balance. It is important we… pic.twitter.com/fu5ni3GP1S
— Sadhguru (@SadhguruJV) August 15, 2024
ನಾವು ಭಾರತ ಎಂದು ಹೇಳಿದಾಗ, ಇದು ನಿರಂಕುಶವಾದದ ಸಂಸ್ಕೃತಿಯಲ್ಲ, ಭಾರತದ ಸಂಸ್ಕೃತಿ ಇದು ಎಲ್ಲರನ್ನೂ ಒಳಗೊಳ್ಳುವ ಸಂಸ್ಕೃತಿಯಾಗಿದೆ. ಈ ಒಳಗೊಳ್ಳುವಿಕೆ ಈಗಿನ ಕಾಲಕ್ಕೆ ಅಗತ್ಯವಾಗಿದೆ. ವ್ಯಕ್ತಿಯ ಮಟ್ಟದಲ್ಲಿ ಈ ವಿಚಾರಗಳು ಬೆಳೆಯಬೇಕು ಹಾಗೂ ಸಂತೋಷ, ಶಾಂತಿ ಮತ್ತು ಸಮತೋಲನ, ಮಾನವೀಯತೆ ಉಳಿಯಬೇಕಾದರೆ ಮೊದಲು ಭಾರತ ಮಹಾಭಾರತವಾಗಬೇಕು ಎಂದು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:21 pm, Sat, 17 August 24