Kolkata rape-murder: ಕೋಲ್ಕತ್ತಾದಲ್ಲಿ ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣ: ಆರ್‌ಜಿ ಕರ್ ಆಸ್ಪತ್ರೆ ತಲುಪಿದ ಸಿಬಿಐ ತಂಡ

ಮುಷ್ಕರದಿಂದಾಗಿ ಸರ್ಕಾರಿ ಸ್ವಾಮ್ಯದ ಎಸ್‌ಎಸ್‌ಕೆಎಂ ಆಸ್ಪತ್ರೆ, ಸಂಭುನಾಥ್ ಪಂಡಿತ್ ಆಸ್ಪತ್ರೆ ಮತ್ತು ಕಲ್ಕತ್ತಾ ರಾಷ್ಟ್ರೀಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಅನಿವಾರ್ಯವಲ್ಲದ ಆರೋಗ್ಯ ಸೇವೆಗಳ ಮೇಲೆಯೂ ಇದು ಪರಿಣಾಮ ಬೀರಿದೆ. ರಾಜ್ಯದ ಖಾಸಗಿ ಆರೋಗ್ಯ ಕೇಂದ್ರಗಳಲ್ಲೂ ಇದೇ ದೃಶ್ಯ ಕಂಡುಬಂತು.

Kolkata rape-murder: ಕೋಲ್ಕತ್ತಾದಲ್ಲಿ ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣ: ಆರ್‌ಜಿ ಕರ್ ಆಸ್ಪತ್ರೆ ತಲುಪಿದ ಸಿಬಿಐ ತಂಡ
ವೈದ್ಯರ ಪ್ರತಿಭಟನೆ
Follow us
|

Updated on:Aug 17, 2024 | 2:05 PM

ಕೋಲ್ಕತ್ತಾ ಆಗಸ್ಟ್  17:  ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (Kolkata’s RG Kar Medical College and Hospital) ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ಪ್ರತಿಭಟಿಸಲು ಭಾರತೀಯ ವೈದ್ಯಕೀಯ ಸಂಘ (IMA) ರಾಷ್ಟ್ರವ್ಯಾಪಿ ಮುಷ್ಕರ ನಡೆಸುತ್ತಿದೆ. ವೈದ್ಯರು ಮುಷ್ಕರ ನಿರತರಾಗಿರುವ ಕಾರಣ ಶನಿವಾರ ಪಶ್ಚಿಮ ಬಂಗಾಳದಾದ್ಯಂತ (West Bengal) ಆರೋಗ್ಯ ಸೇವೆಗಳು ಸ್ಥಗಿತಗೊಂಡಿದ್ದು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗಗಳಲ್ಲಿನ ಸೇವೆಗಳ ಮೇಲೆಯೂ ಇದು ಪರಿಣಾಮ ಬೀರಿದೆ.  “ನಮ್ಮ ಆಂದೋಲನ ಮುಂದುವರಿಯುತ್ತದೆ. ನಮ್ಮ ಬೇಡಿಕೆಗಳನ್ನು ಈಡೇರಿಸಲು ಇದೊಂದೇ ದಾರಿ. ಪೊಲೀಸರು ಇದ್ದಾಗಲೂ ಜನರು ಆಸ್ಪತ್ರೆಯೊಳಗೆ ನುಗ್ಗಿ ನಮ್ಮ ಮೇಲೆ ಹೇಗೆ ದಾಳಿ ಮಾಡುತ್ತಾರೆ? ವಿಧ್ವಂಸಕ ಕೃತ್ಯದ ನಿಜವಾದ ಉದ್ದೇಶವನ್ನು ನಾವು ಅರ್ಥಮಾಡಿಕೊಳ್ಳಬಹುದು” ಎಂದು ಪ್ರತಿಭಟನಾನಿರತ ವೈದ್ಯರು ಹೇಳಿದ್ದಾರೆ.

ಮುಷ್ಕರದಿಂದಾಗಿ ಸರ್ಕಾರಿ ಸ್ವಾಮ್ಯದ ಎಸ್‌ಎಸ್‌ಕೆಎಂ ಆಸ್ಪತ್ರೆ, ಸಂಭುನಾಥ್ ಪಂಡಿತ್ ಆಸ್ಪತ್ರೆ ಮತ್ತು ಕಲ್ಕತ್ತಾ ರಾಷ್ಟ್ರೀಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಅನಿವಾರ್ಯವಲ್ಲದ ಆರೋಗ್ಯ ಸೇವೆಗಳ ಮೇಲೆಯೂ ಇದು ಪರಿಣಾಮ ಬೀರಿದೆ. ರಾಜ್ಯದ ಖಾಸಗಿ ಆರೋಗ್ಯ ಕೇಂದ್ರಗಳಲ್ಲೂ ಇದೇ ದೃಶ್ಯ ಕಂಡುಬಂತು.

ಆರ್‌ಜಿ ಕರ್ ಆಸ್ಪತ್ರೆ ತಲುಪಿದ ಸಿಬಿಐ ತಂಡ

ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ತನಿಖೆಗಾಗಿ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (CBI) ತಂಡವು ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಆಗಮಿಸಿದೆ.

ಆರ್ ಜಿ ಕರ್ ಆಸ್ಪತ್ರೆಯ ಮಾಜಿ ಪ್ರಾಂಶುಪಾಲರು ಎರಡನೇ ದಿನ ಸಿಬಿಐ ಮುಂದೆ ಹಾಜರು

ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ ಸಂದೀಪ್ ಘೋಷ್ ಅವರು ಸತತ ಎರಡನೇ ದಿನವೂ ಸಿಬಿಐ ಮುಂದೆ ಶನಿವಾರ ವಿಚಾರಣೆಗೆ ಹಾಜರಾಗಿದ್ದಾರೆ. ಶುಕ್ರವಾರ, ಸಿಬಿಐ ಘೋಷ್ ಅವರನ್ನು ವಿಚಾರಣೆಗೆ ಕರೆದೊಯ್ಯಿತು, ಇದು ಶನಿವಾರ ಮುಂಜಾನೆ 3 ಗಂಟೆಯವರೆಗೆ ನಡೆಯಿತು. ವಿಚಾರಣೆ ಪ್ರಾರಂಭವಾಗುವ ಮೊದಲು ಅವರನ್ನು ರಾತ್ರಿ 9.30 ರವರೆಗೆ ಸಿಜಿಒ ಕಾಂಪ್ಲೆಕ್ಸ್‌ನಲ್ಲಿರುವ ಸಿಬಿಐ ನಗರದ ಕಚೇರಿಯಲ್ಲಿ ಇರಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘೋಷ್ ತನ್ನ ಎರಡನೇ ಸುತ್ತಿನ ಪರೀಕ್ಷೆಗಾಗಿ ಶನಿವಾರ ಬೆಳಗ್ಗೆ 10:30 ಕ್ಕೆ ಸ್ವಲ್ಪ ಮೊದಲು ಸಿಬಿಐ ಕಚೇರಿಗೆ ತಲುಪಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್  ವರದಿ ಮಾಡಿದೆ.

ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಯು ರಾಷ್ಟ್ರೀಯ ವಿಷಯ: ಕಿರಣ್ ರಿಜಿಜು

ಕೋಲ್ಕತ್ತಾದಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ರಾಷ್ಟ್ರವ್ಯಾಪಿ ಕಳವಳ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಯು ಕೇವಲ ಸ್ಥಳೀಯ ಸಮಸ್ಯೆಯಲ್ಲ. ಇದು ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯವಾಗಿದೆ. ಪಶ್ಚಿಮ ಬಂಗಾಳದಲ್ಲಿ ನಡೆದ ಈ ಘಟನೆಯು ವೈದ್ಯರು ಮತ್ತು ದಾದಿಯರಿಗೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಭದ್ರತೆಯ ಬಗ್ಗೆ ಗಂಭೀರ ಕಳವಳವನ್ನು ಉಂಟುಮಾಡಿದೆ ಎಂದು ರಿಜಿಜು ಹೇಳಿದ್ದಾರೆ.

ಸಿಬಿಐ ತನಿಖೆಯಲ್ಲಿ ನಂಬಿಕೆ ಇಡಿ: ಸುಕಾಂತ ಮಜುಂದಾರ್

ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ಮೇಲೆ ವಿಶ್ವಾಸವಿಡುವಂತೆ ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಸುಕಾಂತ ಮಜುಂದಾರ್ ಶನಿವಾರ ಒತ್ತಾಯಿಸಿದ್ದಾರೆ. ಸಿಬಿಐ ತನಿಖೆಯನ್ನು ನಿರ್ವಹಿಸುತ್ತಿದೆ ಮತ್ತು ಅದರ ಸಂಪೂರ್ಣ ತನಿಖೆ ನಡೆಸುವ ಸಾಮರ್ಥ್ಯದ ಮೇಲೆ ನಮಗೆ ನಂಬಿಕೆ ಇರಬೇಕು. ಆದಾಗ್ಯೂ, ಸಾಕ್ಷ್ಯವನ್ನು ಸಂರಕ್ಷಿಸಲು ಅಪರಾಧದ ಸ್ಥಳವು ಯಾರು ಮುಟ್ಟದಂತೆಉಳಿಯುವುದು ನಿರ್ಣಾಯಕವಾಗಿದೆ. ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ, ಜೈವಿಕ ಸಾಕ್ಷ್ಯವು ನಿರ್ಣಾಯಕವಾಗಿದೆ ಮತ ಅದರ ಸಮಗ್ರತೆಯನ್ನು ಕಾಪಾಡಿಕೊಳ್ಳಬೇಕು ಎಂದು ಮಜುಂದಾರ್ ಹೇಳಿದರು.

ಇದನ್ನೂ ಓದಿ: ಮದರಸಾಗಳಲ್ಲಿ ಮುಸ್ಲಿಂ ಅಲ್ಲದ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಿದರೆ ಕಠಿಣ ಕ್ರಮ: ಮಧ್ಯ ಪ್ರದೇಶ ಸರ್ಕಾರ

ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಗಾರ್ಡ್‌ಗಳಿಲ್ಲ, ಶೌಚಾಲಯಗಳಿಲ್ಲ: ಎನ್‌ಸಿಡಬ್ಲ್ಯು

31 ವರ್ಷದ ಟ್ರೈನಿ ಮಹಿಳಾ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆಯಾದ RG ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸೈಟ್ ಅನ್ನು ಹಠಾತ್ ನವೀಕರಣಕ್ಕೆ ಒಳಪಡಿಸಲಾಗಿದೆ, ಇದು ಸಾಕ್ಷ್ಯಾಧಾರಗಳನ್ನು ಹಾಳುಮಾಡಲು ಕಾರಣವಾಗಬಹುದು ಎಂದು ರಾಷ್ಟ್ರೀಯ ಮಹಿಳಾ ಆಯೋಗ (NCW) ಆರೋಪಿಸಿದೆ. ಎನ್‌ಸಿಡಬ್ಲ್ಯೂ ವರದಿಯು ಅಪರಾಧದ ಸ್ಥಳವನ್ನು ಕೋಲ್ಕತ್ತಾ ಪೊಲೀಸರು ತಕ್ಷಣವೇ ಸೀಲ್ ಮಾಡಬೇಕಿತ್ತು ಎಂದು ಹೇಳಿದೆ. ಏತನ್ಮಧ್ಯೆ ,ಎನ್‌ಸಿಡಬ್ಲ್ಯೂ ತನಿಖೆಯು ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ 31 ವರ್ಷದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಸುತ್ತಲಿನ ಭದ್ರತೆ, ಮೂಲಸೌಕರ್ಯ ಮತ್ತು ತನಿಖೆಯಲ್ಲಿ ಲೋಪವಾಗಿದೆ ಎಂದು ಕಂಡುಹಿಡಿದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:01 pm, Sat, 17 August 24