Himachal Pradesh Cloudburst: ಹಿಮಾಚಲದಲ್ಲಿ ಮೇಘಸ್ಫೋಟದಿಂದ 58 ರಸ್ತೆಗಳು ಬಂದ್; ಆಗಸ್ಟ್ 20ರವರೆಗೆ ಭಾರೀ ಮಳೆ
ಹಿಮಾಚಲ ಪ್ರದೇಶದ ಮಳೆ ಹೆಚ್ಚಾಗಿದ್ದು, ಚಂಬಾ, ಕಂಗ್ರಾ, ಶಿಮ್ಲಾ ಮತ್ತು ಸಿರ್ಮೌರ್ ಜಿಲ್ಲೆಗಳ ಭಾಗಗಳಲ್ಲಿ ಪ್ರವಾಹದ ಅಪಾಯದ ಬಗ್ಗೆ ಹವಾಮಾನ ಕಚೇರಿ ಎಚ್ಚರಿಕೆ ನೀಡಿದೆ. ತೋಟಗಳು, ಬೆಳೆಗಳು, ಕಚ್ಚಾ ಮನೆಗಳಿಗೆ ಹಾನಿಯಾಗುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದೆ.
ಶಿಮ್ಲಾ: ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶುಕ್ರವಾರ ಶಿಮ್ಲಾ ಜಿಲ್ಲೆಯ ರಾಮ್‌ಪುರ ಉಪವಿಭಾಗದ ತಕ್ಲೋಚ್ ಪ್ರದೇಶದಲ್ಲಿ ತಾಜಾ ಮೇಘಸ್ಫೋಟ ಮುಂದುವರೆದಿದೆ. ಮೇಘಸ್ಪೋಟದಿಂದ 30 ಮೀಟರ್ ರಸ್ತೆ ಹಾನಿಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಹಿಮಾಚಲ ಪ್ರದೇಶದ 12 ಜಿಲ್ಲೆಗಳ ಪೈಕಿ 10 ಜಿಲ್ಲೆಗಳಲ್ಲಿ ಆಗಸ್ಟ್ 20ರವರೆಗೆ ಭಾರೀ ಮಳೆಯ ಕುರಿತು ಭಾರತೀಯ ಹವಾಮಾನ ಇಲಾಖೆ ‘ಹಳದಿ’ ಅಲರ್ಟ್ ನೀಡಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಿಂದಾಗಿ 58 ರಸ್ತೆಗಳನ್ನು ಬಂದ್ ಮಾಡಲಾಗಿದೆ.
ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ನೇತೃತ್ವದ ತಂಡವು ಪರಿಸ್ಥಿತಿಯನ್ನು ಅವಲೋಕಿಸಲು ಸ್ಥಳಕ್ಕೆ ಧಾವಿಸಿದೆ ಎಂದು ಶಿಮ್ಲಾ ಉಪ ಆಯುಕ್ತ ಅನುಪಮ್ ಕಶ್ಯಪ್ ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿ 5 ಅನ್ನು ಬಂದ್ ಮಾಡಲಾಗಿದೆ ಮತ್ತು ನೆಗುಲ್ಸಾರಿ ಸ್ಲೈಡಿಂಗ್ ಪಾಯಿಂಟ್ ಬಳಿಯ ರಸ್ತೆಯು ಕುಸಿದ ನಂತರ ಕಿನ್ನೌರ್ ಜಿಲ್ಲೆಯನ್ನು ಶಿಮ್ಲಾದಿಂದ ಕಡಿತಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ತುಂಗಭದ್ರಾ ಜಲಾಶಯದಿಂದ ನೀರು ಹೊರಬಿಡುವ ಕಾರ್ಯ ಆರಂಭ, ಪ್ರವಾಹದ ಭೀತಿಯಲ್ಲಿ ಜನ
ಆಗಸ್ಟ್ 22ರವರೆಗೆ ಹಿಮಾಚಲ ಪ್ರದೇಶದಲ್ಲಿ ಆರ್ದ್ರ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ ಎಂದು IMD ತಿಳಿಸಿದೆ. ಹವಾಮಾನ ಇಲಾಖೆ ಕಚೇರಿಯು ಚಂಬಾ, ಕಂಗ್ರಾ, ಶಿಮ್ಲಾ ಮತ್ತು ಸಿರ್ಮೌರ್ ಜಿಲ್ಲೆಗಳ ಭಾಗಗಳಲ್ಲಿ ಪ್ರವಾಹದ ಅಪಾಯ ಮತ್ತು ಹಾನಿಯ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದೆ. ಭಾರೀ ಮಳೆಯ ನಡುವೆ ಹಿಮಾಚಲದಲ್ಲಿ 58 ರಸ್ತೆಗಳನ್ನು ಮುಚ್ಚಲಾಗಿದೆ. ಶಿಮ್ಲಾ ಜಿಲ್ಲೆಯ ಹಾಟ್‌ಕೋಟಿ ಮತ್ತು ಸಿರ್ಮೌರ್ ಜಿಲ್ಲೆಯ ಪೊಂಟಾ ಸಾಹಿಬ್ ನಡುವಿನ ರಾಷ್ಟ್ರೀಯ ಹೆದ್ದಾರಿ 707ಯಲ್ಲಿ ಶುಕ್ರವಾರದ ಮಳೆಯಿಂದಾಗಿ 58 ರಸ್ತೆಗಳನ್ನು ಮುಚ್ಚಲಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆರಾಯನ ಆರ್ಭಟ: ವಾಹನ ಸವಾರರು ಪರದಾಟ, ಆಟೋ ಮೇಲೆ ಬಿದ್ದ ಮರ
ಶಿಮ್ಲಾದಲ್ಲಿ 19, ಮಂಡಿಯಲ್ಲಿ 14, ಕಂಗ್ರಾದಲ್ಲಿ 12, ಕುಲುವಿನಲ್ಲಿ 8, ಕಿನ್ನೌರ್‌ನಲ್ಲಿ 3, ಸಿರ್ಮೌರ್, ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಗಳಲ್ಲಿ ತಲಾ ಒಂದೊಂದು ರಸ್ತೆಗಳನ್ನು ಮುಚ್ಚಲಾಗಿದೆ. ಮಳೆಯಿಂದಾಗಿ 31 ವಿದ್ಯುತ್ ಮತ್ತು 4 ನೀರು ಸರಬರಾಜು ಯೋಜನೆಗಳಿಗೆ ಅಡ್ಡಿಯಾಗಿದೆ. ಹಿಮಾಚಲ ಪ್ರದೇಶದ ಈ ಮಾನ್ಸೂನ್‌ನಲ್ಲಿ ಶುಕ್ರವಾರದವರೆಗೆ ಶೇ. 23ರಷ್ಟು ಮಳೆಯ ಕೊರತೆಯಿದೆ ಮತ್ತು ರಾಜ್ಯವು ಸರಾಸರಿ 513.5 ಮಿ.ಮೀ ವಿರುದ್ಧ 397.9 ಮಿ.ಮೀ ಮಳೆಯ ಮುನ್ಸೂಚನೆ ನೀಡಿದೆ.
ಮಳೆ ಸಂಬಂಧಿತ ಘಟನೆಗಳಲ್ಲಿ 120 ಜನರು ಸಾವನ್ನಪ್ಪಿದ್ದಾರೆ. ಜೂನ್ 27 ಮತ್ತು ಶುಕ್ರವಾರದ ನಡುವೆ ರಾಜ್ಯವು ಸುಮಾರು 1,129 ಕೋಟಿ ರೂ. ನಷ್ಟವನ್ನು ಅನುಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ