ಕಾರ್ಗೋ ಏರಿಯಾದಲ್ಲಿ ಫ್ಲೋರಿನ್ ಸೋರಿಕೆ; ಸ್ಪಷ್ಟನೆ ನೀಡಿದ ಲಕ್ನೋ ವಿಮಾನ ನಿಲ್ದಾಣ
"ಕ್ಯಾನ್ಸರ್ ರೋಗಿಗಳಿಗೆ ಔಷಧಿಗಳನ್ನು ಹೊಂದಿರುವ ಪಾರ್ಸೆಲ್ ಲಕ್ನೋದ ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ಪ್ರದೇಶದಲ್ಲಿ ವಿಕಿರಣಶೀಲ ವಸ್ತುಗಳ ಎಚ್ಚರಿಕೆಯನ್ನು ಸಕ್ರಿಯಗೊಳಿಸಿದೆ" ಎಂದು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅಧಿಕಾರಿ ಹೇಳಿದ್ದು, ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ಸುಗಮವಾಗಿ ನಡೆಯುತ್ತಿವೆ ಎಂದಿದ್ದಾರೆ.
ಲಕ್ನೋ ಆಗಸ್ಟ್ 17: ಲಕ್ನೋದ ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (Chaudhary Charan Singh International Airport ) ಕಾರ್ಗೋ ಪ್ರದೇಶದಲ್ಲಿ ವಿಕಿರಣಶೀಲ ವಸ್ತು ಸೋರಿಕೆಯುಂಟಾಗಿದೆ ಎಂದು ಎಚ್ಚರಿಕೆ ಮೊಳಗಿತ್ತು. ಇದೀಗ ಪ್ರಸ್ತುತ ಪ್ರದೇಶ ಸುರಕ್ಷಿತವಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (National Disaster Response Force) ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಟರ್ಮಿನಲ್ 3 ರ ಕಾರ್ಗೋ ಪ್ರದೇಶದಲ್ಲಿ ಫ್ಲೋರಿನ್ ಸೋರಿಕೆ ವರದಿಯಾದ ನಂತರ ಲಕ್ನೋ ವಿಮಾನ ನಿಲ್ದಾಣದಲ್ಲಿ ಶನಿವಾರ ಮಧ್ಯಾಹ್ನ ಆತಂಕ ಸೃಷ್ಟಿಯಾಗಿತ್ತು. ಸೋರಿಕೆ ನಡೆದಾಗ ವಿಕಿರಣಶೀಲ ವಸ್ತುಗಳ ಎಚ್ಚರಿಕೆ ಮೊಳಗಿತ್ತು. ಎಚ್ಚರಿಕೆಯ ಕಾರಣ ಕಂಡುಹಿಡಿಯಲು ಅಧಿಕಾರಿಗಳು NDRF ಗೆ ಕರೆ ಮಾಡಿದ್ದರು.
ಅಂದ ಹಾಗೆ ಕಾರ್ಗೋದಲ್ಲಿದ್ದ ಪಾರ್ಸೆಲ್ ಕ್ಯಾನ್ಸರ್ ರೋಗಿಗಳಿಗೆ ಔಷಧಿಗಳನ್ನು ಒಳಗೊಂಡಿತ್ತು, ಇದರಲ್ಲಿ ಫ್ಲೋರಿನ್-ಅದರ ಸಂಭಾವ್ಯ ಅಪಾಯಗಳಿಗೆ ಹೆಸರುವಾಸಿಯಾದ ವಸ್ತುವಾಗಿದೆ. “ಕ್ಯಾನ್ಸರ್ ರೋಗಿಗಳಿಗೆ ಔಷಧಿಗಳನ್ನು ಹೊಂದಿರುವ ಪಾರ್ಸೆಲ್ ಲಕ್ನೋದ ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ಪ್ರದೇಶದಲ್ಲಿ ವಿಕಿರಣಶೀಲ ವಸ್ತುಗಳ ಎಚ್ಚರಿಕೆಯನ್ನು ಸಕ್ರಿಯಗೊಳಿಸಿದೆ” ಎಂದು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಲಕ್ನೋ ವಿಮಾನ ನಿಲ್ದಾಣದಿಂದ ಸ್ಪಷ್ಟನೆ
A shipment containing medicines for cancer patients activated an alarm for radioactive material in the Cargo area of the Lucknow Airport. The National Disaster Response Force, called in to ascertain the cause of the alarm, has declared the shipment safe. (1/2)
— Lucknow Airport (@lkoairport) August 17, 2024
ಎನ್‌ಡಿಆರ್‌ಎಫ್, ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮತ್ತು ವಿಮಾನ ನಿಲ್ದಾಣದ ಅಗ್ನಿಶಾಮಕ ಸೇವೆಯನ್ನು ಪರಿಸ್ಥಿತಿಯನ್ನು ನಿರ್ಣಯಿಸಲು ಮತ್ತು ನಿರ್ವಹಿಸಲು ನಿಯೋಜಿಸಲಾಗಿದೆ.
ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅಧಿಕಾರಿ ಹೇಳಿದ್ದು, ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ಸುಗಮವಾಗಿ ನಡೆಯುತ್ತಿವೆ ಎಂದಿದ್ದಾರೆ. ಫ್ಲೋರಿನ್, ಹೆಚ್ಚು ಪ್ರತಿಕ್ರಿಯಾತ್ಮಕ ಮತ್ತು ನಾಶಕಾರಿ ಅನಿಲ, ಗಂಭೀರವಾದ ಉಸಿರಾಟದ ಹಾನಿ ಮತ್ತು ತಪ್ಪಾಗಿ ನಿರ್ವಹಿಸಿದರೆ ಸುಟ್ಟಗಾಯಗಳು ಸೇರಿದಂತೆ ಗಮನಾರ್ಹವಾದ ಆರೋಗ್ಯ ಅಪಾಯಗಳನ್ನು ಉಂಟುಮಾಡಬಹುದು.
ಇದನ್ನೂ ಓದಿ: Himachal Pradesh Cloudburst: ಹಿಮಾಚಲದಲ್ಲಿ ಮೇಘಸ್ಫೋಟದಿಂದ 58 ರಸ್ತೆಗಳು ಬಂದ್; ಆಗಸ್ಟ್ 20ರವರೆಗೆ ಭಾರೀ ಮಳೆ
ಫ್ಲೋರಿನ್ ಸೋರಿಕೆಯಾದರೆ ಏನು ಮಾಡಬೇಕು?
- ರಕ್ಷಣಾತ್ಮಕ ಕೈಗವಸುಗಳು, ಕಣ್ಣು , ಮುಖದ ರಕ್ಷಣೆ ಮತ್ತು ಉಸಿರಾಟದ ರಕ್ಷಣೆ ಮಾಡಿಕೊಳ್ಳಿ
- ಫ್ಲೋರಿನ್ ಅನ್ನು ಬಟ್ಟೆ, ಹೊಂದಾಣಿಕೆಯಾಗದ ವಸ್ತುಗಳು ಮತ್ತು ದಹಿಸುವ ವಸ್ತುಗಳಿಂದ ದೂರವಿಡಿ.
- ಅನಿಲ ಸಂಗ್ರಹವಾಗುವುದನ್ನು ತಡೆಯಲು ಫ್ಲೋರಿನ್ ಅನ್ನು ಹೊರಾಂಗಣದಲ್ಲಿ ಅಥವಾ ಚೆನ್ನಾಗಿ ಗಾಳಿ ಇರುವ ಪ್ರದೇಶಗಳಲ್ಲಿ ಮಾತ್ರ ಬಳಸಿ.
- ಫ್ಲೋರಿನ್ ಅನಿಲವನ್ನು ಉಸಿರಾಡಬೇಡಿ. ವಸ್ತುವನ್ನು ನಿರ್ವಹಿಸುವಾಗ ತಿನ್ನುವುದು, ಕುಡಿಯುವುದು ಅಥವಾ ಧೂಮಪಾನ ಮಾಡುವುದನ್ನು ತಪ್ಪಿಸಿ.
- ಫ್ಲೋರಿನ್ ಅನ್ನು ನಿರ್ವಹಿಸಿದ ನಂತರ ಕೈಗಳನ್ನು ಚೆನ್ನಾಗಿ ತೊಳೆಯಿರಿ ಮತ್ತು ಚೆನ್ನಾಗಿ ಗಾಳಿ ಇರುವ ಸ್ಥಳದಲ್ಲಿ ಮಾತ್ರ ಸಂಗ್ರಹಿಸಿ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ