AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Raksha Bandhan 2024 : ಮೋದಿಗೆ 30ನೇ ಬಾರಿ ರಾಖಿ ಕಟ್ಟಲಿರುವ ಪಾಕಿಸ್ತಾನಿ ಸಹೋದರಿ, ಪ್ರಧಾನಿ ಜತೆಗೆ ಈ ಬಾಂಧವ್ಯ ಚಿಗುರಿದ್ದು ಹೇಗೆ?

ಪ್ರಧಾನಿ ಮೋದಿಯವರಿಗೂ ಒಬ್ಬರು ಸಹೋದರಿಯಿದ್ದಾರೆ ಎನ್ನುವುದು ಕೆಲವರಿಗಷ್ಟೇ ತಿಳಿದಿದೆ. ಹೌದು, ಕಳೆದ 30 ವರ್ಷಗಳಿಂದ ಪ್ರಧಾನಿ ಮೋದಿಗೆ ರಾಖಿ ಕಟ್ಟುತ್ತಿರುವ ಆ ಸಹೋದರಿಯೇ ಕಮರ್ ಶೇಖ್, ಈ ಬಾರಿ ರಾಖಿ ಕಟ್ಟಲು ಎಲ್ಲಾ ಸಿದ್ಧತೆಯನ್ನು ನಡೆಸಿದ್ದಾರೆ. ಪಾಕ್‌ ಮೂಲದ ಸಹೋದರಿ ಕಮರ್ ಶೇಖ್ ಅವರು ಆಗಸ್ಟ್ 18 ರಂದು ದೆಹಲಿಗೆ ಆಗಮಿಸಲಿದ್ದು, ಆಗಸ್ಟ್ 19 ರಂದು ಪ್ರಧಾನಿಗೆ ರಾಖಿ ಕಟ್ಟಲಿದ್ದಾರೆ.

Raksha Bandhan 2024 : ಮೋದಿಗೆ 30ನೇ ಬಾರಿ ರಾಖಿ ಕಟ್ಟಲಿರುವ ಪಾಕಿಸ್ತಾನಿ ಸಹೋದರಿ, ಪ್ರಧಾನಿ ಜತೆಗೆ ಈ ಬಾಂಧವ್ಯ ಚಿಗುರಿದ್ದು ಹೇಗೆ?
ಕಮರ್ ಶೇಖ್ ಮತ್ತು ಪ್ರಧಾನಿ ಮೋದಿ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Aug 17, 2024 | 4:25 PM

Share

ರಕ್ಷಾ ಬಂಧನ ಹಬ್ಬ ಅಣ್ಣ ತಂಗಿಯರ ಬಾಂಧವ್ಯವನ್ನು ಬೆಸೆಯುವ ಹಬ್ಬ. ಹೀಗಾಗಿ ಪ್ರತಿಯೊಬ್ಬ ಸಹೋದರ ಸಹೋದರಿಯರು ಬಹಳ ನಿರೀಕ್ಷೆಯಿಂದ ಕಾಯುವ ದಿನವಾಗಿದೆ. ದೇಶದಾದಂತ್ಯ ಈ ಹಬ್ಬವನ್ನು ಎಲ್ಲಾ ಸಹೋದರ ಸಹೋದರಿಯರು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಈ ರಾಖಿ ಹಬ್ಬಕ್ಕೆ ಪ್ರಧಾನಿಯವರಿಗೂ ಬಹಳ ವಿಶೇಷವಾಗಿದೆ. ಅಣ್ಣ ತಂಗಿಯರ ಬಾಂಧವ್ಯ ಸಾರುವ ಹಬ್ಬಕ್ಕೆ ಎರಡು ದಿನ ಇರುವಾಗಲೇ ಪಾಕ್‌ ಮೂಲದ ಸಹೋದರಿ ಕಮರ್ ಮೊಹ್ಸಿನ್ ಶೇಖ್ ರಾಖಿ ಕಟ್ಟಲು ಸಿದ್ಧತೆ ನಡೆಸಿದ್ದಾರೆ.

ಮೂಲತಃ ಪಾಕಿಸ್ಥಾನದವರಾದ ಕಮರ್ ಮೊಹ್ಸಿನ್ ಶೇಖ್ ಅವರು ಮದುವೆಯಾದ ನಂತರ ಗುಜರಾತ್‌ನ ಅಹಮದಾಬಾದ್‌ನಲ್ಲೇ ನೆಲೆಸಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಕಮರ್​​ ಶೇಖ್​​ ಪ್ರಧಾನಿ ಮೋದಿಗೆ ರಾಖಿಗಳನ್ನು ಕಟ್ಟಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹೀಗಾಗಿ ಆಗಸ್ಟ್ 18 ರಂದು ದೆಹಲಿಗೆ ತಲುಪಲಿದ್ದು, ಆಗಸ್ಟ್ 19 ರಂದು ಅವರು ಪ್ರಧಾನಿ ಮೋದಿ ಕೈಗೆ ರಾಖಿ ಕಟ್ಟಲಿದ್ದಾರೆ. ಕಳೆದ 30 ವರ್ಷಗಳಿಂದ ಕಮರ್ ಶೇಖ್ ಅವರು ಪ್ರಧಾನಿ ಮೋದಿಯವರಿಗೆ ಕಟ್ಟುತ್ತಾ ಬರುತ್ತಿದ್ದು, ತಮ್ಮ ಕೈಯಾರೆ ತಯಾರಿಸಿದ ರಾಖಿಯನ್ನೇ ಕಟ್ಟುತ್ತಿರುವುದು ವಿಶೇಷ.

ಪ್ರಧಾನಿಯವರಿಗೆ ಕಟ್ಟುವ ಈ ಬಾರಿಯ ರಾಖಿಯ ವಿಶೇಷ

ಪ್ರತಿ ವರ್ಷ ರಕ್ಷಾಬಂಧನದ ಮೊದಲು ನನ್ನ ಕೈಯಿಂದಲೇ ರಾಖಿಗಳನ್ನು ತಯಾರಿಸುತ್ತೇನೆ. 30ನೇ ಬಾರಿ ಪ್ರಧಾನಿ ಮೋದಿಗೆ ರಾಖಿ ಕಟ್ಟಲು ಸಿದ್ಧತೆ ನಡೆಸಿದ್ದೇನೆ. ಈ ವರ್ಷ ವೆಲ್ವೆಟ್​​ನಲ್ಲಿ ಮಾಡಿರುವ ರಾಖಿ ಕಟ್ಟುತ್ತೇನೆ. ಈ ರಾಖಿಯಲ್ಲಿ ಮುತ್ತುಗಳನ್ನು ಬಳಸಲಾಗಿದೆ ಎಂದಿದ್ದಾರೆ.

ಯಾರು ಈ ಕಮರ್ ಶೇಖ್?

ಕಮರ್ ಶೇಖ್ ಮೂಲತಃ ಪಾಕಿಸ್ತಾನದ ಕರಾಚಿಯವರು. ವೃತ್ತಿಯಲ್ಲಿ ಪೇಂಟರ್ ಆಗಿರುವ ಅಹಮದಾಬಾದ್ ನಿವಾಸಿ ಮೊಹಶೀನ್ ಶೇಖ್ ಅವರನ್ನು 1981 ರಲ್ಲಿ ವಿವಾಹವಾದರು. ಅಂದಿನಿಂದ ಕಮರ್ ಶೇಖ್ ಭಾರತದಲ್ಲಿ ನೆಲೆಸಿದ್ದಾರೆ.

ಇದನ್ನೂ ಓದಿ: ನಿಮ್ಮ ತಂಗಿಗೆ ಈ ಸಾಂಪ್ರದಾಯಿಕ ಉಡುಗೊರೆ ನೀಡಿ ಖುಷಿ ಪಡಿಸಿ

ಕಮರ್ ಶೇಖ್ ಅವರು ಪ್ರಧಾನಿ ಮೋದಿಯನ್ನು ಭೇಟಿಯಾದದ್ದು ಹೇಗೆ?

1990 ರಲ್ಲಿ ಅಂದಿನ ರಾಜ್ಯಪಾಲರಾಗಿದ್ದ ದಿವಂಗತ ಡಾ. ಸ್ವರೂಪ್ ಸಿಂಗ್ ಮೂಲಕ ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದರಂತೆ. ರಾಜ್ಯಪಾಲರನ್ನು ಭೇಟಿ ಮಾಡಲು ವಿಮಾನ ನಿಲ್ದಾಣದಿಂದ ಹೊರಟಾಗ ನರೇಂದ್ರ ಮೋದಿ ಅಲ್ಲಿದ್ದರಂತೆ. ಆ ಸಮಯದಲ್ಲಿ ಸ್ವರೂಪ್ ಸಿಂಗ್ ಅವರು, ಕಮರ್ ಶೇಖ್ ತಮ್ಮ ಮಗಳೆಂದು ಮೋದಿಗೆ ಹೇಳಿದ್ದರಂತೆ. ಈ ಮಾತನ್ನು ಕೇಳಿದ ನರೇಂದ್ರ ಮೋದಿಯವರು ಇಂದಿನಿಂದ ಕಮರ್ ಶೇಖ್ ನನ್ನ ಸಹೋದರಿ ಎಂದಿದ್ದರಂತೆ. ಆ ದಿನವೇ ಪ್ರಧಾನಿ ಮೋದಿಯವರನ್ನು ಸಹೋದರ ಎಂದು ಭಾವಿಸಿರುವ ಕಮರ್ ಖೇರ್ ಪ್ರತಿ ವರ್ಷವು ವಿಶೇಷ ರಾಖಿಯನ್ನು ಕಟ್ಟುತ್ತಾ ಬರುತ್ತಿದ್ದಾರೆ.

ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ