ಚಿಗುರಿದ ಮೀಸೆಯ ಹುಡುಗನಿಗೆ 28 ರ ವಿಚ್ಛೇದಿತ ಆಂಟಿ ಜೊತೆ ಲವ್: ಗದ್ದೆಯಲ್ಲಿ ಇಬ್ಬರ ಶವಗಳೂ ಪತ್ತೆ!
ಅಶ್ವಿನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಭಾವನಾತ್ಮಕ ಕಾರಣಗಳಿಂದ ಪತಿಯಿಂದ ಬೇರ್ಪಟ್ಟು ತವರು ಮನೆಯಲ್ಲಿ ವಾಸವಾಗಿದ್ದಾರೆ. ಆಕೆ ರೆಹಮಾನ್ ಎಂಬ ಯುವಕನ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಳು
ಸಂಬಂಧ ಅದೆಷ್ಟೇ ಗಟ್ಟಿಯಾಗಿದ್ರೂ ಅನೈತಿಕವಾಗಿದ್ದರೆ, ಅಂತ್ಯವಾಗೋದು ಕೆಟ್ಟ ರೀತಿಯಲ್ಲೇ ಎಂಬುದಕ್ಕೆ ಕಾಲಕಾಲಕ್ಕೆ ಅನೇಕ ಉದಾಹರಣೆಗಳು ಸಿಗುತ್ತಾ ಇರುತ್ತವೆ. ಇಲ್ಲೊಂದು ತಾಜಾ ಉದಾಹರಣೆಯಿದೆ ನೋಡಿ. ಆಕೆಗೆ (wife) 28 ವರ್ಷ, ಮದುವೆಯಾಗಿ ಇಬ್ಬರು ಮಕ್ಕಳೂ ಇದ್ದಾರೆ. ಗಂಡನ (husband) ಜತೆಗಿನ ಭಿನ್ನಾಭಿಪ್ರಾಯದಿಂದ, ಪ್ರತ್ಯೇಕಗೊಂಡು ತವರು ಮನೆಯಲ್ಲಿ ನೆಲೆಸಿದ್ದಾಳೆ. ಹೀಗಿರುವಾಗ 20ರ ಹರೆಯದ ಚಿಗುರು ಮೀಸೆಯ ಯುವಕ (boyfriend) ಆತ್ಮೀಯನಾಗಿದ್ದಾನೆ (illicit relation). ಇಂತಿಪ್ಪ ಜೋಡಿ ಇದೀಗ ಕೊಲೆಗೀಡಾಗಿದ್ದು ಸಂಚಲನ ಮೂಡಿಸಿದೆ. ಅವಳಿ ಹತ್ಯೆಯ ಆಘಾತಕಾರಿ ಘಟನೆ ತೆಲಂಗಾಣದ (Telangana) ಆದಿಲಾಬಾದ್ ( Adilabad) ಜಿಲ್ಲೆಯಲ್ಲಿ ಕೋಲಾಹಲ ಸೃಷ್ಟಿಸಿದೆ. ಇವರಿಬ್ಬರ ಶವಗಳು ಗುಡಿಹತ್ನೂರು ಮಂಡಲದ ಸೀತಾಗಾಂವ್ಲಾದ ಉಪನಗರದ ಗದ್ದೆಯಲ್ಲಿ ಪತ್ತೆಯಾಗಿವೆ. ಈ ಬಗ್ಗೆ ಭಾನುವಾರ ಬೆಳಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಎರಡು ಮೃತ ದೇಹಗಳನ್ನು ಆದಿಲಾಬಾದ್ ಪಟ್ಟಣದ ಭುಕ್ತಾಪುರದ ರೆಹಮಾನ್ (20) ಮತ್ತು ಕೆಆರ್‌ಕೆ ನಗರದ ಅಶ್ವಿನಿ (28) ಅವರುಗಳುದು ಎಂದು ಗುರುತಿಸಲಾಗಿದೆ.
ಆದರೆ, ಅಶ್ವಿನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಭಾವನಾತ್ಮಕ ಕಾರಣಗಳಿಂದ ಪತಿಯಿಂದ ಬೇರ್ಪಟ್ಟು ಕೆಲ ತಿಂಗಳಿಂದ ತವರು ಮನೆಯಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ. ಆಕೆ ರೆಹಮಾನ್ ಎಂಬ ಯುವಕನ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಇವರಿಬ್ಬರೂ ಆದಿಲಾಬಾದ್‌ನಿಂದ ಸೀತಾಗಾಂವ್ಲಾದ ಉಪನಗರದಲ್ಲಿ ಬೆಳೆಗ್ಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಪೊಲೀಸರು ಸಂಗ್ರಹಿಸಿದ್ದಾರೆ. ಸಮೀಪದ ಹೊಲದಲ್ಲಿ ಅವರಿಬ್ಬರನ್ನೂ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
Also Read:
ಸಂಬಂಧ ಅದೆಷ್ಟೇ ಗಟ್ಟಿಯಾಗಿದ್ರೂ ಅನೈತಿಕವಾಗಿದ್ದರೆ, ಅಂತ್ಯವಾಗೋದು ಕೆಟ್ಟ ರೀತಿಯಲ್ಲೇ ಅಂತಾರೆ.. ಉದಾಹರಣೆ ಇಲ್ಲಿದೆ!
ಇಬ್ಬರಿಗೂ ತಲೆಯ ಮೇಲೆ ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳವನ್ನು ಪರಿಶೀಲಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಹತ್ಯೆಯಲ್ಲಿ ಅಶ್ವಿನಿ ಪತಿಯ ಕೈವಾಡ ಇದೆಯಾ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಾಥಮಿಕ ತನಿಖೆಯ ನಂತರ ವಿವರಗಳು ಬಹಿರಂಗವಾಗಲಿದೆ ಎಂದು ಡಿಎಸ್ಪಿ ನಾಗೇಂದರ್ ತಿಳಿಸಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:15 pm, Mon, 1 May 23