AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ಡೋಸ್​ ಲಸಿಕೆ ಪಡೆದರೂ ಮಾಸ್ಕ್​ ಕಡ್ಡಾಯ, ಭಾರತದಲ್ಲಿ ಸದ್ಯಕ್ಕಿಲ್ಲ ವಿನಾಯಿತಿ: ಡಾ. ರಣ್​ದೀಪ್ ಗುಲೇರಿಯಾ

ಎರಡು ಡೋಸ್ ಕೊರೊನಾ ಲಸಿಕೆ ಪಡೆದ ಕೂಡಲೇ ವೈರಾಣುವಿನಿಂದ ಸಂಪೂರ್ಣ ಸುರಕ್ಷತೆ ಹೊಂದಿದ್ದೇವೆ ಎಂದು ಭಾವಿಸುವುದು ಬೇಡ. ಕೊರೊನಾ ರೂಪಾಂತರವಾಗುತ್ತಿರುವುದನ್ನು ನೋಡಿದರೆ ಮುಂದಿನ ಮಾದರಿಗಳು ಯಾವ ರೀತಿ ವರ್ತಿಸಲಿವೆ ಎಂದು ಹೇಳಲಾಗದು.

ಎರಡು ಡೋಸ್​ ಲಸಿಕೆ ಪಡೆದರೂ ಮಾಸ್ಕ್​ ಕಡ್ಡಾಯ, ಭಾರತದಲ್ಲಿ ಸದ್ಯಕ್ಕಿಲ್ಲ ವಿನಾಯಿತಿ: ಡಾ. ರಣ್​ದೀಪ್ ಗುಲೇರಿಯಾ
ಡಾ.ಗುಲೇರಿಯಾ
Skanda
|

Updated on: May 15, 2021 | 12:02 PM

Share

ದೆಹಲಿ: ಕೊರೊನಾ ಎರಡನೇ ಅಲೆ ಬಿಗಡಾಯಿಸುತ್ತಿದ್ದಂತೆ ಭಾರತದಲ್ಲಿ ಮಾಸ್ಕ್, ಸ್ಯಾನಿಟೈಜರ್, ಸಾಮಾಜಿಕ ಅಂತರದ ಬಗ್ಗೆ ಎಚ್ಚರಿಕೆಯ ಮಾತುಗಳು ಕೇಳಿಬರಲಾರಂಭಿಸಿದವು. ಅದರರ್ಥ ಕೊರೊನಾ ದೇಶದಲ್ಲಿ ಸಂಪೂರ್ಣ ಕಡಿಮೆ ಆಗುವ ಮುನ್ನವೇ ಜನ ಮುನ್ನೆಚ್ಚರಿಕಾ ಕ್ರಮಗಳನ್ನು ಮರೆತುಬಿಟ್ಟಿದ್ದು, ಎರಡನೇ ಅಲೆ ಶುರುವಾದಾಗ ಮತ್ತೆ ನೆನಪಿಸಬೇಕಾದ ಅನಿವಾರ್ಯತೆ ಎದುರಾಯಿತು. ಇದರ ನಡುವೆಯೇ ಲಸಿಕೆ ತೆಗೆದುಕೊಂಡರೆ ಕೊರೊನಾದಿಂದ ತಕ್ಕಮಟ್ಟಿಗೆ ಬಚಾವಾಗಬಹುದು ಎಂದು ತಜ್ಞರು ಭರವಸೆ ನೀಡಿರುವರಾದರೂ ಅದು ಕೊರೊನಾ ಬಾರದಂತೆ ರಕ್ಷಾ ಕವಚ ಅಲ್ಲ ಎಂಬುದನ್ನೂ ಒತ್ತಿ ಹೇಳಿದ್ದಾರೆ. ಈ ಬಗ್ಗೆ ಎಚ್ಚರಿಕೆಯ ಮಾತುಗಳನ್ನಾಡಿರುವ ಏಮ್ಸ್ ನಿರ್ದೇಶಕ ಡಾ.ರಣ್​ದೀಪ್ ಗುಲೇರಿಯಾ, ಕೊರೊನಾ ವೈರಾಣು ನಿಯಮಿತವಾಗಿ ರೂಪಾಂತರಗೊಳ್ಳುತ್ತಿದೆ. ಈಗ ನೀಡಲಾಗುತ್ತಿರುವ ಲಸಿಕೆ ಮುಂಬರುವ ರೂಪಾಂತರಿಯನ್ನು ಮಣಿಸಲು ಎಷ್ಟು ಸಶಕ್ತ ಎಂಬುದರ ಬಗ್ಗೆ ಇನ್ನೂ ಖಚಿತತೆ ಇಲ್ಲ. ಹೀಗಾಗಿ ಲಸಿಕೆ ತೆಗೆದುಕೊಂಡರೂ ಮಾಸ್ಕ್​ ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದ್ದಾರೆ.

ಎರಡು ಡೋಸ್ ಕೊರೊನಾ ಲಸಿಕೆ ಪಡೆದ ಕೂಡಲೇ ವೈರಾಣುವಿನಿಂದ ಸಂಪೂರ್ಣ ಸುರಕ್ಷತೆ ಹೊಂದಿದ್ದೇವೆ ಎಂದು ಭಾವಿಸುವುದು ಬೇಡ. ಕೊರೊನಾ ರೂಪಾಂತರವಾಗುತ್ತಿರುವುದನ್ನು ನೋಡಿದರೆ ಮುಂದಿನ ಮಾದರಿಗಳು ಯಾವ ರೀತಿ ವರ್ತಿಸಲಿವೆ ಎಂದು ಹೇಳಲಾಗದು. ಹೀಗಾಗಿ ಯಾವುದೇ ಕಾರಣಕ್ಕೂ ಮೈಮರೆಯುವಂತಿಲ್ಲ. ಇನ್ನೂ ದೊಡ್ಡ ಗಂಡಾಂತರ ಎದುರಾಗಬಾರದೆಂದರೆ ಎಚ್ಚರಿಕೆಯಿಂದ ಇರಲೇಬೇಕು ಎಂದು ತಜ್ಞರು ಹೇಳಿದ್ದಾರೆ.

ಇದಕ್ಕೆ ತದ್ವಿರುದ್ಧವಾಗಿ ಅಮೆರಿಕಾದಲ್ಲಿನ ರೋಗ ನಿಯಂತ್ರಣಾ ಮತ್ತು ಮುನ್ನೆಚ್ಚರಿಕಾ ಕೇಂದ್ರ ಗುರುವಾರದಂದು (ಮೇ 13) ಸಂಪೂರ್ಣ ಲಸಿಕೆ ಪಡೆದವರು ಇನ್ನುಮುಂದೆ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಕೊರೊನಾಕ್ಕೂ ಮೊದಲು ಇದ್ದಂತೆಯೇ ಆರಾಮಾಗಿ ಇರಬಹುದು ಎಂದು ಹೇಳಿತ್ತು. ಆದರೆ, ಈ ಬಗ್ಗೆ ಅನೇಕ ಭಾರತೀಯ ತಜ್ಞರು ಇಂತಹ ನಿರ್ಧಾರಕ್ಕೆ ಇಷ್ಟು ಬೇಗ ಬರುವುದು ಒಳ್ಳೆಯದಲ್ಲ. ಜನಜೀವನ ಮೊದಲಿನಂತಾಗಲೂ ಇನ್ನೂ ಕೆಲ ಸಮಯಬೇಕು. ಲಸಿಕೆಯ ಕುರಿತಾಗಿ ಸಾಕಷ್ಟು ಅಧ್ಯಯನಗಳು ನಡೆಯುವುದು ಬಾಕಿ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ವಿಚಾರದ ಕುರಿತಾಗಿ ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆಯ ಅಧಿಕಾರಿಗಳು, ಭಾರತದಲ್ಲಿ ನಿಯಮ ಸಡಿಲಿಸುವ ನಿರ್ಧಾರಕ್ಕೆ ಯಾವ ಕಾರಣಕ್ಕೂ ಬರುವುದಿಲ್ಲ. ಎರಡು ಡೋಸ್ ಲಸಿಕೆ ತೆಗೆದುಕೊಂಡರೂ ಮಾಸ್ಕ್, ಸ್ಯಾನಿಟೈಜರ್, ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿರಲಿದೆ. ಕೊರೊನಾ ಲಸಿಕೆ ಜೀವಹಾನಿಯಾಗದಂತೆ ತಡೆಗಟ್ಟಲಿದೆ. ಆದರೆ, ನಿರ್ಲಕ್ಷಿಸುವುದು ಅಪಾಯಕ್ಕೆ ಹಾದಿ ಮಾಡಿದಂತೆ ಆಗಲಿದೆ ಎಂದು ಎಚ್ಚರಿಸಿದ್ದಾರೆ.

ಅಮೆರಿಕಾ ತಜ್ಞರ ಸಲಹೆಯನ್ನು ಭಾರತೀಯರು ಪರಿಗಣಿಸಿ ಮಾಸ್ಕ್​ ಬೇಡವೆಂದುಕೊಂಡರೆ ಕಷ್ಟ ಎಂದು ಹಾಗಾಗುವ ಮುನ್ನವೇ ತಜ್ಞರು ಎಚ್ಚರಿಕೆ ನೀಡಿರುವ ಸಾಧ್ಯತೆಯೂ ಇಲ್ಲವೆನ್ನುವಂತಿಲ್ಲ! (Even after getting two doses of corona vaccine wearing mask and maintaining social distancing is must in India says Dr Guleria)

ಇದನ್ನೂ ಓದಿ: Covid Vaccine: ವರ್ಷಾಂತ್ಯದೊಳಗೆ ಭಾರತದಲ್ಲಿ ಸಿಗಲಿರುವ 8 ಕೊರೊನಾ ಲಸಿಕೆಗಳು ಯಾವುವು?