Chief Justice of India -ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಯಾರು ಮತ್ತು ಹೇಗೆ ನೇಮಕ ಮಾಡುತ್ತಾರೆ?

President of India: ಭಾರತದ ಮುಖ್ಯ ನ್ಯಾಯಾಧೀಶರನ್ನು ರಾಷ್ಟ್ರಪತಿಗಳು ಭಾರತೀಯ ಸಂವಿಧಾನದ 124 ನೇ ವಿಧಿಯ ಷರತ್ತು (2) ರ ಅಡಿ ನೇಮಕ ಮಾಡುತ್ತಾರೆ.

Chief Justice of India -ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಯಾರು ಮತ್ತು ಹೇಗೆ ನೇಮಕ ಮಾಡುತ್ತಾರೆ?
ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಯಾರು ಮತ್ತು ಹೇಗೆ ನೇಮಕ ಮಾಡುತ್ತಾರೆ?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Oct 11, 2022 | 1:27 PM

DY Chandrachud: ನ್ಯಾ. ಡಿವೈ ಚಂದ್ರಚೂಡ್​ರನ್ನು ಭಾರತದ ಮುಖ್ಯ ನ್ಯಾಯಮೂರ್ತಿನ್ನಾಗಿ ಶಿಫಾರಸು ಮಾಡಿದ ನ್ಯಾ. ಯುಯು ಲಲಿತ್ ಭಾರತದ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರು ನ್ಯಾಯಮೂರ್ತಿ ಧನಂಜಯ ಯಶವಂತ್ ಚಂದ್ರಚೂಡ್  (Dhananjaya Yeshwant Chandrachud) ಅವರ ಹೆಸರನ್ನು ತಮ್ಮ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡಿದ್ದಾರೆ.

Chief Justice of India -ಭಾರತದ ಮುಖ್ಯ ನ್ಯಾಯಮೂರ್ತಿ ಯಾರು ಆಗಬಹುದು?

ಭಾರತೀಯ ಪ್ರಜೆಯಾಗಿರುವುದರ ಹೊರತಾಗಿ, ವ್ಯಕ್ತಿಯು (1) ಹೈಕೋರ್ಟ್‌ನ ನ್ಯಾಯಾಧೀಶರಾಗಿರಬೇಕು ಅಥವಾ ಎರಡು ಮತ್ತು ಹೆಚ್ಚಿನ ಅಂತಹ ನ್ಯಾಯಾಲಯಗಳಲ್ಲಿ ಸತತವಾಗಿ ಕನಿಷ್ಠ ಐದು ವರ್ಷಗಳ ಕಾಲ ನ್ಯಾಯಾಧೀಶರಾಗಿರಬೇಕು ಅಥವಾ (2) ಹೈಕೋರ್ಟ್ ಅಥವಾ ಎರಡು ಅಥವಾ ಹೆಚ್ಚಿನ ಅಂತಹ ನ್ಯಾಯಾಲಯಗಳಲ್ಲಿ ಸತತವಾಗಿ, ಕನಿಷ್ಠ ಹತ್ತು ವರ್ಷಗಳ ಕಾಲ ವಕೀಲರಾಗಿರಬೇಕು ಅಥವಾ (ಸಿ) ರಾಷ್ಟ್ರಪತಿಗಳ ಅಭಿಪ್ರಾಯದಲ್ಲಿ, ಅದ್ವಿತೀಯ ನ್ಯಾಯಶಾಸ್ತ್ರಜ್ಞರಾಗಿರಬೇಕು.

CJI ಅನ್ನು ಯಾರು ನೇಮಕ ಮಾಡುತ್ತಾರೆ?

ಭಾರತದ ಮುಖ್ಯ ನ್ಯಾಯಾಧೀಶರನ್ನು ರಾಷ್ಟ್ರಪತಿಗಳು ಭಾರತೀಯ ಸಂವಿಧಾನದ 124 ನೇ ವಿಧಿಯ ಷರತ್ತು (2) ರ ಅಡಿ ನೇಮಕ ಮಾಡುತ್ತಾರೆ. ರಾಷ್ಟ್ರಪತಿಗಳು “ಅವಶ್ಯಕ” ಎಂದು ಭಾವಿಸಿದ್ದೇ ಆದರೆ, ಸುಪ್ರೀಂ ಕೋರ್ಟ್‌ನ ಇತರೆ ನ್ಯಾಯಾಧೀಶರೊಂದಿಗೆ ಸಮಾಲೋಚನೆ ನಡೆಸಿದ ನಂತರ ರಾಷ್ಟ್ರಪತಿಯು ಭಾರತದ ಮುಖ್ಯ ನ್ಯಾಯಾಧೀಶರ ನೇಮಕಾತಿಯನ್ನು ಮಾಡಬಹುದು ಎಂದು ಆರ್ಟಿಕಲ್ 124 ರಲ್ಲಿ ಉಲ್ಲೇಖಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: