ಬಂಡಿಪೋರಾದ ಟ್ಯಾಕ್ಸಿ ನಿಲ್ದಾಣದಲ್ಲಿ ಸ್ಫೋಟ; 6 ಮಂದಿಗೆ ಗಾಯ, ವಾಹನಗಳು ಜಖಂ

ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಗ್ರನೇಡ್​ ಸ್ಫೋಟಕ್ಕೆ ಕಾರಣವೇನು? ಯಾರಾದರೂ ದಾಳಿ ನಡೆಸಿದ್ದಿರಬಹುದಾ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. 

ಬಂಡಿಪೋರಾದ ಟ್ಯಾಕ್ಸಿ ನಿಲ್ದಾಣದಲ್ಲಿ ಸ್ಫೋಟ; 6 ಮಂದಿಗೆ ಗಾಯ, ವಾಹನಗಳು ಜಖಂ
ಸಾಂಕೇತಿಕ ಚಿತ್ರ
Edited By:

Updated on: Oct 26, 2021 | 11:46 AM

ಉತ್ತರ ಕಾಶ್ಮಿರದ ಬಂಡಿಪೋರಾದಲ್ಲಿ ಇಂದು ಗ್ರೆನೇಡ್​ ಸ್ಫೋಟವುಂಟಾಗಿ 6 ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಬಂಡಿಪೋರಾದ ಸುಂಬಲ್​​ ಪ್ರದೇಶದ ಟ್ಯಾಕ್ಸಿ ನಿಲ್ದಾಣದಲ್ಲಿ ಸ್ಫೋಟವುಂಟಾಗಿದ್ದು, ಕೆಲವು ವಾಹನಗಳು ಜಖಂಗೊಂಡಿವೆ. ಗಾಯಗೊಂಡವರನ್ನೆಲ್ಲ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರನ್ನು ಶ್ರೀನಗರ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.  ಸದ್ಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸ್ಫೋಟಕ್ಕೆ ಕಾರಣವೇನು? ಯಾರಾದರೂ ದಾಳಿ ನಡೆಸಿದ್ದಿರಬಹುದಾ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. 

ಜಮ್ಮು-ಕಾಶ್ಮೀರದಲ್ಲಿ ಹೊಸಹೊಸ ಉಗ್ರಸಂಘಟನೆಗಳು ಹುಟ್ಟಿಕೊಂಡಿವೆ. ಹಾಗೇ ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ರಕ್ಷಣಾ ಪಡೆಗಳು ನಿರಂತರವಾಗಿ ನಡೆಸುತ್ತಿವೆ. ಈ ಮಧ್ಯೆ ಅಲ್ಲೊಂದು ಇಲ್ಲೊಂದು ದಾಳಿಗಳನ್ನೂ ಭಯೋತ್ಪಾದಕರು ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕೆಸರು ಗದ್ದೆಯಂತಿದ್ದ ರಸ್ತೆಯನ್ನ ಪುಟಾಣಿಗಳೇ ದುರಸ್ತಿ ಮಾಡಿದರು! ಅಧಿಕಾರಿಗಳ ಬೇಜವಾಬ್ದಾರಿಗೆ ನ್ಯಾಯಾಧೀಶರು ಗರಂ

ಹೆಚ್​ಡಿ ಕುಮಾರಸ್ವಾಮಿ ಆಡಿಯೋ ಕ್ಲಿಪ್ ನನ್ನ ಹತ್ತಿರ ಇದೆ; ಶಾಸಕ ಜಮೀರ್

Published On - 11:02 am, Tue, 26 October 21