ಲಕ್ಷದ್ವೀಪದಲ್ಲಿನ ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಸರ್ಕಾರದ ಮಾಜಿ ಅಧಿಕಾರಿಗಳಿಂದ ಪ್ರಧಾನಿ ನರೇಂದ್ರ ಮೋದಿಗೆ ಪತ್ರ

| Updated By: ರಶ್ಮಿ ಕಲ್ಲಕಟ್ಟ

Updated on: Jun 06, 2021 | 5:01 PM

Lakshadweep: ಕಳೆದ 70 ವರ್ಷಗಳಿಂದ ಲಕ್ಷದ್ವೀಪದಲ್ಲಿ ಯಾವುದೇ ಅಭಿವೃದ್ಧಿಯಿಲ್ಲ ಎಂದು ಹೇಳಿಕೊಳ್ಳುತ್ತಾ, ಎಲ್ ಡಿಎಆರ್ ಭೂಮಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಯ ಮಾದರಿಯನ್ನು ಪ್ರತಿಬಿಂಬಿಸುತ್ತದೆ. ಇದು “ಮಾಲ್ಡೀವ್ಸ್ ಮಾದರಿಯಲ್ಲಿ” ರೆಸಾರ್ಟ್‌ಗಳು, ಹೋಟೆಲ್‌ಗಳು ಮತ್ತು ಬೀಚ್‌ಫ್ರಂಟ್‌ಗಳನ್ನು ಒಳಗೊಂಡಿರುತ್ತದೆ

ಲಕ್ಷದ್ವೀಪದಲ್ಲಿನ ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಸರ್ಕಾರದ ಮಾಜಿ ಅಧಿಕಾರಿಗಳಿಂದ ಪ್ರಧಾನಿ ನರೇಂದ್ರ ಮೋದಿಗೆ ಪತ್ರ
ಲಕ್ಷದ್ವೀಪದ ಒಂದು ಸುಂದರ ಬೀಚ್
Follow us on

ಕವರತ್ತಿ:  ಸರ್ಕಾರದ ಮಾಜಿ ಅಧಿಕಾರಿಗಳ  ಗುಂಪು ಶನಿವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ ಅಭಿವೃದ್ಧಿ ಹೆಸರಿನಲ್ಲಿ “ಆತಂಕಕಾರಿ ಬೆಳವಣಿಗೆಗಳು” ನಡೆಯುತ್ತಿದ್ದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತದ ಭೌಗೋಳಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಲಕ್ಷದ್ವೀಪವು ಒಂದು ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ ಎಂದು ಪ್ರತಿಪಾದಿಸಿದ ಈ ಗುಂಪು, ಡಿಸೆಂಬರ್ 2020 ರಲ್ಲಿ ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಹೆಚ್ಚುವರಿ ಉಸ್ತುವಾರಿ ವಹಿಸಿಕೊಂಡ ನಂತರ ಪರಿಚಯಿಸಿದ ಮೂರು ನಿಯಮಗಳ ಕರಡುಗಳನ್ನು ಉಲ್ಲೇಖಿಸಿದ್ದಾರೆ.  ಪಟೇಲ್ ದಾದ್ರಾ ಮತ್ತು ನಗರ ದಮನ್ ಮತ್ತು ದಿಯುವಿನ ಆಡಳಿತಾಧಿಕಾರಿಯಾಗಿದ್ದಾರೆ.

ಅಧಿಕಾರ ವಹಿಸಿಕೊಂಡಾಗಿನಿಂದ, ಅವರು ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರ ನಿಯಂತ್ರಣ (ಎಲ್‌ಡಿಎಆರ್), ಸಮಾಜ ವಿರೋಧಿ ಚಟುವಟಿಕೆಗಳ ನಿಯಂತ್ರಣದ ಲಕ್ಷದ್ವೀಪ ತಡೆಗಟ್ಟುವಿಕೆ (ಸಾಮಾನ್ಯವಾಗಿ ಬೇರೆಡೆ PASA ಅಥವಾ ಗೂಂಡಾ ಕಾಯ್ದೆ ಎಂದು ಕರೆಯುತ್ತಾರೆ), ಮತ್ತು ಲಕ್ಷದ್ವೀಪ ಪ್ರಾಣಿ ಸಂರಕ್ಷಣಾ ನಿಯಂತ್ರಣ (ಎಲ್‌ಎಪಿಆರ್) ನ ಕರಡುಗಳನ್ನು ಪರಿಚಯಿಸಿದ್ದಾರೆ. ದ್ವೀಪ ಮತ್ತು ರಾಷ್ಟ್ರದಲ್ಲಿ ವ್ಯಾಪಕ ಆತಂಕವನ್ನು ಉಂಟುಮಾಡಿದ ಲಕ್ಷದ್ವೀಪ ಪಂಚಾಯತ್ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಈ ಕರಡುಗಳನ್ನು ಸ್ಥಳೀಯ ಸಮಾಲೋಚನೆಯಿಲ್ಲದೆ ಪರಿಚಯಿಸಲಾಗಿದೆ ಮತ್ತು ಪ್ರಸ್ತುತ ಅಗತ್ಯ ಅನುಮೋದನೆಗಳಿಗಾಗಿ ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದಲ್ಲಿದೆ” ಎಂದು ಮಾಜಿ ಸರ್ಕಾರಿ ಅಧಿಕಾರಿಗಳು ಸಾಂವಿಧಾನಿಕ ನಡವಳಿಕೆ ಗುಂಪು (ಸಿಸಿಜಿ) ಮೂಲಕ ಬರೆದ ಪತ್ರದಲ್ಲಿ ತಿಳಿಸಲಾಗಿದೆ.
ಪತ್ರದ ಪ್ರತಿಯನ್ನು ಗೃಹ ಸಚಿವ ಅಮಿತ್ ಶಾ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವಡೇಕರ್ ಅವರೊಂದಿಗೆ ಹಂಚಿಕೊಳ್ಳಲಾಗಿದೆ.

ಕಳೆದ 70 ವರ್ಷಗಳಿಂದ ಲಕ್ಷದ್ವೀಪದಲ್ಲಿ ಯಾವುದೇ ಅಭಿವೃದ್ಧಿಯಿಲ್ಲ ಎಂದು ಹೇಳಿಕೊಳ್ಳುತ್ತಾ, ಎಲ್ ಡಿಎಆರ್ ಭೂಮಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಯ ಮಾದರಿಯನ್ನು ಪ್ರತಿಬಿಂಬಿಸುತ್ತದೆ. ಇದು “ಮಾಲ್ಡೀವ್ಸ್ ಮಾದರಿಯಲ್ಲಿ” ರೆಸಾರ್ಟ್‌ಗಳು, ಹೋಟೆಲ್‌ಗಳು ಮತ್ತು ಬೀಚ್‌ಫ್ರಂಟ್‌ಗಳನ್ನು ಒಳಗೊಂಡಿರುತ್ತದೆ. ಗಾತ್ರದಲ್ಲಿ ಎರಡು ದ್ವೀಪ ಗುಂಪುಗಳು ವಿಭಿನ್ನವಾಗಿದ್ದು ಜನಸಂಖ್ಯೆ, ದ್ವೀಪಗಳ ಸಂಖ್ಯೆ ಮತ್ತು ಅವುಗಳ ವ್ಯಾಪ್ತಿಯಲ್ಲಿ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ.

“ಲಕ್ಷದ್ವೀಪದ ಪ್ರಾಚೀನ ಕೇಂದ್ರಾಡಳಿತ ಪ್ರದೇಶದಲ್ಲಿ (UT) ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಗೊಂದಲದ ಬೆಳವಣಿಗೆಗಳ ಬಗ್ಗೆ ನಮ್ಮ ತೀವ್ರ ಕಳವಳ ದಾಖಲಿಸಲು ನಾವು ಇಂದು ನಿಮಗೆ ಪತ್ರ ಬರೆಯುತ್ತೇವೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್, ಮಾಜಿ ಪ್ರಸಾರ್ ಭಾರತಿ ಸಿಇಒ ಜವಾಹರ್ ಸಿರ್ಕಾರ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್, ಪ್ರಧಾನ ಮಂತ್ರಿಯವರ ಮಾಜಿ ಸಲಹೆಗಾರ ಟಿ ಕೆ ಎ ನಾಯರ್ ಮತ್ತು ಮಾಜಿ ಮುಖ್ಯ ಮಾಹಿತಿ ಆಯುಕ್ತ ವಜಾಹತ್ ಹಬೀಬುಲ್ಲಾ ಅವರು ಪತ್ರಕ್ಕೆ ಸಹಿಮಾಡಿದವರಲ್ಲಿ ಪ್ರಮುಖರು.

ಲಕ್ಷದ್ವೀಪವು ಮಲಬಾರ್ ಕರಾವಳಿಯಲ್ಲಿ 36 ದ್ವೀಪಗಳನ್ನು ಒಳಗೊಂಡಿರುವ  ಇದು ಸೂಕ್ಷ್ಮ ಹವಳ ದ್ವೀಪಸಮೂಹವಾಗಿದೆ (ಅವುಗಳಲ್ಲಿ 10 ವಾಸಸ್ಥಳಗಳು ಮತ್ತು ಒಂದು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಂಡಿವೆ). 32 ಚದರ ಕಿ.ಮೀ. ಹಿಂದೂ ಮಹಾಸಾಗರದಲ್ಲಿ, ಮುಸ್ಲಿಂ ಬಹುಸಂಖ್ಯಾತ ಜನಸಂಖ್ಯೆಯು ಸುಮಾರು 65,000 ರಷ್ಟಿದೆ. ಇದು ಕೇರಳಕ್ಕೆ ಹತ್ತಿರದಲ್ಲಿದೆ.

“ಆಡಳಿತಾಧಿಕಾರಿ ಪ್ರಸ್ತಾಪಿಸಿದ ಇತರ ನಿಯಮಗಳು ಆಹಾರ ಮತ್ತು ಆಹಾರ ಪದ್ಧತಿ ಮತ್ತು ಸ್ಥಳೀಯ ದ್ವೀಪವಾಸಿಗಳ ಧಾರ್ಮಿಕ ತಡೆಯಾಜ್ಞೆಗಳನ್ನು ಗುರಿಯಾಗಿಸಿವೆ, ಅವರಲ್ಲಿ ಶೇ 96.5 ಮುಸ್ಲಿಮರು” ಎಂದು ಅದು ಹೇಳಿದೆ.

ಎಲ್‌ಎಪಿಆರ್ ಕಾನೂನು ಜಾರಿಗೆ ಬಂದರೆ, ಗೋ ಹತ್ಯೆಯನ್ನು ಪರಿಣಾಮಕಾರಿಯಾಗಿ ನಿಷೇಧಿಸುತ್ತದೆ ಮತ್ತು ಜಾನುವಾರುಗಳ ಅಭಿವೃದ್ಧಿಗೆ ಅಂತರ್ಗತ ಮಿತಿಗಳಿರುವ ದ್ವೀಪ ಪರಿಸರದಲ್ಲಿ ಗೋ ಮಾಂಸವನ್ನು ಸೇವಿಸುವುದು, ಸಂಗ್ರಹಿಸುವುದು, ಸಾಗಿಸುವುದು ಅಥವಾ ಮಾರಾಟ ಮಾಡುವುದನ್ನು ನಿಷೇಧಿಸುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಈಶಾನ್ಯದ ಹಲವಾರು ರಾಜ್ಯಗಳಿಗೆ ಮತ್ತು ಪಕ್ಕದ ಕೇರಳ ರಾಜ್ಯಕ್ಕೂ ಅಂತಹ ಯಾವುದೇ ನಿಷೇಧಗಳು ಅನ್ವಯಿಸುವುದಿಲ್ಲ ಎಂದು ಅದು ಹೇಳಿದೆ.

ಅತೀ ಹೆಚ್ಚು ಮುಸ್ಲಿಂ ಜನಸಂಖ್ಯೆಯಿರುವ ಇಲ್ಲಿ ಧಾರ್ಮಿಕ ಸೂಕ್ಷ್ಮತೆಗಳಿಗೆ ಅನುಗುಣವಾಗಿ ಮದ್ಯ ಮಾರಾಟ ಮತ್ತು ಸೇವನೆಯ ಮೇಲಿನ ನಿಷೇಧವನ್ನು ತೆಗೆದುಹಾಕಲಾಗಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸಲು  ಗೋಮಾಂಸ ನಿಷೇಧ ಮತ್ತು ಮದ್ಯದ ಮೇಲಿನ ನಿಷೇಧವನ್ನು ತೆಗೆದುಹಾಕುವುದು, ಕಡಲು ಪ್ರದೇಶದಲ್ಲಿ ಕೋಮು ಬಣ್ಣ, ಕೋಮು ಸೌಹಾರ್ದತೆಗೆ ಧಕ್ಕೆ ರಾಷ್ಟ್ರೀಯ ಭದ್ರತೆ ಮೇಲೆ ಪರಿಣಾಮ ಬೀರುತ್ತದೆ.

ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಲಕ್ಷದ್ವೀಪ ಪಂಚಾಯತ್ ನಿಯಂತ್ರಣವು 2021 ರಲ್ಲಿ ಪ್ರಸ್ತಾಪಿಸಿರುವ ಬದಲಾವಣೆಗಳನ್ನು ಗ್ರಾಮ ಪಂಚಾಯಿತಿಗೆ ಸ್ಪರ್ಧಿಸುವ ಅಭ್ಯರ್ಥಿ ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರಬಾರದು. ಯಾವುದೇ ಸ್ಥಳೀಯ ಸಮಾಲೋಚನೆ ಇಲ್ಲದೆ ಅಥವಾ ಸ್ಥಳೀಯ ಸೂಕ್ಷ್ಮತೆಗಳನ್ನು ಗಣನೆಗೆ ತೆಗೆದುಕೊಳ್ಳದೆ ಪ್ರಸ್ತಾಪಿಸಲಾಗಿದೆ ಎಂದು ಅದು ಹೇಳಿದೆ.

“ಈ ಪ್ರತಿಯೊಂದು ಕ್ರಮಗಳು ಅಭಿವೃದ್ಧಿಯಲ್ಲ, ಆದರೆ ಲಕ್ಷದ್ವೀಪದ ಪರಿಸರ ಮತ್ತು ಸಮಾಜವನ್ನು ಗೌರವಿಸುವ ಸ್ಥಾಪಿತ ಅಭ್ಯಾಸಗಳನ್ನು ಉಲ್ಲಂಘಿಸಿ ಅನ್ಯ ಮತ್ತು ಅನಿಯಂತ್ರಿತ ನೀತಿ ನಿರೂಪಣೆಯನ್ನು ಕಡಿಮೆ ಮಾಡುತ್ತದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಒಟ್ಟಿನಲ್ಲಿ ಆಡಳಿತಾಧಿಕಾರಿಗಳ ಕ್ರಮಗಳು ಮತ್ತು ದೂರದೃಷ್ಟಿಯ ಪ್ರಸ್ತಾಪಗಳು, ದ್ವೀಪವಾಸಿಗಳೊಂದಿಗೆ ಸರಿಯಾದ ಸಮಾಲೋಚನೆಯಿಲ್ಲದೆ, ಲಕ್ಷದ್ವೀಪ ಸಮಾಜ, ಆರ್ಥಿಕತೆ,ಭೌಗೋಳಿಕ ವ್ಯವಸ್ಥೆ  ಮೇಲೆ ಆಕ್ರಮಣವನ್ನು ಉಂಟುಮಾಡುತ್ತದೆ.ಹೊರಗಿನ ಪ್ರಪಂಚದ ಹೂಡಿಕೆದಾರರಿಗೆ ಮತ್ತು ದ್ವೀಪಗಳ ಪ್ರವಾಸಿಗರಿಗೆ ಇದು  ಒಂದು ರಿಯಲ್ ಎಸ್ಟೇಟ್ ನಂತಾಗಿದೆ.

“ಈ ಕ್ರಮಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ.ಕೇಂದ್ರಾಡಳಿತ  ಪ್ರದೇಶವನ್ನು  ಪೂರ್ಣ ಸಮಯದ, ಜನರು-ಸೂಕ್ಷ್ಮ ಮತ್ತು ಸ್ಪಂದಿಸುವ ಆಡಳಿತಾಧಿಕಾರಿಗೆ ಒದಗಿಸಬೇಕು ಮತ್ತು ಸುರಕ್ಷಿತ, ಆರೋಗ್ಯ, ಶಿಕ್ಷಣ,  ಆಡಳಿತ, ಆಹಾರ ಸುರಕ್ಷತೆ ಮತ್ತು ಪರಿಸರ ವ್ಯವಸ್ಥೆಗೆ ಸಂಬಂಧಿಸಿರುವ ಜೀವನೋಪಾಯ ಆಯ್ಕೆಗಳು, ದ್ವೀಪವಾಸಿಗಳೊಂದಿಗೆ ಸಮಾಲೋಚಿಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Lakshadweep ಲಕ್ಷದ್ವೀಪದ ಆಡಳಿತಾಧಿಕಾರಿಯನ್ನು ವಾಪಸ್ ಕರೆಸಿಕೊಳ್ಳಿ; ಕೇರಳ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ ಪಿಣರಾಯಿ ವಿಜಯನ್

ಇದನ್ನೂ ಓದಿ:  Save Lakshadweep ಲಕ್ಷದ್ವೀಪದಲ್ಲಿ ಬೀಫ್ ನಿಷೇಧ, ಗೂಂಡಾ ಕಾಯ್ದೆ, ಮದ್ಯ ಮಾರಾಟಕ್ಕೆ ಅನುಮತಿ: ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ನಿರ್ಧಾರಕ್ಕೆ ಜನರ ಆಕ್ರೋಶ

Published On - 4:57 pm, Sun, 6 June 21