Fact Check: ಸಂಭಾಲ್‌ನಲ್ಲಿ ಉತ್ಖನನದ ವೇಳೆ ಮಸೀದಿ ಪತ್ತೆಯಾಗಿದ್ದು ನಿಜವೇ?

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 30, 2024 | 5:06 PM

ಉತ್ತರ ಪ್ರದೇಶದ ಸಂಭಾಲ್‌ನಲ್ಲಿ 36 ವರ್ಷಗಳ ನಂತರ ಹನುಮಾನ್ ಜಿ ದೇವಸ್ಥಾನದ ಬೀಗವನ್ನು ತೆರೆದ ನಂತರ, ಸುತ್ತಮುತ್ತಲಿನ ಪ್ರದೇಶದಲ್ಲಿ ಉತ್ಖನನವನ್ನು ಪ್ರಾರಂಭಿಸಲಾಗಿದೆ. ಇದೀಗ ನೆಲದಡಿಯಲ್ಲಿ ಬೃಹತ್ ರಚನೆಯೊಂದು ಪತ್ತೆಯಾಗಿದೆ. ಇದು ಉತ್ಖನನದ ವೇಳೆ ಪತ್ತೆಯಾದ ಮಸೀದಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗುತ್ತಿದೆ.

Fact Check: ಸಂಭಾಲ್‌ನಲ್ಲಿ ಉತ್ಖನನದ ವೇಳೆ ಮಸೀದಿ ಪತ್ತೆಯಾಗಿದ್ದು ನಿಜವೇ?
ವೈರಲ್​ ಫೋಸ್ಟ್​
Follow us on

ಉತ್ತರ ಪ್ರದೇಶದ ಸಂಭಾಲ್ ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ಶಾಹಿ ಜಾಮಾ ಮಸೀದಿ ಸಮೀಕ್ಷೆ ವೇಳೆ ನಡೆದ ಹಿಂಸಾಚಾರದಲ್ಲಿ ಐವರು ಪ್ರಾಣ ಕಳೆದುಕೊಂಡು ಹಲವರು ಗಾಯಗೊಂಡಿದ್ದರು. ಈ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸುದ್ದಿಯೊಂದು ಹರಿದಾಡುತ್ತದೆ. ಇದರಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ ಮತ್ತು ಸಂಭಾಲ್‌ನಲ್ಲಿ ಉತ್ಖನನದ ಸಮಯದಲ್ಲಿ ಮಸೀದಿ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಉತ್ತರ ಪ್ರದೇಶದ ಸಂಭಾಲ್‌ನಲ್ಲಿ 36 ವರ್ಷಗಳ ನಂತರ ಹನುಮಾನ್ ಜಿ ದೇವಸ್ಥಾನದ ಬೀಗವನ್ನು ತೆರೆದ ನಂತರ, ಸುತ್ತಮುತ್ತಲಿನ ಪ್ರದೇಶದಲ್ಲಿ ಉತ್ಖನನವನ್ನು ಪ್ರಾರಂಭಿಸಲಾಗಿದೆ. ಇದೀಗ ನೆಲದಡಿಯಲ್ಲಿ ಬೃಹತ್ ರಚನೆಯೊಂದು ಪತ್ತೆಯಾಗಿದೆ. ಉತ್ಖನನದ ವೇಳೆ ಪತ್ತೆಯಾದ ರಚನೆಯ ಫೋಟೋ, ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗುತ್ತಿದ್ದು, ಇದು ಮಸೀದಿ ಎಂದು ಅನೇಕರು ಹೇಳುತ್ತಿದ್ದಾರೆ.

ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ಸಂಭಾಲ್‌ನಲ್ಲಿ ಅಗೆಯುವ ಮೂಲಕ ದೇವಾಲಯವನ್ನು ಹುಡುಕಲಾಗುತ್ತಿದೆ. ಆದರೆ ನೆಲದಡಿಯಲ್ಲಿ ಮಸೀದಿ ಮಾತ್ರ ಕಂಡುಬಂದಿದೆ ಎಂದು ಬರೆದಿದ್ದಾರೆ. ಇದೇ ದೇವಸ್ಥಾನವಾಗಿದ್ದರೆ ಇಷ್ಟೊತ್ತಿಗೆ ಇಲ್ಲಿ ಪೂಜೆ ಶುರುವಾಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಸಂಭಾಲ್‌ನಲ್ಲಿ ಉತ್ಖನನ ನಡೆಸಲಾದ ಪ್ರದೇಶದ ಹೆಸರು ಚಂಡೌಸಿ. ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ (ಎಎಸ್‌ಐ) ಚಂಡೌಸಿಯಲ್ಲಿ ಉತ್ಖನನ ಮಾಡುತ್ತಿದೆ ಎಂಬ ಸುದ್ದಿಯನ್ನು ಅನೇಕ ಮಾಧ್ಯಮಗಳು ಪ್ರಕಟಿಸಿವೆ. ಟಿವಿ9 ಭಾರತ್ ವರ್ಷ್ ಕೂಡ ತನ್ನ ಸುದ್ದಿ ವೆಬ್‌ಸೈಟ್‌ಗಳಲ್ಲಿ ಇದಕ್ಕೆ ಸಂಬಂಧಿಸಿದ ವಿಡಿಯೋ ಸುದ್ದಿ ವರದಿ ಮಾಡಿದೆ.

ಇದರಲ್ಲಿರುವ ಮಾಹಿತಿಯ ಪ್ರಕಾರ, ಸಂಭಾಲ್‌ನ ಚಂಡೌಸಿಯಲ್ಲಿ ಉತ್ಖನನದ ಸಮಯದಲ್ಲಿ ಪುರಾತನ ಮೆಟ್ಟಿಲುಬಾವಿ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಈ ಮೆಟ್ಟಿಲುಬಾವಿ ಹಲವು ದಶಕಗಳಿಂದ ಮಣ್ಣು ಮತ್ತು ಕಸದಡಿಯಲ್ಲಿ ಹೂತುಹೋಗಿತ್ತು. ಇದು ಚಂಡೌಸಿಯ ರಾಜ ಆತ್ಮಾರಾಮ್ ಅವರ ಮೆಟ್ಟಿಲುಬಾವಿ ಎಂದು ಹೇಳಲಾಗಿದೆ, ಇದನ್ನು ಸ್ಥಳೀಯ ಜನರು ರಾಣಿ ಸುರೇಂದ್ರ ಬಾಲಿಯ ಮೆಟ್ಟಿಲುಬಾವಿ ಎಂದು ಕರೆಯುತ್ತಾರೆ. ಸ್ಥಳೀಯ ಆಡಳಿತದ ಉತ್ಖನನ ಇನ್ನೂ ನಡೆಯುತ್ತಿದೆ ಎಂಬ ಮಾಹಿತಿ ಇದರಲ್ಲಿದೆ.

संभल: खुदाई के दौरान मिली बावड़ी, मंदिर से क्या है इसका कनेक्शन? देखिए ग्राउंड रिपोर्ट

ಸದ್ಯ ಸಂಭಾಲ್‌ನಲ್ಲಿ ಉತ್ಖನನದ ಕೆಲಸ ಇನ್ನೂ ನಡೆಯುತ್ತಿದೆ. ಅಲ್ಲಿ ದೇವಸ್ಥಾನ ಇರುವ ಸಾಧ್ಯತೆಯಿಂದ ಉತ್ಖನನ ಕಾರ್ಯ ಆರಂಭಿಸಿದ್ದು ನಿಜ, ಆದರೆ ಮಸೀದಿ ಸಿಕ್ಕಿದೆ ಎಂಬುದು ಸಂಪೂರ್ಣ ತಪ್ಪು. ನಮ್ಮ ತನಿಖೆಯಲ್ಲಿ, ಸಂಭಾಲ್‌ನಲ್ಲಿ ನಡೆಯುತ್ತಿರುವ ಉತ್ಖನನದಲ್ಲಿ ಮಸೀದಿ ಕಂಡುಬಂದಿದೆ ಎಂಬ ಹೇಳಿಕೆ ಸುಳ್ಳು ಎಂದು ಕಂಡುಬಂದಿದೆ.

‘ಸಾವಿನ ಬಾವಿ’ ಪತ್ತೆ

ಉತ್ತರ ಪ್ರದೇಶದ ಸಂಭಾಲ್ ನಲ್ಲಿ ಉತ್ಖನನದ ವೇಳೆ ಎರಡು ದಿನಗಳ ಹಿಂದೆಯಷ್ಟೆ ಪುರಾತನ ಬಾವಿಯೊಂದು ಪತ್ತೆಯಾಗಿದೆ. ಇದನ್ನು ಮೃತ್ಯು ಕೂಪ್ ಅಂದರೆ ‘ಸಾವಿನ ಬಾವಿ’ ಎಂದು ಕರೆಯಲಾಗುತ್ತಿದೆ. ಈ ಪುರಾತನ ಬಾವಿಯು ಸದರ್ ಕೊತ್ವಾಲಿ ಪ್ರದೇಶದ ಸರ್ತಾಲ್ ಹೊರಠಾಣೆ ಬಳಿ ಕಂಡುಬಂದಿದೆ. ಡಿ.ಎಂ.ರಾಜೇಂದ್ರ ಪೇಸಿಯವರ ಸೂಚನೆ ಮೇರೆಗೆ ಬಾವಿಯನ್ನು ಅಗೆಯಲಾಗುತ್ತಿದೆ. 19 ಬಾವಿಗಳಲ್ಲಿ ಈ ಬಾವಿಯನ್ನು ವಿಶೇಷ ಬಾವಿ ಎಂದು ಪರಿಗಣಿಸಲಾಗಿದೆ. ಬಾವಿ ಪತ್ತೆಯಾದ ಸ್ಥಳವು ಕಲ್ಕಿ ವಿಷ್ಣು ದೇವಾಲಯದಿಂದ 200 ಮೀಟರ್ ದೂರದಲ್ಲಿದೆ. ಈ ಬಾವಿಯನ್ನು 30 ವರ್ಷಗಳ ಹಿಂದೆ ಅತಿಕ್ರಮಣ ಮಾಡಲಾಗಿದ್ದು, ಸುತ್ತಮುತ್ತಲಿನ ಜನರು ಕಸ ಸುರಿದು ಮುಚ್ಚಿದ್ದರು.

ಸಂಭಾಲ್ ಶಾಹಿ ಜಾಮಾ ಮಸೀದಿಯಿಂದ ಸುಮಾರು 150 ಮೆಟ್ಟಿಲು ದೂರದಲ್ಲಿ ಸಾವಿನ ಬಾವಿ ಪತ್ತೆಯಾಗಿದೆ. ಈ ಬಾವಿ ಪತ್ತೆಯಾದ ಪ್ರದೇಶವು ಹಿಂದೂ ಪ್ರಾಬಲ್ಯದ ಪ್ರದೇಶವಾಗಿದೆ. 19 ಬಾವಿಗಳಲ್ಲಿ ಈ ಬಾವಿಯೂ ಒಂದು ಎಂದು ಸ್ಥಳೀಯರು ಹೇಳುತ್ತಾರೆ. ಮೊದಮೊದಲು ಇಲ್ಲಿಯ ನೀರು ಕುಡಿದು ಭಕ್ತರು ಪೂಜೆಗೆ ಮುಂದಾಗುತ್ತಿದ್ದರು. ಬಾವಿಯ ಪುರಸಭೆಯ ತಂಡವು ಬಾವಿಯನ್ನು ಸ್ವಚ್ಛಗೊಳಿಸುವಲ್ಲಿ ನಿರತವಾಗಿದೆ.

ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ