Fact Check: ಜೊತೆಯಾಗಿ ಕುಳಿತು ಊಟ ಮಾಡಿದ ಮೋದಿ -ಕೇಜ್ರಿವಾಲ್?: ವೈರಲ್ ಫೋಟೋದ ಸತ್ಯಾಂಶ ಇಲ್ಲಿದೆ
ಫೇಸ್‌ಬುಕ್‌ನಲ್ಲಿ ವೈರಲ್ ಆಗುತ್ತಿರುವ ಈ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಊಟದ ಮೇಜಿನ ಬಳಿ ಒಟ್ಟಿಗೆ ಕುಳಿತಿದ್ದಾರೆ. ಇಬ್ಬರ ಮುಖದಲ್ಲೂ ನಗುವಿದ್ದು, ಪ್ರಧಾನಿ ಮೋದಿ ಮತ್ತು ಕೇಜ್ರಿವಾಲ್ ಒಟ್ಟಿಗೆ ಕುಳಿತು ಊಟ ಮಾಡುತ್ತಿರುವಂತೆ ಫೋಟೋವನ್ನು ಪ್ರಸ್ತುತಪಡಿಸಲಾಗಿದೆ. ಈ ವೈರಲ್ ಸುದ್ದಿಯ ಸತ್ಯಾಂಶ ಏನು?, ಇಲ್ಲಿದೆ ನೋಡಿ ಮಾಹಿತಿ

ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಬಹುಮತ ಪಡೆದ ನಂತರ, ಎಲ್ಲರ ಕಣ್ಣುಗಳು ಈಗ ರಾಷ್ಟ್ರ ರಾಜಧಾನಿಯ ಮುಖ್ಯಮಂತ್ರಿ ಹೆಸರಿನ ಮೇಲೆ ನೆಟ್ಟಿವೆ. ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದುಕೊಂಡಿತು, ಆಮ್ ಆದ್ಮಿ ಪಕ್ಷ ತನ್ನ 10 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿತು. ಆಮ್ ಆದ್ಮಿ ಪಕ್ಷ 22 ಸ್ಥಾನಗಳನ್ನು ಗಳಿಸಿತಷ್ಟೆ. ಅದೇ ಸಮಯದಲ್ಲಿ, ಈ ಬಾರಿಯೂ ಕಾಂಗ್ರೆಸ್ ದೆಹಲಿ ವಿಧಾನಸಭೆಯಲ್ಲಿ ತನ್ನ ಖಾತೆಯನ್ನು ತೆರೆದಿಲ್ಲ. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ಒಂದು ಫೋಟೋ ಹಂಚಿಕೊಳ್ಳಲಾಗಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಒಟ್ಟಿಗೆ ಕುಳಿತಿರುವುದು ಕಂಡುಬರುತ್ತದೆ.
ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಈ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅರವಿಂದ್ ಕೇಜ್ರಿವಾಲ್ ಊಟದ ಮೇಜಿನ ಬಳಿ ಒಟ್ಟಿಗೆ ಕುಳಿತಿದ್ದಾರೆ. ಇಬ್ಬರ ಮುಖದಲ್ಲೂ ನಗುವಿದ್ದು, ಪ್ರಧಾನಿ ಮೋದಿ ಮತ್ತು ಕೇಜ್ರಿವಾಲ್ ಒಟ್ಟಿಗೆ ಕುಳಿತು ಊಟ ಮಾಡುತ್ತಿರುವಂತೆ ಫೋಟೋವನ್ನು ಪ್ರಸ್ತುತಪಡಿಸಲಾಗಿದೆ.
ವೈರಲ್ ಆಗುತ್ತಿರುವುದೇನು?:
ಫೇಸ್ಬುಕ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು, ‘‘ಪ್ರಧಾನಿ ನರೇಂದ್ರ ಮೋದಿ ಮತ್ತು ಅರವಿಂದ್ ಕೇಜ್ರಿವಾಲ್ ನೈಟ್ ಡಿನ್ನರ್’’ ಎಂದು ಬರೆದುಕೊಂಡಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಕೆಲವು ಹ್ಯಾಶ್‌ಟ್ಯಾಗ್‌ಗಳನ್ನು ಸಹ ಈ ಪೋಸ್ಟ್‌ನಲ್ಲಿ ಬಳಸಲಾಗಿದೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಫೋಟೋವನ್ನು ಫೆಬ್ರವರಿ 8 ರ ರಾತ್ರಿ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ. ದೆಹಲಿ ಚುನಾವಣೆಗೆ ಸಂಬಂಧಿಸಿದ ಕೀವರ್ಡ್‌ಗಳನ್ನು ಗೂಗಲ್‌ನಲ್ಲಿ ಹುಡುಕಿದಾಗ, ಫೆಬ್ರವರಿ 8 ರಂದು ಚುನಾವಣಾ ಫಲಿತಾಂಶಗಳು ಪ್ರಕಟವಾದ ನಂತರ, ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು ಎಂದು ನಮಗೆ ತಿಳಿದುಬಂದಿತು.
Fact Check: ದುಬೈನ ಬುರ್ಜ್ ಖಲೀಫಾಗೆ ಬೆಂಕಿ?: ಹೊತ್ತಿ ಉರಿಯುತ್ತಿರುವ ವಿಡಿಯೋ ವೈರಲ್
ಆ ದಿನ ಪ್ರಧಾನಿ ಮೋದಿ ಯಾವುದೇ ವಿರೋಧ ಪಕ್ಷ ಅಥವಾ ನಾಯಕರೊಂದಿಗೆ ಭೋಜನ ಕಾರ್ಯಕ್ರಮ ನಡೆಸಲಿಲ್ಲ. ಅದರಲ್ಲೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಜೊತೆಗೆ ಮೋದಿ ಊಟ ಮಾಡಿದ್ದರು ಎಂದಿದ್ದರೆ ಅದು ದೊದ್ಡ ಸುದ್ದಿ ಆಗಿರುತ್ತಿತ್ತು. ಅಂತಹ ಯಾವುದೇ ಸುದ್ದಿ ಕೂಡ ನಮಗೆ ಕಂಡುಬಂದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಹೆಚ್ಚಿನ ತನಿಖೆಗಾಗಿ, ನಾವು AI ಪರಿಕರಗಳ ಸಹಾಯದಿಂದ ಈ ವೈರಲ್ ಫೋಟೋವನ್ನು ಪರಿಶೀಲಿಸಿದ್ದೇವೆ.
D Copy.AI ಮೂಲಕ ಪರಿಶೀಲಿಸಿದಾಗ, ಈ ಫೋಟೋ AI ನಿಂದ ರಚಿತವಾಗಿದೆ ಎಂದು ಕಂಡುಬಂದಿದೆ. ತನಿಖೆಯಲ್ಲಿ, ಈ ಫೋಟೋ 97.25 ಪ್ರತಿಶತ AI ನಿಂದ ಹುಟ್ಟುಕೊಂಡಿದೆ ಎಂದು ಕಂಡುಬಂದಿದೆ. ಈ ಮೂಲಕ ದೆಹಲಿ ಚುನಾವಣಾ ಫಲಿತಾಂಶದ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಒಟ್ಟಿಗೆ ಊಟ ಮಾಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಫೋಟೋ ನಕಲಿ ಎಂದು ನಾವು ಖಚಿತವಾಗಿ ಹೇಳುತ್ತೇವೆ. ನಮ್ಮ ತನಿಖೆಯಲ್ಲಿ ಈ ಫೋಟೋವನ್ನು AI ಮೂಲಕ ರಚಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ