Fact Check: ರಿಷಿ ಸುನಕ್ ಸಿಬ್ಬಂದಿಯ ಪೊಂಗಲ್ ಆಚರಣೆ, ಬಾಳೆಲೆಯಲ್ಲಿ ಊಟ ಮಾಡುತ್ತಿರುವುದು ಕಂಡಿರಾ ಎಂಬ ವೈರಲ್ ವಿಡಿಯೊ ಯುಕೆಯದ್ದು ಅಲ್ಲ

ಯುಕೆ ರಕ್ಷಣಾ ಮತ್ತು ಪ್ರಧಾನಿ ಕಚೇರಿ ಸಿಬ್ಬಂದಿ ಪೊಂಗಲ್/ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಿರುವ ವೈರಲ್ ವಿಡಿಯೊ. ಸ್ವಾಗತಾರ್ಹ ಬದಲಾವಣೆ ಎಂಬ ಶೀರ್ಷಿಕೆಯೊಂದಿಗೆ ಶೇರ್ ಆಗುತ್ತಿರುವ ವಿಡಿಯೊದ ಸತ್ಯಾಸತ್ಯತೆ ಇಲ್ಲಿದೆ.

Fact Check: ರಿಷಿ ಸುನಕ್ ಸಿಬ್ಬಂದಿಯ ಪೊಂಗಲ್ ಆಚರಣೆ, ಬಾಳೆಲೆಯಲ್ಲಿ ಊಟ ಮಾಡುತ್ತಿರುವುದು ಕಂಡಿರಾ ಎಂಬ ವೈರಲ್ ವಿಡಿಯೊ ಯುಕೆಯದ್ದು ಅಲ್ಲ
ರಿಷಿ ಸುನಕ್- ವೈರಲ್ ಆಗಿರುವ ಪೊಂಗಲ್ ಔತಣ ವಿಡಿಯೊ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jan 18, 2023 | 9:52 PM

ದಿ ಇಂಡಿಯನ್ ಎಕ್ಸ್‌ಪ್ರೆಸ್, ಇಂಡಿಯಾ ಟುಡೇ ಪತ್ರಿಕೆ, ಹಲವಾರು ಸುದ್ದಿವಾಹಿನಿಗಳು ಮತ್ತು ಇತ್ತೀಚೆಗೆ ಜನವರಿ 15, 2023 ರಂದು ಪೊಂಗಲ್ ದಿನ (Pongal) ಯುಕೆ ಪ್ರಧಾನಿ ರಿಷಿ ಸುನಕ್ (Rishi Sunak) ಅವರ ಸಿಬ್ಬಂದಿಗಳಿಗಾಗಿ ಆಯೋಜಿಸಿದ್ದ ಊಟದ ಕುರಿತು ವರದಿಗಳನ್ನು ಪ್ರಕಟಿಸಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಊಟದ ವಿಡಿಯೊ ಯುಕೆಯಲ್ಲಿ ರಿಷಿ ಸುನಕ್ ಆಯೋಜಿಸಿದ ಪೊಂಗಲ್ ಆಚರಣೆಯದ್ದಲ್ಲ. ಈ ವಿಡಿಯೊ ಕೆನಡಾದ ವಾಟರ್‌ಲೂನದ್ದು ಎಂದು ಬೂಮ್ ಲೈವ್ ವರದಿ ಮಾಡಿದೆ.ಅಲ್ಲಿ ತಮಿಳು ಸಾಂಸ್ಕೃತಿಕ ಸಂಘದಿಂದ ಪೊಂಗಲ್ ಔತಣವನ್ನು ಆಯೋಜಿಸಲಾಗಿತ್ತು. ತೈ ಪೊಂಗಲ್ ಎಂದೂ ಕರೆಯಲ್ಪಡುವ ಪೊಂಗಲ್, ಭಾರತ ಮತ್ತು ಶ್ರೀಲಂಕಾದಲ್ಲಿ ತಮಿಳಿಗರು ಆಚರಿಸುವ ಹಿಂದೂಗಳ ಸುಗ್ಗಿಯ ಹಬ್ಬ. ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ಇತರ ಜನರು ಸಮುದಾಯ ಭವನದಂತೆ ಕಾಣುವ ಹಾಲ್​​​ನಲ್ಲಿ ಪೊಂಗಲ್ ಹಬ್ಬ ಆಚರಿಸಿ ಊಟ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಭಾರತೀಯರಂತೆ ಬಾಳೆಲೆಯಲ್ಲಿ ಊಟ ಬಡಿಸಿ,ಕೈಯಲ್ಲಿ ಊಟ ಮಾಡುತ್ತಿರುವುದನ್ನು ಕಂಡಿರಾ ಎಂದು ಹಲವಾರು ನೆಟ್ಟಿಗರು ಈ  ವಿಡಿಯೊವನ್ನು ಶೇರ್ ಮಾಡುತ್ತಿದ್ದಾರೆ

ಯುಕೆ ರಕ್ಷಣಾ ಮತ್ತು ಪ್ರಧಾನಿ ಕಚೇರಿ ಸಿಬ್ಬಂದಿ ಪೊಂಗಲ್/ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಿರುವ ವೈರಲ್ ವಿಡಿಯೋ. ಸ್ವಾಗತಾರ್ಹ ಬದಲಾವಣೆ  ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊ ಶೇರ್ ಆಗುತ್ತಿದೆ.

ಫ್ಯಾಕ್ಟ್ ಚೆಕ್

ವೈರಲ್ ವಿಡಿಯೊ ಯುಕೆಯದ್ದಲ್ಲ. ಈ ವಿಡಿಯೊ ಕೆನಡಾದ ವಾಟರ್‌ಲೂನಲ್ಲಿ ನಡೆದ ಕಾರ್ಯಕ್ರಮದ್ದಾಗಿದೆ. ಚಂಪಕ್ ಭೂಮಿಯಾ (@CBhoomia) ಎಂಬ ಬಳಕೆದಾರರು ಈ ವಿಡಿಯೊ ಬಗ್ಗೆ ಟ್ವೀಟ್ ಮಾಡಿ ಹೀಗೆ ಬರೆದಿದ್ದಾರೆ.

ರಿಷಿ ಸುನಕ್ ಯಾವುದೇ ತಮಿಳು ಲಿಂಕ್‌ಗಳನ್ನು ಹೊಂದಿಲ್ಲ. ಇದು ವಾಟರ್‌ಲೂ ಸಿಟಿ, ಕೆನಡಾದಲ್ಲಿನ ವಿಡಿಯೊ. ತಮಿಳು ಅಸೋಸಿಯೇಷನ್ ಆಫ್ ವಾಟರ್‌ಲೂ ನಗರ ಮೇಯರ್ ಮತ್ತು ಪೊಲೀಸ್ ಮುಖ್ಯಸ್ಥರಿಗೆ ಪೊಂಗಲ್ ಕಾರ್ಯಕ್ರಮವನ್ನು ಆಯೋಜಿಸಿದೆ.

ತಮಿಳು ಸಾಂಸ್ಕೃತಿಕ ಸಂಘದ ಫೇಸ್‌ಬುಕ್ ಪುಟದಲ್ಲಿಯೂ ಈ ವಿಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ.

ತಮಿಳು ಕಲ್ಚರಲ್ ಅಸೋಸಿಯೇಷನ್‌ನ ಫೇಸ್‌ಬುಕ್ ಪುಟದಲ್ಲಿನ ವಿಡಿಯೊ ಈ ಔತಣದ ವಿಡಿಯೊ ಯುಕೆ ಅಲ್ಲ, ಕೆನಡಾದ ವಾಟರ್‌ಲೂನಲ್ಲಿ ನಡೆದಿದೆ ಎಂದು ದೃಢಪಡಿಸಿದೆ. ಕಾರ್ಯಕ್ರಮದಲ್ಲಿ ಪ್ರಾದೇಶಿಕ ಅಧ್ಯಕ್ಷ ನಗರ ಮೇಯರ್‌ಗಳು, ಕೌನ್ಸಿಲರ್‌ಗಳು, ಪೊಲೀಸ್ ಮುಖ್ಯಸ್ಥರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್