ದಿ ಇಂಡಿಯನ್ ಎಕ್ಸ್‌ಪ್ರೆಸ್, ಇಂಡಿಯಾ ಟುಡೇ ಪತ್ರಿಕೆ, ಹಲವಾರು ಸುದ್ದಿವಾಹಿನಿಗಳು ಮತ್ತು ಇತ್ತೀಚೆಗೆ ಜನವರಿ 15, 2023 ರಂದು ಪೊಂಗಲ್ ದಿನ (Pongal) ಯುಕೆ ಪ್ರಧಾನಿ ರಿಷಿ ಸುನಕ್ (Rishi Sunak) ಅವರ ಸಿಬ್ಬಂದಿಗಳಿಗಾಗಿ ಆಯೋಜಿಸಿದ್ದ ಊಟದ ಕುರಿತು ವರದಿಗಳನ್ನು ಪ್ರಕಟಿಸಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಊಟದ ವಿಡಿಯೊ ಯುಕೆಯಲ್ಲಿ ರಿಷಿ ಸುನಕ್ ಆಯೋಜಿಸಿದ ಪೊಂಗಲ್ ಆಚರಣೆಯದ್ದಲ್ಲ. ಈ ವಿಡಿಯೊ ಕೆನಡಾದ ವಾಟರ್‌ಲೂನದ್ದು ಎಂದು ಬೂಮ್ ಲೈವ್ ವರದಿ ಮಾಡಿದೆ.ಅಲ್ಲಿ ತಮಿಳು ಸಾಂಸ್ಕೃತಿಕ ಸಂಘದಿಂದ ಪೊಂಗಲ್ ಔತಣವನ್ನು ಆಯೋಜಿಸಲಾಗಿತ್ತು. ತೈ ಪೊಂಗಲ್ ಎಂದೂ ಕರೆಯಲ್ಪಡುವ ಪೊಂಗಲ್, ಭಾರತ ಮತ್ತು ಶ್ರೀಲಂಕಾದಲ್ಲಿ ತಮಿಳಿಗರು ಆಚರಿಸುವ ಹಿಂದೂಗಳ ಸುಗ್ಗಿಯ ಹಬ್ಬ. ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ಇತರ ಜನರು ಸಮುದಾಯ ಭವನದಂತೆ ಕಾಣುವ ಹಾಲ್ನಲ್ಲಿ ಪೊಂಗಲ್ ಹಬ್ಬ ಆಚರಿಸಿ ಊಟ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಭಾರತೀಯರಂತೆ ಬಾಳೆಲೆಯಲ್ಲಿ ಊಟ ಬಡಿಸಿ,ಕೈಯಲ್ಲಿ ಊಟ ಮಾಡುತ್ತಿರುವುದನ್ನು ಕಂಡಿರಾ ಎಂದು ಹಲವಾರು ನೆಟ್ಟಿಗರು ಈ ವಿಡಿಯೊವನ್ನು ಶೇರ್ ಮಾಡುತ್ತಿದ್ದಾರೆ
ಯುಕೆ ರಕ್ಷಣಾ ಮತ್ತು ಪ್ರಧಾನಿ ಕಚೇರಿ ಸಿಬ್ಬಂದಿ ಪೊಂಗಲ್/ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಿರುವ ವೈರಲ್ ವಿಡಿಯೋ. ಸ್ವಾಗತಾರ್ಹ ಬದಲಾವಣೆ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊ ಶೇರ್ ಆಗುತ್ತಿದೆ.
ವೈರಲ್ ವಿಡಿಯೊ ಯುಕೆಯದ್ದಲ್ಲ. ಈ ವಿಡಿಯೊ ಕೆನಡಾದ ವಾಟರ್‌ಲೂನಲ್ಲಿ ನಡೆದ ಕಾರ್ಯಕ್ರಮದ್ದಾಗಿದೆ. ಚಂಪಕ್ ಭೂಮಿಯಾ (@CBhoomia) ಎಂಬ ಬಳಕೆದಾರರು ಈ ವಿಡಿಯೊ ಬಗ್ಗೆ ಟ್ವೀಟ್ ಮಾಡಿ ಹೀಗೆ ಬರೆದಿದ್ದಾರೆ.
#FakeNews ⚡
Fake!#RishiSunak has no Tamilian links.
This is Waterloo City, Canada.Pongal event hosted by Tamil Association of Waterloo for the City Mayor & Police Chief
Pls check below Facebook URL
??@boomlive_in @CodeNameLineMan@AltNews https://t.co/hp2b8fbTqz https://t.co/pRrDVI7tOm— Champak Bhoomia (@CBhoomia) January 17, 2023
ರಿಷಿ ಸುನಕ್ ಯಾವುದೇ ತಮಿಳು ಲಿಂಕ್‌ಗಳನ್ನು ಹೊಂದಿಲ್ಲ. ಇದು ವಾಟರ್‌ಲೂ ಸಿಟಿ, ಕೆನಡಾದಲ್ಲಿನ ವಿಡಿಯೊ. ತಮಿಳು ಅಸೋಸಿಯೇಷನ್ ಆಫ್ ವಾಟರ್‌ಲೂ ನಗರ ಮೇಯರ್ ಮತ್ತು ಪೊಲೀಸ್ ಮುಖ್ಯಸ್ಥರಿಗೆ ಪೊಂಗಲ್ ಕಾರ್ಯಕ್ರಮವನ್ನು ಆಯೋಜಿಸಿದೆ.
ತಮಿಳು ಸಾಂಸ್ಕೃತಿಕ ಸಂಘದ ಫೇಸ್‌ಬುಕ್ ಪುಟದಲ್ಲಿಯೂ ಈ ವಿಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ.
ತಮಿಳು ಕಲ್ಚರಲ್ ಅಸೋಸಿಯೇಷನ್‌ನ ಫೇಸ್‌ಬುಕ್ ಪುಟದಲ್ಲಿನ ವಿಡಿಯೊ ಈ ಔತಣದ ವಿಡಿಯೊ ಯುಕೆ ಅಲ್ಲ, ಕೆನಡಾದ ವಾಟರ್‌ಲೂನಲ್ಲಿ ನಡೆದಿದೆ ಎಂದು ದೃಢಪಡಿಸಿದೆ. ಕಾರ್ಯಕ್ರಮದಲ್ಲಿ ಪ್ರಾದೇಶಿಕ ಅಧ್ಯಕ್ಷ ನಗರ ಮೇಯರ್‌ಗಳು, ಕೌನ್ಸಿಲರ್‌ಗಳು, ಪೊಲೀಸ್ ಮುಖ್ಯಸ್ಥರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ