Fact Check ಸ್ಮೃತಿ ಇರಾನಿ ಓದುತ್ತಿದ್ದದ್ದು ರಾಹುಲ್ ಗಾಂಧಿ ಬಗ್ಗೆ ಇರುವ ಪುಸ್ತಕ? ವೈರಲ್ ಫೋಟೊದ ಸತ್ಯಾಸತ್ಯತೆ ಇಲ್ಲಿದೆ
ಈ ಟ್ವೀಟ್‌ನಲ್ಲಿರುವ ಚಿತ್ರ ನೋಡಿದರೆ ಸ್ಮೃತಿ ಇರಾನಿ ಕೈಯಲ್ಲಿರುವುದು ಮುಖಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೊ ಇರುವ 'ಮೋದಿ@20' ಎಂಬ ಪುಸ್ತಕ.
ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಅವರು ಪುಸ್ತಕವೊಂದನ್ನು ಓದುತ್ತಿದ್ದು ಪುಸ್ತಕದ ಮುಖಪುಟದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ(Rahul Gandhi) ಚಿತ್ರವಿದೆ. ‘Rahul Gandhi’s Day-to-Day Schedule 2022 – 2023’ ಎಂಬುದು ಪುಸ್ತಕದ ಹೆಸರು. ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇದು ಫೋಟೊಶಾಪ್ ಮಾಡಿದ ಚಿತ್ರ. ಸ್ಮೃತಿ ಇರಾನಿಯವರ ದೃಢೀಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಮೂಲ ಫೋಟೋ, ಅವರು ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಜೀವನವನ್ನು ಆಧರಿಸಿದ ‘Modi@20: Dreams meet Delivery’ ಎಂಬ ಶೀರ್ಷಿಕೆಯ ಪುಸ್ತಕವನ್ನು ಓದುತ್ತಿರುವುದನ್ನು ತೋರಿಸುತ್ತದೆ.
कर्म बड़ा होता है दुश्मन भी उस शख्सियत को पढ़ने लगते हैं ! pic.twitter.com/gPDhz1j0ja
— Bharat Jodo (@VinodJakharIN) October 30, 2022
ಫ್ಯಾಕ್ಟ್ ಚೆಕ್ ಈ ವೈರಲ್ ಫೋಟೊ ಬಗ್ಗೆ ಫ್ಯಾಕ್ಟ್ ಚೆಕ್ ನಡೆಸಿರುವ ದಿ ಕ್ವಿಂಟ್ ವೈರಲ್ ಫೋಟೊ ಎಡಿಟ್ ಮಾಡಿದ್ದು ಎಂದು ಕಂಡುಕೊಂಡಿದೆ.ವೈರಲ್ ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಸ್ಮೃತಿ ಇರಾನಿ ಅವರು 18 ಸೆಪ್ಟೆಂಬರ್ 2002 ರಂದು ಮೋದಿ ಪುಸ್ತಕದ ಹಿಂದಿ ಆವೃತ್ತಿಯ ಬಿಡುಗಡೆಗಾಗಿ ಪಾಟ್ನಾದಲ್ಲಿದ್ದಾಗ ಫೋಟೋವನ್ನು ಹಂಚಿಕೊಂಡಿದ್ದರು.
In Patna for Modi@20 pic.twitter.com/05Pt3fQtMP
— Smriti Z Irani (@smritiirani) September 18, 2022
ಈ ಟ್ವೀಟ್‌ನಲ್ಲಿರುವ ಚಿತ್ರ ನೋಡಿದರೆ ಸ್ಮೃತಿ ಇರಾನಿ ಕೈಯಲ್ಲಿರುವುದು ಮುಖಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೊ ಇರುವ ‘ಮೋದಿ@20′ ಎಂಬ ಪುಸ್ತಕ.
ಮೋದಿ@20: ಡ್ರೀಮ್ಸ್ ಮೀಟ್ ಡೆಲಿವರಿ’ ಎಂಬುದು ಮೋದಿಯವರ ಸಾರ್ವಜನಿಕ ಜೀವನದ ಕುರಿತಾದ ಪುಸ್ತಕವಾಗಿದ್ದು, ಇದನ್ನು ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ಎಸ್ ಜೈಶಂಕರ್ ಮತ್ತು ಲೇಖಕರಾದ ಅಮಿಶ್ ತ್ರಿಪಾಠಿ ಮತ್ತು ಸುಧಾ ಮೂರ್ತಿ ಸೇರಿದಂತೆ ಹಲವಾರು ಪ್ರಮುಖ ವ್ಯಕ್ತಿಗಳು ಬರೆದಿದ್ದಾರೆ, ಇದನ್ನು ಮೇ 2022 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಬಿಜೆಪಿಯ ಬಿಹಾರ ಉಸ್ತುವಾರಿ ವಿನೋದ್ ತಾವ್ಡೆ ಅವರೊಂದಿಗೆ ಪುಸ್ತಕದ ಹಿಂದಿ ಆವೃತ್ತಿಯನ್ನು ಬಿಡುಗಡೆ ಮಾಡಲು ಇರಾನಿ ಅವರು ಸೆಪ್ಟೆಂಬರ್ 18 ರಂದು ಬಿಹಾರದ ಪಾಟ್ನಾಕ್ಕೆ ಬಂದಿದ್ದರು.