ಸೆಂಟ್ರಲ್ ವಿಸ್ಟಾ ನಿರ್ಮಾಣ ಸ್ಥಳ ಪರಿಶೀಲಿಸಲು ಬಂದ ಮೋದಿ ಫೋಟೊ ಕ್ಲಿಕ್ಕಿಸಲು ನೆಲದಲ್ಲಿ ಮಲಗಿದ ಫೋಟೊಗ್ರಾಫರ್; ವೈರಲ್ ಫೋಟೊ ಫೇಕ್
PM Narendra Modi: ನೆಲದಲ್ಲಿ ಮಲಗಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೊ ಕ್ಲಿಕ್ ಮಾಡುತ್ತಿರುವ ಫೋಟೊಗ್ರಾಫರ್. ವೈರಲ್ ಫೋಟೊ ಹಿಂದಿರುವ ಸತ್ಯಾಸತ್ಯತೆ ಏನು. ಇಲ್ಲಿದೆ ಫ್ಯಾಕ್ಟ್ಚೆಕ್...
ಸೆಂಟ್ರಲ್ ವಿಸ್ಟಾ ಯೋಜನೆಯ (Central Vista project) ನಿರ್ಮಾಣ ಸ್ಥಳ ಪರಿಶೀಲಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅನಿರೀಕ್ಷಿತ ಭೇಟಿ ನೀಡಿದಾಗ ಛಾಯಾಗ್ರಾಹಕನೊಬ್ಬ ನೆಲದಲ್ಲಿ ಮಲಗಿ ಫೋಟೊ ಕ್ಲಿಕ್ಕಿಸುತ್ತಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆದರೆ ಮೋದಿ ಫೋಟೊ ಕ್ಲಿಕ್ ಮಾಡಲು ಫೋಟೋಗ್ರಾಫರ್ ನೆಲದಲ್ಲಿ ಮಲಗಿಲ್ಲ. ವೈರಲ್ ಆಗಿರುವ ಚಿತ್ರ ಎಡಿಟ್ ಮಾಡಿದ ಫೋಟೊ ಎಂದು ಬೂಮ್ ಲೈವ್ ಫ್ಯಾಕ್ಟ್ ಚೆಕ್ ವರದಿ ಮಾಡಿದೆ.
ಪ್ರಧಾನಿ ಮೋದಿ ಸೆಪ್ಟೆಂಬರ್ 26, 2021 ರಂದು ಹೊಸ ಸಂಸತ್ ಭವನದ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದರು ಮತ್ತು ಉದ್ದೇಶಿತ ಸೆಂಟ್ರಲ್ ವಿಸ್ಟಾ ಯೋಜನೆಯ ಸ್ಥಳದಲ್ಲಿ ಸುಮಾರು ಒಂದು ಗಂಟೆ ಕಳೆದರು. ಮೂರು ದಿನಗಳ ಅಧಿಕೃತ ಅಮೆರಿಕ ಭೇಟಿಯಿಂದ ಹಿಂದಿರುಗಿದ ಬೆನ್ನಲ್ಲೇ ಮೋದಿ ಈ ಸ್ಥಳಕ್ಕೆ ದಿಢೀರ್ ಭೇಟಿ ನೀಡಿದ್ದರು.
ಸೆಂಟ್ರಲ್ ವಿಸ್ಟಾ ದೆಹಲಿಯ 3.2 ಕಿಮೀ ವಿಸ್ತಾರ ಪ್ರದೇಶ ಸೇರಿದಂತೆ ಭಾರತದ ಕೆಲವು ಐತಿಹಾಸಿಕ ಹೆಗ್ಗುರುತುಗಳನ್ನು ಪುನರ್ ಅಭಿವೃದ್ಧಿಪಡಿಸುವ ಮೋದಿ-ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.
#WATCH | PM Narendra Modi visited the construction site of the new Parliament building in New Delhi last night. He spent almost an hour at the site and did a first-hand inspection of the construction status of the new Parliament building.
(Source: PMO) pic.twitter.com/Od7mgxgz4x
— ANI (@ANI) September 27, 2021
ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊ ವೈರಲ್ ಚಲನಚಿತ್ರ ನಿರ್ಮಾಪಕ ಅವಿನಾಶ್ ದಾಸ್, “ನಾಳೆಯ ಫೋಟೊ, ಕ್ಯಾ ಆಂಗಲ್ ಹೈ ” ಎಂಬ ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ. ವಕೀಲರಾದ ದೀಪಿಕಾ ಸಿಂಗ್ ರಜಾವತ್ ಕೂಡ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಉಸ್ತುವಾರಿ ರೋಹನ್ ಗುಪ್ತಾ ಕೂಡ ” Photographer of the Month ” ಎಂದು ಫೋಟೋ ಟ್ವೀಟ್ ಮಾಡಿದ್ದಾರೆ. ಫ್ಯಾಕ್ಟ್ ಚೆಕ್ ವೈರಲ್ ಫೋಟೊದಲ್ಲಿ “ಇಂಡಿಯನ್ ಆರ್ಮಡಾ” ನ ವಾಟರ್ ಮಾರ್ಕ್ ಸ್ಪಷ್ಟವಾಗಿ ಗೋಚರಿಸುತ್ತದೆ. ವಿಡಂಬನಾತ್ಮಕ ಟ್ವಿಟರ್ ಹ್ಯಾಂಡಲ್ “@indian_armada” ಇದೇ ಫೋಟೋವನ್ನು ಸೆಪ್ಟೆಂಬರ್ 27, 2021 ರಂದು ಪೋಸ್ಟ್ ಮಾಡಿದೆ.
ಮೂಲ ಚಿತ್ರವನ್ನು ಪತ್ತೆಹಚ್ಚಲು ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಈ ಫೋಟೊ ನ್ಯೂಸ್ 18 ಲೇಖನದಲ್ಲಿ ಸೆಪ್ಟೆಂಬರ್ 26, 2021 ರಂದು ಪ್ರಕಟಿಸಿರುವ ಸರ್ಚ್ ರಿಸಲ್ಟ್ ಸಿಕ್ಕಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಅದೇ ದಿನಾಂಕದಂದು ಮೋದಿ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
देश के निर्माण में सदैव आगे!
प्रधानमंत्री @NarendraModi जी, जो देश के नवनिर्माण में पिछले 7.5 वर्ष से बिना थके-बिना रुके चलते जा रहे हैं, आज उनका स्वयं नए संसद भवन के निर्माण स्थल को देखने जाना दर्शाता है कि वो अपने समय का हर पल केवल और केवल देश की सेवा में अर्पण कर चुके हैं। pic.twitter.com/RONBE19DC3
— Piyush Goyal (@PiyushGoyal) September 26, 2021
Pxfuel ಹೆಸರಿನ ಸ್ಟಾಕ್ ಫೋಟೋ ವೆಬ್‌ಸೈಟ್‌ನಲ್ಲಿ ಛಾಯಾಗ್ರಾಹಕರ ಚಿತ್ರವನ್ನು ಕೀವರ್ಡ್ ಸರ್ಚ್ ಮಾಡಿ ಬೂಮ್ ಪತ್ತೆ ಹಚ್ಚಿದೆ.
ಫೋಟೊಗ್ರಾಫರ್ನ ಚಿತ್ರವನ್ನು ಮೋದಿ ಚಿತ್ರ ಜತೆ ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡಲಾಗಿದೆ.
ಇದನ್ನೂ ಓದಿ: ನೂತನ ಸಂಸತ್ ಕಟ್ಟಡ ನಿರ್ಮಾಣ ಸ್ಥಳಕ್ಕೆ ಅನಿರೀಕ್ಷಿತ ಭೇಟಿ ನೀಡಿದ ಪ್ರಧಾನಿ ಮೋದಿ