
ಲಕ್ನೋ, ಜೂನ್ 17: ಬನ್ ತಿಂದು ಹಣ ಕೊಡದೆ ಸತಾಯಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು ಬಂಧಿಸಲು ಇದೊಂದೇ ಕಾರಣವಲ್ಲ. ಬನ್ ತಿಂದು ಹಣ ಕೊಟ್ಟಿಲ್ಲ ಸರ್ ಎಂದು ಅಂಗಡಿ ಮಾಲೀಕ ಪೊಲೀಸರಿಗೆ ಕರೆ ಮಾಡಿದ್ದ, ಪೊಲೀಸ್(Police) ಬಂದು ವಿಚಾರಿಸಿದಾಗ ತಾನು ನೋಯ್ಡಾದಲ್ಲಿ ಕೆಲಸ ಮಾಡುತ್ತಿರುವ ಐಪಿಎಸ್ ಅಧಿಕಾರಿ ನಂಗೆ ಸೆಲ್ಯೂಟ್ ಮಾಡುವುದು ಬಿಟ್ಟು ನನ್ನನ್ನೇ ಪ್ರಶ್ನೆ ಮಾಡ್ತಿದ್ದೀರಾ ಎಂದು ಆ ವ್ಯಕ್ತಿ ಗದರಿದ್ದಾನೆ.
ಹಾಗಾದರೆ ಮೊದಲು ಸಮವಸ್ತ್ರದಲ್ಲಿ ಬನ್ನಿ, ಗುರುತಿನ ಚೀಟಿ ತೋರಿಸಿ ಆಮೇಲೆ ಸೆಲ್ಯೂಟ್ ಮಾಡ್ತೀವಿ ಎಂದು ಪೊಲೀಸರು ಕೂಡ ಪಟ್ಟು ಹಿಡಿದಿದ್ದರು.
ವರದಿಗಳ ಪ್ರಕಾರ, ಲಕ್ನೋದ ರಸ್ತೆ ಬದಿಯ ಅಂಗಡಿಯೊಂದರಲ್ಲಿ ಈ ವ್ಯಕ್ತಿ ಬನ್ ತಿಂದು, ಅದಕ್ಕೆ ಆಗಿದ್ದ 40 ರೂಪಾಯಿ ಬಿಲ್ ಕೊಡದೇ ಹೋಗಲು ಯತ್ನಿಸಿದ್ದಾನೆ. ಅಂಗಡಿ ಮಾಲೀಕರು ಇದನ್ನು ವಿರೋಧಿಸಿ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದಾಗ ಆ ವ್ಯಕ್ತಿ ತಾನೊಬ್ಬ ದೊಡ್ಡ ಐಪಿಎಸ್ ಅಧಿಕಾರಿ ಎಂದು ಬೆದರಿಸಲು ಹಾದಿ ತುಳಿದಿದ್ದಾನೆ.
ವಿಚಾರಣೆಗೆ ಬಂದ ಕಾನ್‌ಸ್ಟೆಬಲ್‌ಗಳು ಆತನನ್ನು ಅಣ್ಣಾ ಎಂದು ಕರೆದಾಗ ಕೋಪಗೊಂಡಿದ್ದ, ತಕ್ಷಣವೇ ಪೊಲೀಸರನ್ನು ತಡೆದು, ಅಣ್ಣಾ ಅಂತಾ ಕರೀಬೇಡಿ ಸರ್ ಅನ್ನಿ ಎಂದು ದಬಾಯಿಸಿದ್ದಾನೆ. ನಾನೊಬ್ಬ ಐಪಿಎಸ್ ಅಧಿಕಾರಿ, ನೀವೇಕೆ ನನಗೆ ಸೆಲ್ಯೂಟ್ ಮಾಡುತ್ತಿಲ್ಲ ಎಂದು ಕರ್ತವ್ಯದಲ್ಲಿದ್ದ ಪೊಲೀಸರನ್ನೇ ಪ್ರಶ್ನಿಸಿ ವಿಶೇಷ ಮರ್ಯಾದೆ ನೀಡುವಂತೆ ಹಠ ಹಿಡಿದಿದ್ದಾನೆ.
ಮತ್ತಷ್ಟು ಓದಿ: ಕಸದ ರಾಶಿಯಲ್ಲಿ 59 ಜೀವಂತ ಗುಂಡುಗಳು ಪತ್ತೆ:ಪೊಲೀಸರೇ ಶಾಕ್, ಬೆಚ್ಚಿಬಿದ್ದ ಜನ
ಕಾನ್‌ಸ್ಟೆಬಲ್ ಪ್ರತಿಕ್ರಿಯೆಗೆ ನೆಟ್ಟಿಗರು ಫಿದಾ
ಆರೋಪಿಯ ನಾಟಕಕ್ಕೆ ಬೆದರದ ಕಾನ್‌ಸ್ಟೆಬಲ್ ಅತ್ಯಂತ ಶಾಂತವಾಗಿ ಮತ್ತು ವೃತ್ತಿಪರವಾಗಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಆತನಿಗೆ ಖಡಕ್ ಆಗಿ ಉತ್ತರಿಸಿದ ಕಾನ್‌ಸ್ಟೆಬಲ್, ಮೊದಲು ಸರಿಯಾದ ಪೊಲೀಸ್ ಸಮವಸ್ತ್ರ ಧರಿಸಿ ಬನ್ನಿ, ನಿಮ್ಮ ಐಡಿ ಕಾರ್ಡ್ ತೋರಿಸಿ, ಆಮೇಲೆ ನಾನು ನಿಮಗೆ ಸೆಲ್ಯೂಟ್ ಮಾಡುತ್ತೇನೆ. ಅಲ್ಲಿಯವರೆಗೂ ಇಲ್ಲ ಎಂದು ಹೇಳಿದ್ದಾರೆ. ಕಾನ್‌ಸ್ಟೆಬಲ್ ಅವರ ಈ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.
ವಿಡಿಯೋ
Lucknow: Man impersonating Noida IPS officer steals ₹40 bun packet from a tea stall, refuses to pay. Video shows him arguing with police, demanding ‘full izzat’
Fake cop entitlement at its finest😂
pic.twitter.com/W2dIP6F3B7— Ghar Ke Kalesh (@gharkekalesh) June 15, 2026
ಕೇಳಿದಾಗ ಯಾವುದೇ ಗುರುತಿನ ಚೀಟಿ (ID Card) ತೋರಿಸದ ಹಿನ್ನೆಲೆಯಲ್ಲಿ ಆತ ನಕಲಿ ಎಂಬುದು ಸಾಬೀತಾಗಿದೆ. ಲಕ್ನೋದ ಮಹಾನಗರ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ವಂಚನೆ ಮತ್ತು ಸರ್ಕಾರಿ ಸಿಬ್ಬಂದಿಗೆ ದಾರಿ ತಪ್ಪಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಜೈಲಿಗಟ್ಟಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ