ದೆಹಲಿ ಡಿಸೆಂಬರ್ 06: ದೆಹಲಿ ಮೆಟ್ರೋದಲ್ಲಿ (Delhi Metro) ಇಬ್ಬರು ವ್ಯಕ್ತಿಗಳ ನಡುವಿನ ಹೊಡೆದಾಟದ ಮತ್ತೊಂದು ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ (Social media) ವೈರಲ್ ಆಗಿದ್ದು, ಪ್ರಯಾಣಿಕರು ಆಘಾತ ಮತ್ತು ಆತಂಕಕ್ಕೊಳಗಾಗಿದ್ದಾರೆ. ಈ ವಿಡಿಯೋವನ್ನು ಅಭಿಜೀತ್ ರಾಯ್ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಕ್ಯಾಮೆರಾದಲ್ಲಿ ಸೆರೆಹಿಡಿದು ಪೋಸ್ಟ್ ಮಾಡಿದ್ದಾರೆ. ವಿಡಿಯೊದಲ್ಲಿ ಇಬ್ಬರು ಗಂಡಸರು ಪರಸ್ಪರ ಹೊಡೆದಾಡಿಕೊಳ್ಳುವುದು ಕಾಣಬಹುದು. ಇತರರು ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ. ಇನ್ನು ಕೆಲವರು ಅದನ್ನು ಆನಂದಿಸುತ್ತಾ ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಇದನ್ನು ಸೆರೆ ಹಿಡಿಯುತ್ತಿರುವುದನ್ನು ಕಾಣಬಹುದು.
ದೆಹಲಿ ಮೆಟ್ರೋದಲ್ಲಿ ಒಂದು ಸಾಮಾನ್ಯ ದಿನ. ಸೀಟಿಗಾಗಿ ಇಬ್ಬರು ವ್ಯಕ್ತಿಗಳ ನಡುವೆ ಜಗಳ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊ ಪೋಸ್ಟ್ ಆಗಿದೆ.
ಜಗಳದ ತೀವ್ರತೆಯನ್ನು ಕಂಡು ಜನರು ಆಶ್ಚರ್ಯಚಕಿತರಾಗಿದ್ದಾರೆ. ಆ ರೀತಿಯ ಜನರನ್ನು ಸಬ್ ವೇಯಿಂದ ನಿಷೇಧಿಸಬೇಕು ಎಂದು ಹಲವರು ಹೇಳಿದ್ದಾರೆ. ಒಬ್ಬ ಬಳಕೆದಾರರು “ಅಗ್ಗದ WWE” ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ಬೆಂಗಳೂರು ಮೆಟ್ರೋದಲ್ಲಿ ಇಂತಹ ವಿಡಿಯೊಗಳು ಇಲ್ಲ ಎಂಬುದರ ಬಗ್ಗೆ ಮಾತನಾಡುತ್ತಾ, “ನಮ್ಮ ಬೆಂಗಳೂರು ಮೆಟ್ರೋದಲ್ಲಿ ಇಂಥದ್ದೆಲ್ಲ ಯಾಕೆ ಕಾಣ ಸಿಗುವುದಿಲ್ಲ ಎಂದು ಕೇಳಿದ್ದಾರೆ.
Kalesh b/w Two man inside Delhi metro over Push and Shove for seat
pic.twitter.com/Ih4x5TSRMY— Ghar Ke Kalesh (@gharkekalesh) December 4, 2023
ಮತ್ತೊಬ್ಬ ಬಳಕೆದಾರರು, ಇತ್ತೀಚೆಗೆ ಬಿಡುಗಡೆಯಾದ ಅನಿಮಲ್ ಚಿತ್ರವನ್ನು ಉಲ್ಲೇಖಿಸಿ, “ಅನಿಮಲ್ ದೇಖ್ ಕರ್ ಆಯೆ ಹೋ ಕ್ಯಾ” (ಅನಿಮಲ್ ಸಿನಿಮಾ ನೋಡಿ ಬಂದಿದ್ದೀರಾ) ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ಇಲ್ಲಿ ಟಿಕೆಟ್ ತೆಗೆದುಕೊಂಡರೆ ಉಚಿತವಾಗಿ ಜಗಳವೂ ನೋಡಲು ಸಿಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿಗೆ ಹೋಗುವುದು ನಿಶ್ಚಿತ, ಖಚಿತ: ಬಿಜೆಪಿಯಲ್ಲಿ ಹಲ್ ಚಲ್ ಬಸನಗೌಡ ಪಾಟೀಲ್ ಯತ್ನಾಳ್
ದೆಹಲಿ ಮೆಟ್ರೋದಲ್ಲಿ ವೈರಲ್ ವಿಡಿಯೊಗಳು ಸಾಮಾನ್ಯ ದೃಶ್ಯವಾಗಿದೆ. ದೆಹಲಿ ಮೆಟ್ರೋದಲ್ಲಿ ಜಗಳದಿಂದ ಹಿಡಿದು ಡ್ಯಾನ್ಸ್, ಕಿಸ್ಸಿಂಗ್, ಪ್ರಣಯದಾಟದ ವಿಡಿಯೊಗಳು ಕೂಡಾ ವೈರಲ್ ಆಗಿವೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ