ಪಾನಮತ್ತ ಸ್ನೇಹಿತರ ಪ್ರಮಾದದಿಂದ ಪ್ರಾಣ ಸ್ನೇಹಿತನ ದೇಹ ಛಿದ್ರ ಛಿದ್ರವಾಯ್ತು
ಪಾನಮತ್ತ ಸ್ನೇಹಿತರ ಪ್ರಮಾದದಿಂದ ವ್ಯಕ್ತಿ ಪ್ರಾಣವನ್ನೇ ಕಳೆದುಕೊಂಡ ಘಟನೆ ಮಧ್ಯಪ್ರದೇಶದ ಸೆಹೋರ್ನಲ್ಲಿ ನಡೆದಿದೆ. ಮೂವರು ಅಜ್ಮೀರ್ನಲ್ಲಿ ಅಂತ್ಯಕ್ರಿಯೆ ಮುಗಿಸಿ ಗ್ವಾಲಿಯರ್ನ ಅವಧಪುರಿಗೆ ಹಿಂದಿರುಗುತ್ತಿದ್ದರು. ಮತ್ತು ಭೋಪಾಲ್ನಿಂದ 60 ಕಿ.ಮೀ ದೂರದ ಸೆಹೋರ್ನಲ್ಲಿ ಊಟ ಮಾಡಿದ್ದಾರೆ. ಸಂದೀಪ್ ಮತ್ತು ಅವರ ಸೋದರಸಂಬಂಧಿ ನಡುವೆ ವಾಗ್ವಾದ ಪ್ರಾರಂಭವಾದಾಗ ಪ್ರಯಾಣವನ್ನು ಪುನರಾರಂಭಿಸಿದರು ಮತ್ತು ಸಂದೀಪ್ ಅವರನ್ನು ಕಾರಿನಿಂದ ಹೊರಕ್ಕೆ ತಳ್ಳಿದ ಕಾರಣ ಭಯಗೊಂಡು ಇಬ್ಬರು ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ.

ಸೀಟ್ ಬೆಲ್ಟ್ ಹಾಕಿರುವುದನ್ನು ತಿಳಿಯದೆ ಕಾರಿನ ಬಾಗಿಲು ಹಾಕಿ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ. ಆದರೆ ಸೀಟ್ಬೆಲ್ಟ್ನಲ್ಲಿ ಸಂದೀಪ್ ಸಿಕ್ಕಿಹಾಕಿಕೊಂಡಿದ್ದರು. ರಾತ್ರಿ 9.50ರ ಸಮಯದಲ್ಲಿ ಪಿಸಿಆರ್ಗೆ ಕರೆ ಬಂದಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಕಾರು ಗಂಟೆಗೆ ಸುಮಾರು 100 ಕಿಲೋಮೀಟರ್ ವೇಗದಲ್ಲಿ ಓಡಿಸುತ್ತಿದ್ದರು ಎಂದು ಹೇಳಿದ್ದಾರೆ. ವ್ಯಕ್ತಿ ಪತ್ನಿಯೊಂದಿಗೆ ಫೋನ್ನಲ್ಲಿ ಮಾತನಾಡುತ್ತಿರುವಾಗಲೇ ಅವರನ್ನು ಕಾರಿನಿಂದ ಹೊರಗೆ ತಳ್ಳಲಾಯಿತು. ಕಾರಿನಿಂದ ಹೊರಗೆ ಹಾಕುವಾಗ ಮೊಬೈಲ್ ಕಾರಿನೊಳಗೆಯೇ ಬಿದ್ದಿತ್ತು, ಆರೋಪಿಯು ಕಾರನ್ನು ವೇಗಗೊಳಿಸುತ್ತಲೇ ಇದ್ದಾಗ ಮಹಿಳೆ ಅಸಹಾಯಕಳಾಗಿ ಗಂಡಲ ಅಳಲು ಕೇಳುತ್ತಲೇ ಇದ್ದಳು.
ಕಾರಿನಲ್ಲಿದ್ದವರು ಸಂದೀಪ್ ನಕ್ವಾಲ್ ಅವರ ಅಳಲು ಕೇಳಲಿಲ್ಲ, ಎಂಜಿನ್ ಶಬ್ದದಿಂದಾಗಿ ಅವರ ದೇಹವನ್ನು ಕಾರಿನೊಂದಿಗೆ ಎಳೆದುಕೊಂಡು ಹೋಗುವುದನ್ನು ಗಮನಿಸಲಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ:ಇನ್ನೇನು ಬ್ರಹ್ಮಚರ್ಯದಿಂದ ಗೃಹಸ್ತಾಶ್ರಮಕ್ಕೆ ಕಾಲಿಡಬೇಕಿದ್ದ ಆಟೋ ಚಾಲಕ ಬರ್ಬರ ಹತ್ಯೆ!
ಹೆದ್ದಾರಿ ಹೋಗುತ್ತಿದ್ದ ಕೆಲವರು ಸೆಡಾನ್ನ ಎಡಭಾಗದಲ್ಲಿ ರಕ್ತಸಿಕ್ತ ದೇಹವನ್ನು ಎಳೆದುಕೊಂಡು ಹೋಗುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಬೆನ್ನಟ್ಟಿ ಟೋಲ್ ಪ್ಲಾಜಾ ಬಳಿ ಕಾರನನ್ನು ಹಿಡಿದಿದ್ದಾರೆ. ಕಾರನ್ನು ನಿಲ್ಲಿಸುವಷ್ಟರಲ್ಲಿ ಸಂದೀಪ್ ಅವರ ದೇಹದ ಮಾಂಸ ಮತ್ತು ತಲೆಬುರುಡೆ ಸಂಪೂರ್ಣವಾಗಿ ಕಿತ್ತು ಹೋಗಿತ್ತು. ಕಾರಿನ ಹೊರಭಾಗವು ರಕ್ತದ ಕಲೆಗಳಿಂದ ಆವೃತವಾಗಿತ್ತು.
ಸಂದೀಪ್ ಅವರ 53 ವರ್ಷದ ಸೋದರಸಂಬಂಧಿ ಸಂಜೀವ್ ನಕ್ವಾಲ್ ಮತ್ತು ಅವರ ಸ್ನೇಹಿತ ರಾಜೇಶ್ ಚಾದರ್ (38) ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಬಂಧಿಸಲಾಗಿದ್ದು, ವಿಚಾರಣೆ ವೇಳೆ ಸಂದೀಪ್ ಕಾರಿನೊಂದಿಗೆ ಎಳೆದುಕೊಂಡು ಹೋಗುತ್ತಿರುವುದು ತಮಗೆ ತಿಳಿದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮೃದೇಹ ಛಿದ್ರವಾಗಿದ್ದು, ಪೊಲೀಸರಿಗೆ ಕೂಡ ನೋಡಲು ಸಾಧ್ಯವಾಗಲಿಲ್ಲ. ಪೊಲೀಸರಿಗೆ ಮಾಹಿತಿ ನೀಡಿದ ವಾಹನ ಸವಾರರು ಸಂಜೀವ್ ಮತ್ತು ಚಾಲಕನನ್ನು ಎಚ್ಚರಿಸಲು ಪ್ರಯತ್ನಿಸಿದರು ಆದರೆ ಅವರು ಕುಡಿದ ಸ್ಥಿತಿಯಲ್ಲಿದ್ದ ಕಾರಣ ಗಮನ ಹರಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:15 pm, Wed, 6 December 23