ಸಂಗಾತಿಯನ್ನು ‘ಭೂತ’, ‘ಪಿಶಾಚಿ’ ಎಂದು ಕರೆದರೆ ಕ್ರೌರ್ಯವಲ್ಲ: ಪಾಟ್ನಾ ಹೈಕೋರ್ಟ್

|

Updated on: Mar 31, 2024 | 1:02 PM

ವಿಚ್ಛೇದಿತ ಮಹಿಳೆಯ ವಕೀಲರು "21 ನೇ ಶತಮಾನದಲ್ಲಿ ಮಹಿಳೆಯನ್ನು" "ಭೂತ್" ಮತ್ತು "ಪಿಶಾಚ್" ಎಂದು ಆಕೆಯ ಮಾವ ಕರೆಯುತ್ತಾರೆ, ಇದು "ಅಪಾರ ಕ್ರೌರ್ಯದ ಒಂದು ರೂಪ" ಎಂದು ಹೇಳಿದ್ದರು.ದಂಪತಿ ನಡುವೆ ಜಗಳವಾದಾಗ ಒಬ್ಬರನ್ನೊಬ್ಬರು "ಭೂತ" (ಪ್ರೇತ) ಮತ್ತು "ಪಿಶಾಚ್" (ಪಿಶಾಚಿ) ಎಂದು ಬೈಗುಳ ಬಳಸಿದ್ದರೆ ಅದನ್ನು "ಕ್ರೌರ್ಯ" ಎನ್ನಲಾಗುವುದಿಲ್ಲ ಎಂದು ಪಾಟ್ನಾ ಹೈಕೋರ್ಟ್ ಹೇಳಿದೆ.

ಸಂಗಾತಿಯನ್ನು ಭೂತ, ಪಿಶಾಚಿ ಎಂದು ಕರೆದರೆ ಕ್ರೌರ್ಯವಲ್ಲ: ಪಾಟ್ನಾ ಹೈಕೋರ್ಟ್
ಪಾಟ್ನಾ ಹೈಕೋರ್ಟ್
Follow us on

ಪಟನಾ ಮಾರ್ಚ್ 31: ದಂಪತಿ ನಡುವೆ ಜಗಳವಾದಾಗ ಒಬ್ಬರನ್ನೊಬ್ಬರು “ಭೂತ” (ಪ್ರೇತ) ಮತ್ತು “ಪಿಶಾಚ್” (ಪಿಶಾಚಿ) ಎಂದು ಬೈಗುಳ ಬಳಸಿದ್ದರೆ ಅದನ್ನು “ಕ್ರೌರ್ಯ” ಎನ್ನಲಾಗುವುದಿಲ್ಲ ಎಂದು ಪಾಟ್ನಾ ಹೈಕೋರ್ಟ್ (Patna High Court) ಹೇಳಿದೆ. ಜಾರ್ಖಂಡ್‌ನ (Jharkhand) ಪಕ್ಕದ ಬೊಕಾರೋ ನಿವಾಸಿಗಳಾದ ಸಹ್ದಿಯೋ ಗುಪ್ತಾ ಮತ್ತು ಅವರ ಪುತ್ರ ನರೇಶ್ ಕುಮಾರ್ ಗುಪ್ತಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಬಿಬೇಕ್ ಚೌಧರಿ ಅವರ ಏಕಸದಸ್ಯ ಪೀಠ ಈ ರೀತಿ ಹೇಳಿದೆ. ನರೇಶ್ ಗುಪ್ತಾ ಅವರ ವಿಚ್ಛೇದಿತ ಪತ್ನಿ ತನ್ನ ಸ್ಥಳೀಯ ಸ್ಥಳವಾದ ನವಾಡದಲ್ಲಿ ಸಲ್ಲಿಸಿದ ದೂರಿನ ಮೇರೆಗೆ ತಂದೆ-ಮಗ ಇಬ್ಬರೂ ಬಿಹಾರದ (Bihar) ನಳಂದ ಜಿಲ್ಲೆಯ ನ್ಯಾಯಾಲಯಗಳು ನೀಡಿದ ಆದೇಶವನ್ನು ಪ್ರಶ್ನಿಸಿದ್ದರು.

ವರದಕ್ಷಿಣೆಯಾಗಿ ಕಾರು ನೀಡಲು ಒತ್ತಾಯಿಸಿ ದೈಹಿಕ ಹಿಂಸೆ ನಡೆಸಿದ್ದರು ಎಂದು ಮಹಿಳೆ 1994 ರಲ್ಲಿ ತನ್ನ ಪತಿ ಮತ್ತು ಮಾವ ವಿರುದ್ಧ ಪ್ರಕರಣ ದಾಖಲಿಸಿದ್ದರು. ನಂತರ ತಂದೆ-ಮಗ ಇಬ್ಬರ ಮನವಿ ಮೇರೆಗೆ ಈ ಪ್ರಕರಣವನ್ನು ನವಾಡದಿಂದ ನಳಂದಾಗೆ ವರ್ಗಾಯಿಸಲಾಯಿತು. 2008 ರಲ್ಲಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್‌ನಿಂದ ಒಂದು ವರ್ಷದ ಕಠಿಣ ಜೈಲು ಶಿಕ್ಷೆಗೆ ಗುರಿಯಾದ ನಂತರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಅವರ ಮನವಿಯನ್ನು 10 ವರ್ಷಗಳ ನಂತರ ತಿರಸ್ಕರಿಸಿತು. ಈ ನಡುವೆ ಜಾರ್ಖಂಡ್ ಹೈಕೋರ್ಟ್ ದಂಪತಿಗೆ ವಿಚ್ಛೇದನ ನೀಡಿತ್ತು.

ಪಾಟ್ನಾ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯನ್ನು ವಿರೋಧಿಸಿ, ವಿಚ್ಛೇದಿತ ಮಹಿಳೆಯ ವಕೀಲರು “21 ನೇ ಶತಮಾನದಲ್ಲಿ ಮಹಿಳೆಯನ್ನು” “ಭೂತ್” ಮತ್ತು “ಪಿಶಾಚ್” ಎಂದು ಆಕೆಯ ಮಾವ ಕರೆಯುತ್ತಾರೆ, ಇದು “ಅಪಾರ ಕ್ರೌರ್ಯದ ಒಂದು ರೂಪ” ಎಂದು ಹೇಳಿದ್ದರು. ಆದಾಗ್ಯೂ, ನ್ಯಾಯಾಲಯವು “ಅಂತಹ ವಾದವನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ” ಎಂದು ಗಮನಿಸಿದೆ.

“ವೈವಾಹಿಕ ಸಂಬಂಧಗಳಲ್ಲಿ, ವಿಶೇಷವಾಗಿ ವಿಫಲವಾದ ವೈವಾಹಿಕ ಸಂಬಂಧಗಳಲ್ಲಿ”, “ಗಂಡ ಮತ್ತು ಹೆಂಡತಿ ಇಬ್ಬರೂ” “ಒಬ್ಬರನ್ನೊಬ್ಬರು” “ಕೆಟ್ಟದಾಗಿ” ನಿಂದಿಸಿದ ನಿದರ್ಶನಗಳಿವೆ. ಆದಾಗ್ಯೂ, ಅಂತಹ ಎಲ್ಲಾ ಆರೋಪಗಳನ್ನು ಕ್ರೌರ್ಯ ಎಂದು ಹೇಳಲಾಗುವುದಿಲ್ಲ ಎಂದು ಅದು ಹೇಳಿದೆ.

ಇದನ್ನೂ ಓದಿ: ಕಡಲ್ಗಳ್ಳರಿಂದ ರಕ್ಷಣೆ: ಭಾರತ ಜಿಂದಾಬಾದ್ ಎಂದು ಘೋಷಣೆ ಕೂಗಿದ ಪಾಕಿಸ್ತಾನೀಯರು

“ಎಲ್ಲಾ ಆರೋಪಿಗಳಿಂದ” ಆಕೆಗೆ “ಕಿರುಕುಳ” ಮತ್ತು “ಕ್ರೂರವಾಗಿ ಚಿತ್ರಹಿಂಸೆ” ನೀಡಲಾಗಿದೆ. ಆದರೆ “ಯಾವುದೇ ಅರ್ಜಿದಾರರ ವಿರುದ್ಧ ಯಾವುದೇ ನಿರ್ದಿಷ್ಟ, ವಿಭಿನ್ನ ಆರೋಪಗಳಿಲ್ಲ” ಎಂದು ಹೈಕೋರ್ಟ್ ಗಮನಿಸಿದೆ. ಅದೇ ವೇಳೆ ಕೆಳ ನ್ಯಾಯಾಲಯಗಳು ನೀಡಿದ ತೀರ್ಪುಗಳನ್ನು ರದ್ದುಗೊಳಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 1:01 pm, Sun, 31 March 24