ಕಡಲ್ಗಳ್ಳರಿಂದ ರಕ್ಷಣೆ: ಭಾರತ ಜಿಂದಾಬಾದ್ ಎಂದು ಘೋಷಣೆ ಕೂಗಿದ ಪಾಕಿಸ್ತಾನೀಯರು

Pakistanis Chant India Zindabad: ಗಲ್ಫ್ ಆಫ್ ಏಡನ್ ಬಳಿಕ ಪಾಕಿಸ್ತಾನೀ ನಾವಿಕರು ಇದ್ದ ಇರಾನೀ ಮೀನುಗಾರಿಕೆ ಬೋಟ್​ವೊಂದನ್ನು ಭಾರತದ ನೌಕಾಪಡೆ ರಕ್ಷಣೆ ಮಾಡಿದೆ. ಸೊಮಾಲಿಯಾ ಕಡಲ್ಗಳ್ಳರ ಆಕ್ರಮಣಕ್ಕೆ ಒಳಗಾಗಿದ್ದ ದೋಣಿಯನ್ನು ಐಎನ್​ಎಸ್ ಸುಮೇಧಾದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಇದರಲ್ಲಿದ್ದ 23 ಪಾಕಿಸ್ತಾನೀ ನಾವಿಕರ ಜೀವ ಉಳಿದಿದೆ. ಇದಕ್ಕೆ ಇವರು ಭಾರತಕ್ಕೆ ಕೃತಜ್ಞತೆ ಹೇಳಿದ್ದಾರೆ. ಭಾರತಕ್ಕೆ ಜಿಂದಾಬಾದ್ ಎಂದು ಘೋಷಣೆ ಕೂಗಿರುವ ವಿಡಿಯೋವೊಂದನ್ನು ಅವರು ಕಳುಹಿಸಿದ್ದಾರೆ.

ಕಡಲ್ಗಳ್ಳರಿಂದ ರಕ್ಷಣೆ: ಭಾರತ ಜಿಂದಾಬಾದ್ ಎಂದು ಘೋಷಣೆ ಕೂಗಿದ ಪಾಕಿಸ್ತಾನೀಯರು
ಕಡಲ್ಗಳ್ಳರಿಂದ ಹಡಗನ್ನು ರಕ್ಷಿಸಿದ ಭಾರತೀಯ ನೌಕಾಪಡೆ ಸಿಬ್ಬಂದಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 31, 2024 | 12:42 PM

ನವದೆಹಲಿ, ಮಾರ್ಚ್ 31: ಸಂಕಷ್ಟದ ಪರಿಸ್ಥಿತಿ ಬಂದರೆ ಭಾರತ ಯಾವ ಭೇದವೂ ಇಲ್ಲದೇ ಸಹಾಯ ಮಾಡುತ್ತದೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ ಕಡಲ್ಗಳ್ಳರಿಂದ (Pirates of Somalia) ಇರಾನ್ ಮೀನುಗಾರಿಕಾ ದೋಣಿಯ ರಕ್ಷಣೆಯ ಘಟನೆ. ಕಳೆದ ವಾರ ಕಡಲ್ಗಳ್ಳರ ಆಕ್ರಮಣಕ್ಕೆ ಒಳಗಾಗಿದ್ದ ಇರಾನ್​ನ ಮೀನುಗಾರಿಕಾ ದೋಣಿಯನ್ನು ಭಾರತದ ನೌಕಾಪಡೆ ರಕ್ಷಣೆ ಮಾಡಿತ್ತು. ಯೆಮೆನ್​ನ ಸೊಕೋತ್ರ ದ್ವೀಪದ (sucotra island) ಸಮುದ್ರದ ಭಾಗದಲ್ಲಿ ಈ ಘಟನೆ ನಡೆದಿತ್ತು. ಭಾರತದ ನೌಕಾಪಡೆಯ ಐಎನ್​ಎಸ್ ಸುಮೇಧಾ (INS Sumedha) ಮಾರ್ಚ್ 29ರಂದು ಕ್ಷಿಪ್ರ ಕಾರ್ಯಾಚರಣೆ (rescue operation) ನಡೆಸಿ ಈ ದೋಣಿಯನ್ನು ಕಡಲ್ಗಳ್ಳರಿಂದ ರಕ್ಷಿಸಿತ್ತು. 12 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆದಿತ್ತು. ಈ ಮೀನುಗಾರಿಕಾ ದೋಣಿಯಲ್ಲಿ 23 ಪಾಕಿಸ್ತಾನೀ ಮೀನುಗಾರರು ಇದ್ದರು.

ಭಾರತದ ನೌಕಾಪಡೆಯ ಕಾರ್ಯಾಚರಣೆ ಬಳಿಕ ಈ ಪಾಕಿಸ್ತಾನೀಯರು ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಭಾರತ ಜಿಂದಾಬಾದ್ ಎಂದು ಹೇಳಿ ತಮ್ಮ ಕೃತಜ್ಞತೆ ತೋರ್ಪಡಿಸಿದ್ದಾರೆ. ಈ ದೋಣಿಯ ಮುಖ್ಯಸ್ಥರಾದ ಆಮೀರ್ ಖಾನ್ ವಿಡಿಯೋ ರೆಕಾರ್ಡ್​ನಲ್ಲಿ ಮೆಸೇಜ್ ಬಿಡುಗಡೆ ಮಾಡಿದ್ದಾರೆ. ಸೊಮಾಲಿಯಾದ ಕಡಲ್ಗಳ್ಳರಿಂದ ಭಾರತದ ನೌಕೆ ತಮ್ಮನ್ನು ಕಾಪಾಡಿದೆ ಎಂದು ಇವರು ಹೇಳಿದ್ದಾರೆ. ಕೊನೆಯಲ್ಲಿ ಎಲ್ಲಾ 23 ಮಂದಿ ಪಾಕಿಸ್ತಾನೀಯರು ಭಾರತ ಜಿಂದಾಬಾದ್ ಎಂದಿದ್ದಾರೆ.

ಭಾರತೀಯ ನೌಕಾಪಡೆ ಬಿಡುಗಡೆ ಮಾಡಿರುವ ಫೋಟೋ ಮತ್ತು ವಿಡಿಯೋ

ಸಮುದ್ರ ಪ್ರದೇಶದಲ್ಲಿ, ಅದರಲ್ಲೂ ಟ್ರೇಡಿಂಗ್ ರೂಟ್​ಗಳಲ್ಲಿ ಕಡಲ್ಗಳ್ಳರ ಉಪಟಳ ವಿಪರೀತ ಇದೆ. ಸೊಮಾಲಿಯಾ, ಸಿರಿಯಾ ಮೊದಲಾದ ದೇಶಗಳ ಕಡಲ್ಗಳ್ಳರು ಹಾದು ಹೋಗುವ ಹಡಗುಗಳ ಮೇಲೆ ಆಕ್ರಮಣ ಮಾಡಿ ಅಪಹರಿಸಿರುವ ಹಲವು ಪ್ರಕರಣಗಳು ವರದಿ ಆಗುತ್ತಲೇ ಇರುತ್ತವೆ. ಭಾರತದ್ದೂ ಸೇರಿ ವಿವಿಧ ದೇಶಗಳ ನೌಕಾಪಡೆ ಹಡಗುಗಳು ಗಸ್ತು ತಿರುಗುತ್ತಿರುತ್ತವೆ. ಭಾರತೀಯ ನೌಕಾಪಡೆ ಇತ್ತೀಚೆಗೆ ಸಾಕಷ್ಟು ರಕ್ಷಣಾ ಕಾರ್ಯಾಚರಣೆ ಮಾಡಿದೆ.

ಇದನ್ನೂ ಓದಿ: ಕಡಲ್ಗಳ್ಳರಿಂದ ಇರಾನ್ ಹಡಗು, 23 ಪಾಕಿಸ್ತಾನೀಯರ ರಕ್ಷಿಸಿದ ಭಾರತೀಯ ನೌಕಾಪಡೆ

ಸೊಮಾಲಿಯಾ ಕಡಲ್ಗಳ್ಳರು ವಶಪಡಿಸಿಕೊಂಡಿದ್ದ ಮಾಲ್ಟಾ ದೇಶಕ್ಕೆ ಸೇರಿದ ಸರಕು ಹಡಗನ್ನು ಭಾರತದ ನೌಕಾಪಡೆ ರಕ್ಷಣೆ ಮಾಡಿತ್ತು. ಮೂರು ತಿಂಗಳ ಕಾಲ ಕಡಲ್ಗಳ್ಳರ ವಶದಲ್ಲಿದ್ದ ಈ ಹಡಗನ್ನು ಐಎನ್​ಎಸ್ ಕೋಲ್ಕತಾದ ಸಿಬ್ಬಂದಿ ರಕ್ಷಣೆ ಮಾಡಿದ್ದರು. ಕಡಲ್ಗಳ್ಳರನ್ನು ಹಿಡಿದು ಭಾರತಕ್ಕೆ ಕರೆ ತರಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ