AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕತಂತ್ರ್ ಬಚಾವೋ; ಇಂಡಿಯಾ ಮೈತ್ರಿಕೂಟದ ರ‍್ಯಾಲಿ ವಿರುದ್ಧ ಬಿಜೆಪಿ ವಾಗ್ದಾಳಿ

ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ವಿರುದ್ಧ ಮುಸುಕಿನ ಗುದ್ದಾಟ ನಡೆಸಿದ ಸುಧಾಂಶು ತ್ರಿವೇದಿ, ಇಂಡಿಯಾ ಮೈತ್ರಿಕೂಟ ಕುಟುಂಬವನ್ನು ಉಳಿಸಲು ಮತ್ತು ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದಿದ್ದು ಒಂದೇ ಗರಿಗಳ ಈ ಪಕ್ಷಿಗಳು ತಮ್ಮ ಕುಟುಂಬದ ಆಸ್ತಿ ಮತ್ತು ಭ್ರಷ್ಟಾಚಾರವನ್ನು ರಕ್ಷಿಸಲು ಒಟ್ಟಿಗೆ ಸೇರುತ್ತವೆ. ಇಂಡಿಯಾ ಬ್ಲಾಕ್ ನಲ್ಲಿರುವ ಎಲ್ಲ ಪಕ್ಷಗಳು ರಾಮ ಮಂದಿರದ ವಿರುದ್ಧವಾಗಿವೆ ಎಂದಿದ್ದಾರೆ.

ಲೋಕತಂತ್ರ್ ಬಚಾವೋ; ಇಂಡಿಯಾ ಮೈತ್ರಿಕೂಟದ ರ‍್ಯಾಲಿ ವಿರುದ್ಧ ಬಿಜೆಪಿ ವಾಗ್ದಾಳಿ
ಸುಧಾಂಶು ತ್ರಿವೇದಿ
ರಶ್ಮಿ ಕಲ್ಲಕಟ್ಟ
|

Updated on: Mar 31, 2024 | 1:59 PM

Share

ದೆಹಲಿ ಮಾರ್ಚ್ 31: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಬಂಧನದ ವಿರುದ್ಧ ‘ಲೋಕತಂತ್ರ್ ಬಚಾವೋ’ (Loktantra Bachao) ರ‍್ಯಾಲಿಯಲ್ಲಿ ಇಂಡಿಯಾ (INDIA)ಮೈತ್ರಿಕೂಟವನ್ನು ಭಾನುವಾರ ಟೀಕಿಸಿರುವ ಬಿಜೆಪಿ (BJP), ವಿಪಕ್ಷಗಳು ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರವನ್ನು ರಕ್ಷಿಸಲು ಬಯಸುತ್ತವೆಯೇ ಹೊರತು ಪ್ರಜಾಪ್ರಭುತ್ವವಲ್ಲ ಎಂದು ಹೇಳಿದೆ. ಈ ಪಕ್ಷಗಳು ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿವೆ. ಅವರು ಕುಟುಂಬಗಳಿಂದ ನಿಯಂತ್ರಿಸಲ್ಪಡುತ್ತಾರೆ. ಅವರ ರಾಜಕೀಯದ ಮೂಲ ವಿಧಾನವೆಂದರೆ ಕೋಮು, ಪ್ರಾದೇಶಿಕ, ಭಾಷಾ ವಿಭಜನೆ ಮತ್ತು ಜಾತಿ ವಿಭಜನೆಯನ್ನು ಸೃಷ್ಟಿಸುವುದು. ಅಧಿಕಾರವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಾರೆ. ನಂತರ ತಮ್ಮ ಕುಟುಂಬದ ಹಿತಾಸಕ್ತಿಗಾಗಿ ತಮ್ಮ ಬೊಕ್ಕಸವನ್ನು ತುಂಬುತ್ತಾರೆ. ಈಗ ಅವರು ಈ ಲೋಕತಂತ್ರ್ ಬಚಾವೋ (ಪ್ರಜಾಪ್ರಭುತ್ವ ಉಳಿಸಿ) ಎಂದು ಕೂಗುತ್ತಿದ್ದಾರೆ. ಇದು ಪರಿವಾರ ಬಚಾವೋ ಔರ್ ಭ್ರಷ್ಟಾಚಾರ್ ಛುಪಾವೋ (ಕುಟುಂಬವನ್ನು ಉಳಿಸಿ, ಭ್ರಷ್ಟಾಚಾರವನ್ನು ಮರೆಮಾಡಿ)” ಎಂದು ಬಿಜೆಪಿ ನಾಯಕ ಸುಧಾಂಶು ತ್ರಿವೇದಿ ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ವಿರುದ್ಧ ಮುಸುಕಿನ ಗುದ್ದಾಟ ನಡೆಸಿದ ಸುಧಾಂಶು ತ್ರಿವೇದಿ, ಇಂಡಿಯಾ ಮೈತ್ರಿಕೂಟ ಕುಟುಂಬವನ್ನು ಉಳಿಸಲು ಮತ್ತು ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದಿದ್ದು ಒಂದೇ ಗರಿಗಳ ಈ ಪಕ್ಷಿಗಳು ತಮ್ಮ ಕುಟುಂಬದ ಆಸ್ತಿ ಮತ್ತು ಭ್ರಷ್ಟಾಚಾರವನ್ನು ರಕ್ಷಿಸಲು ಒಟ್ಟಿಗೆ ಸೇರುತ್ತವೆ. ಇಂಡಿಯಾ ಬ್ಲಾಕ್ ನಲ್ಲಿರುವ ಎಲ್ಲ ಪಕ್ಷಗಳು ರಾಮ ಮಂದಿರದ ವಿರುದ್ಧವಾಗಿವೆ ಎಂದಿದ್ದಾರೆ.

ಸುಧಾಂಶು ತ್ರಿವೇದಿ ಸುದ್ದಿಗೋಷ್ಠಿ

ತಮ್ಮ ಹಳೆಯ ಅಪರಾಧಗಳನ್ನು ಮರೆಮಾಡಲು, ಹಿಂದೂ ಧರ್ಮದ ಸಾಮೂಹಿಕ ವಿನಾಶದಂತಹ ನಿರ್ಣಯಗಳನ್ನು ಮಾಡಿದ, ಹಿಂದೂ ಧರ್ಮದ ದೇವರು ಮತ್ತು ದೇವತೆಗಳ ಬಗ್ಗೆ ಅನೇಕ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ ರಾಮಮಂದಿರದ ವಿರುದ್ಧ ಇರುವ ಈ ಎಲ್ಲಾ ಪಕ್ಷಗಳು ತಮ್ಮ ಹಳೆಯ ಭ್ರಷ್ಟಾಚಾರದ ಅಪರಾಧಗಳನ್ನು ಮರೆಮಾಚಲು ಇಂದು ರಾಮಲೀಲಾ ಮೈದಾನವನ್ನು (ದೆಹಲಿಯಲ್ಲಿ) ಬಳಸಿಕೊಳ್ಳುತ್ತಿವೆ ಎಂದು ಅವರು ಹೇಳಿದ್ದಾರೆ.

ಎಎಪಿ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ, “ನಿಮಗೆ ನ್ಯಾಯಾಲಯ ಪರಿಹಾರ ನೀಡದಿದ್ದರೆ, ನ್ಯಾಯಾಲಯವು ನಿಮ್ಮ ವಿರುದ್ಧವಾಗಿದೆ ಎಂದು ಅರ್ಥವೇ? ಇದು ಪ್ರಜಾಪ್ರಭುತ್ವವನ್ನು ಉಳಿಸುವುದಿಲ್ಲ, ಅವರು ತಮ್ಮ ಭ್ರಷ್ಟಾಚಾರವನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ.  ಅದಕ್ಕಾಗಿಯೇ ಎಲ್ಲಾ ಭ್ರಷ್ಟರು ಒಟ್ಟಾಗಿ ಸೇರಿ ತನಿಖೆಯ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ ಎಂದು ಹೇಳಿದ್ದಾರೆ. ಅದೇ ವೇಳೆ ಪ್ರತಿಪಕ್ಷಗಳು ಭ್ರಷ್ಟವಾಗಿವೆ ಎಂದು ಬಿಜೆಪಿ ನಾಯಕಿ ಶೈನಾ ಎನ್‌ಸಿ ಹೇಳಿದ್ದಾರೆ.

“ಒಂದು ರಾಜಕೀಯ ಪಕ್ಷವಾಗಿ ನಾವು ಕೂಡ ಸಮರ್ಥ ವಿರೋಧ ಪಕ್ಷವನ್ನು ಬಯಸುತ್ತೇವೆ. ಆದರೆ ಪ್ರತಿಪಕ್ಷಗಳು ಭ್ರಷ್ಟವಾಗಿದ್ದರೆ, ಏಜೆನ್ಸಿಗಳು ಏಕೆ ಸರಿಯಾದ ಪ್ರಕ್ರಿಯೆಯನ್ನು ತೆಗೆದುಕೊಳ್ಳಬಾರದು? 2003 ರ ನಂತರದ ಇಡಿ ಕೇವಲ ಶಾಸನಬದ್ಧ ಸಂಸ್ಥೆಯಾಗಿಲ್ಲ, ಅದು ಒದಗಿಸಿದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಬಂಧಿಸಲು ಅವಕಾಶ ನೀಡಲಾಗಿದೆ, ಮದ್ಯದ ಹಗರಣದಲ್ಲಿ ಅದು ನಿಖರವಾಗಿ ಸಂಭವಿಸಿದೆ ಎಂದಿದ್ದಾರೆ.

ಆದಾಯ ತೆರಿಗೆ ಇಲಾಖೆಯ ತೆರಿಗೆ ಬೇಡಿಕೆಯನ್ನು ವಿರೋಧಿಸಿದ್ದಕ್ಕಾಗಿ ಅವರು ಕಾಂಗ್ರೆಸ್ ಅನ್ನು ಕಟುವಾಗಿ ಟೀಕಿಸಿದರು. “ಅವರು ನಿರಂತರವಾಗಿ ‘ನಮ್ಮ ಮೇಲೆ ಆದಾಯ ತೆರಿಗೆ ಏಕೆ?’ ಎಂದು ಪ್ರಶ್ನಿಸುತ್ತಾರೆ. ನೀವು ನಿಮ್ಮ ರಿಟರ್ನ್ಸ್ ಅನ್ನು ಸಲ್ಲಿಸದಿದ್ದರೆ, ಏಜೆನ್ಸಿಗಳು ಅಥವಾ ಆಡಳಿತವು ನಿಮ್ಮನ್ನು ಪ್ರಶ್ನಿಸುತ್ತದೆ  ಎಂದಿದ್ದಾರೆ ಅವರು.

ಏತನ್ಮಧ್ಯೆ, ಎಎಪಿ ನಾಯಕ ಗೋಪಾಲ್ ರಾಯ್ ಮಾತನಾಡಿ, ಇಂಡಿಯಾ ಮೈತ್ರಿಕೂಟದ ಏಕತೆಗೆ ಬಿಜೆಪಿ ಹೆದರುತ್ತಿದೆ. ಬಿಜೆಪಿಯವರು ಭಯದ ಭಾಷೆ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಬಂಧಿತ ಕೇಜ್ರಿವಾಲ್​ಗೆ ಬೆಂಬಲವಾಗಿ ವಿಪಕ್ಷಗಳಿಂದ ಮಹಾ ಸಮಾವೇಶ; ದೆಹಲಿಯ ರಾಮಲೀಲಾ ಮೈದಾನದಲ್ಲಿ ‘ಲೋಕತಂತ್ರ ಬಚಾವೊ’

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, ಅರವಿಂದ್ ಕೇಜ್ರಿವಾಲ್ ಅವರ ಬಂಧನದ ಬಗ್ಗೆ ಹಲವಾರು ದೇಶಗಳು ಬಿಜೆಪಿಯನ್ನು ಟೀಕಿಸಿವೆ.“ಬಿಜೆಪಿಯ ಕಳಕಳಿ ಎಂದರೆ ಅದು (ಅಧಿಕಾರದಿಂದ) ಹೋಗುತ್ತಿದೆ.ಇಡಿ, ಸಿಬಿಐ ಮತ್ತು ಐಟಿಯನ್ನು ನಿಯೋಜಿಸಿ ದೇಣಿಗೆ ಎತ್ತುತ್ತಿರುವುದು ಹೊಸ ಆವಿಷ್ಕಾರ… ಬಿಜೆಪಿಯಷ್ಟು ಸುಳ್ಳು ಹೇಳಿದ್ದು ವಿಶ್ವದಲ್ಲಿ ಯಾರೂ ಇಲ್ಲ. ಅರವಿಂದ್ ಕೇಜ್ರಿವಾಲ್ ಬಂಧನದ ನಂತರ ವಿಶ್ವದಾದ್ಯಂತ ಬಿಜೆಪಿ ಟೀಕೆಗೆ ಗುರಿಯಾಗುತ್ತಿದೆ ಎಂದಿದ್ದಾರೆ

ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಇಂಡಿಯಾ ಒಕ್ಕೂಟದ ಮೇಲಿನ ದಾಳಿಯ ಬಗ್ಗೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.

“ಅವರಿಗೆ ಕುಟುಂಬದ ಅರ್ಥವೇ ಅರ್ಥವಾಗುತ್ತಿಲ್ಲ, ನಿಮ್ಮ ಕುಟುಂಬದ ಜವಾಬ್ದಾರಿಯನ್ನು ನೀವು ತೆಗೆದುಕೊಳ್ಳಬೇಕು. ಈಗ ಅವರಿಗೆ ಬೇರೆ ಅಜೆಂಡಾಗಳಿಲ್ಲ. ಚುನಾವಣಾ ಬಾಂಡ್‌ಗಳ ವಿಷಯ ಬೆಳಕಿಗೆ ಬಂದಾಗಿನಿಂದಲೂ ಜನರು ಬಿಜೆಪಿಯ ನಿಜವಾದ ಮುಖವನ್ನು ತಿಳಿದುಕೊಂಡಿದ್ದಾರೆ. ಅಂದರೆ, ‘ಭ್ರಷ್ಟ್ ಜನತಾ ಪಕ್ಷ’ ಈ ಪಕ್ಷ ಭ್ರಷ್ಟರದ್ದು… ಭ್ರಷ್ಟರೆಲ್ಲ ಈಗ ಬಿಜೆಪಿ ಸೇರುತ್ತಿದ್ದಾರೆ” ಎಂದಿದ್ದಾರೆ.

ರ‍್ಯಾಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಪತಿಯ ಅವರ ಸಂದೇಶವನ್ನು ಓದಲಿದ್ದಾರೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಕೂಡ ಸಮಾರಂಭದಲ್ಲಿ ಮಾತನಾಡುವ ನಿರೀಕ್ಷೆಯಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು