Fire Accident: ಕೊಲ್ಕತ್ತಾದ ಸಿನಿಮಾ ಹಾಲ್​ನಲ್ಲಿ ಅಗ್ನಿ ಅವಘಡ; ಬೆಂಕಿ ಆರಿಸಿದ ಅಗ್ನಿಶಾಮಕ ವಾಹನಗಳು

ಬೆನಿಯಾಪುಕೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ 'ಪಾರ್ಕ್ ಶೋ ಹೌಸ್' ಮೇಲಿನ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಆಹುತಿಗೆ ಇಡೀ ಮಹಡಿಯೇ ಸುಟ್ಟುಹೋಗಿದೆ.

Fire Accident: ಕೊಲ್ಕತ್ತಾದ ಸಿನಿಮಾ ಹಾಲ್​ನಲ್ಲಿ ಅಗ್ನಿ ಅವಘಡ; ಬೆಂಕಿ ಆರಿಸಿದ ಅಗ್ನಿಶಾಮಕ ವಾಹನಗಳು
ಕೊಲ್ಕತ್ತಾದ ಸಿನಿಮಾ ಹಾಲ್​ನಲ್ಲಿ ಎಂಕಿ ದುರಂತ
Updated By: ಸುಷ್ಮಾ ಚಕ್ರೆ

Updated on: Jan 18, 2022 | 6:44 PM

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಕೊಲ್ಕತ್ತಾದ ಪಾರ್ಕ್ ಶೋ ಸಿನಿಮಾ ಹಾಲ್‌ನಲ್ಲಿ ಇಂದು ಮಧ್ಯಾಹ್ನ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ನಂದಿಸಲು 5 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಇಂದು ಮಧ್ಯಾಹ್ನ 2.25ರ ಸುಮಾರಿಗೆ ಸಿನಿಮಾ ಥಿಯೇಟರ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಐದು ಅಗ್ನಿಶಾಮಕ ವಾಹನಗಳು 30 ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸಿದವು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆನಿಯಾಪುಕೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ‘ಪಾರ್ಕ್ ಶೋ ಹೌಸ್’ ಮೇಲಿನ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಆಹುತಿಗೆ ಇಡೀ ಮಹಡಿಯೇ ಸುಟ್ಟುಹೋಗಿದೆ. ಆದರೆ, ಈ ದುರಂತದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಕಿ ಹೊತ್ತಿಕೊಳ್ಳಲು ಕಾರಣವೇನೆಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಕಳೆದ ವಾರ ಮಹಾರಾಷ್ಟ್ರದ ಥಾಣೆಯ ಶಿಲ್ಪಾತಾ ಪ್ರದೇಶದ ಖಾನ್ ಕಾಂಪೌಂಡ್‌ನಲ್ಲಿರುವ ಪ್ಲಾಸ್ಟಿಕ್ ಗೋಡೌನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ಪ್ರಕಾರ, ಆರು ಅಗ್ನಿಶಾಮಕ ದಳಗಳು ಸ್ಥಳಕ್ಕೆ ತಲುಪಿದ್ದವು. ಆ ದುರಂತದಲ್ಲೂ ಯಾವುದೇ ಗಾಯ ಅಥವಾ ಸಾವು ನೋವು ಸಂಭವಿಸಿಲ್ಲ.

ಇದನ್ನೂ ಓದಿ: Mumbai Fire Attack: ನವಿ ಮುಂಬೈನ ಶೋರೂಂನಲ್ಲಿ ಭಾರಿ ಅಗ್ನಿದುರಂತ; ಸುಟ್ಟು ಕರಕಲಾದ 40 ಬಿಎಂಡಬ್ಲ್ಯೂ ಕಾರುಗಳು, ಕೋಟ್ಯಂತರ ರೂಪಾಯಿ ನಷ್ಟ

Fire Accident: ತೈವಾನ್​ನಲ್ಲಿ ಭಾರೀ ಬೆಂಕಿ ದುರಂತ; 46 ಜನ ಸಜೀವ ದಹನ, 41ಕ್ಕೂ ಹೆಚ್ಚು ಮಂದಿಗೆ ಗಾಯ

Published On - 6:43 pm, Tue, 18 January 22