AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತ್‌: ಶ್ರೀ ಗಂಗಾನಗರ ಹಮ್ಸಫರ್ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ; ಪ್ರಯಾಣಿಕರು ಸುರಕ್ಷಿತ

ತಿರುಚ್ಚಿರಾಪಳ್ಳಿ-ಶ್ರೀ ಗಂಗಾನಗರ್ ಹಮ್ಸಫರ್ ಎಕ್ಸ್‌ಪ್ರೆಸ್‌ನಲ್ಲಿ ವಲ್ಸಾದ್ ನಿಲ್ದಾಣದಿಂದ ಸೂರತ್ ಕಡೆಗೆ ಹೊರಟ ಕೂಡಲೇ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಪವರ್ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪಕ್ಕದ ಬಿ1 ಕೋಚ್‌ಗೆ ವ್ಯಾಪಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕರಂರಾಜ್ ವಘೇಲಾ ತಿಳಿಸಿದ್ದಾರೆ.

ಗುಜರಾತ್‌: ಶ್ರೀ ಗಂಗಾನಗರ ಹಮ್ಸಫರ್ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ; ಪ್ರಯಾಣಿಕರು ಸುರಕ್ಷಿತ
ಹಮ್ಸಫರ್ ಎಕ್ಸ್​​ಪ್ರೆಸ್ ರೈಲಿನಲ್ಲಿ ಬೆಂಕಿ
ರಶ್ಮಿ ಕಲ್ಲಕಟ್ಟ
|

Updated on:Sep 23, 2023 | 5:37 PM

Share

ವಲ್ಸಾದ್ ಸೆಪ್ಟೆಂಬರ್ 23: ಶನಿವಾರ ಮಧ್ಯಾಹ್ನ ಗುಜರಾತ್‌ನ (Gujarat) ವಲ್ಸಾದ್ ರೈಲು ನಿಲ್ದಾಣದಿಂದ ಮುಂದೆ ಚಲಿಸಿದ  ಶ್ರೀ ಗಂಗಾನಗರ ಹಮ್ಸಫರ್ ಎಕ್ಸ್‌ಪ್ರೆಸ್ (Shri Ganganagar Humsafar Express)ರೈಲಿನ ಜನರೇಟರ್ ಕೋಚ್ ಮತ್ತು ಪಕ್ಕದ ಪ್ಯಾಸೆಂಜರ್ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲನ್ನು ನಿಲ್ಲಿಸಿ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ. ಯಾರಿಗೂ ಗಾಯಗಳಾಗಿರಲಿಲ್ಲ ಎಂದು ಅವರು ಹೇಳಿದರು.

ತಿರುಚ್ಚಿರಾಪಳ್ಳಿ-ಶ್ರೀ ಗಂಗಾನಗರ್ ಹಮ್ಸಫರ್ ಎಕ್ಸ್‌ಪ್ರೆಸ್‌ನಲ್ಲಿ ವಲ್ಸಾದ್ ನಿಲ್ದಾಣದಿಂದ ಸೂರತ್ ಕಡೆಗೆ ಹೊರಟ ಕೂಡಲೇ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಪವರ್ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪಕ್ಕದ ಬಿ1 ಕೋಚ್‌ಗೆ ವ್ಯಾಪಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕರಂರಾಜ್ ವಘೇಲಾ ತಿಳಿಸಿದ್ದಾರೆ, ಈಗ ಬೆಂಕಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ. ಆದರೆ ಈ ಘಟನೆ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ರೈಲನ್ನು ನಿಲ್ಲಿಸಲಾಯಿತು. ಸುರಕ್ಷತೆಗಾಗಿ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ಸಂಖ್ಯೆ 22498 ತಿರುಚ್ಚಿರಾಪಳ್ಳಿ ಜಂಕ್ಷನ್‌ನಿಂದ ಶ್ರೀ ಗಂಗಾನಗರ ಜಂಕ್ಷನ್‌ನ ಪವರ್ ಕಾರ್/ಬ್ರೇಕ್ ವ್ಯಾನ್ ಕೋಚ್‌ನಲ್ಲಿ ವಲ್ಸಾದ್ ಹಾದುಹೋಗುವಾಗ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿದೆ. ಪಕ್ಕದ ಕೋಚ್‌ನ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ  ಎಂದು ಪಶ್ಚಿಮ ರೈಲ್ವೆಯ ಸಿಪಿಆರ್‌ಒ ಸುಮಿತ್ ಠಾಕೂರ್ ಹೇಳಿದ್ದಾರೆ.

ಈ ರೈಲಿನಿಂದ ಕೋಚ್ ಅನ್ನು ಬೇರ್ಪಡಿಸಿದ ನಂತರ, ಅದು ಶೀಘ್ರದಲ್ಲೇ ಹೊರಡಲಿದೆ ಎಂದು ಠಾಕೂರ್  ಹೇಳಿಕೆ  ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.

ಇದನ್ನೂ ಓದಿ: ವಾರಣಾಸಿ: ₹451 ಕೋಟಿ ವೆಚ್ಚದ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ

ಕಳೆದ ತಿಂಗಳು ತಮಿಳುನಾಡಿನ ಮಧುರೈ ರೈಲು ನಿಲ್ದಾಣದಲ್ಲಿ ರಾಮೇಶ್ವರಂ ಕಡೆಗೆ ಹೋಗುವ ರೈಲಿನ ಕಂಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆಗಸ್ಟ್ 26 ರಂದು ಲಕ್ನೋದಿಂದ ರಾಮೇಶ್ವರಂಗೆ ತೆರಳುತ್ತಿದ್ದ ಭಾರತ್ ಗೌರವ್ ಪ್ರವಾಸಿ ರೈಲಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 10 ಜನರು ಸಾವಿಗೀಡಾಗಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:12 pm, Sat, 23 September 23