ಜಾರ್ಖಂಡ್ನಲ್ಲಿ ವಸತಿಗೃಹದಲ್ಲಿ ಅಗ್ನಿ ದುರಂತ; ವೈದ್ಯ, ಆತನ ಪತ್ನಿ ಸೇರಿ ಐವರು ಸಾವು
ಜಾರ್ಖಂಡ್ನ ಧನಾಬಾದ್ನಲ್ಲಿ ಆಸ್ಪತ್ರೆಯೊಂದರ ವಸತಿಗೃಹದಲ್ಲಿ ಅಗ್ನಿ ದುರಂತ ಸಂಭವಿಸಿದ್ದು ವೈದ್ಯ, ಆತನ ಪತ್ನಿ ಸೇರಿ ಐವರು ಮೃತಪಟ್ಟಿದ್ದಾರೆ.
ಜಾರ್ಖಂಡ್: ಜಾರ್ಖಂಡ್ನ ಧನಾಬಾದ್ನಲ್ಲಿ ದುರಂತ ಘಟನೆಯೊಂದು ಸಂಭವಿಸಿದೆ. ಇಲ್ಲಿಯ ಆಸ್ಪತ್ರೆಯೊಂದರ ವಸತಿಗೃಹದಲ್ಲಿ ಅಗ್ನಿ ದುರಂತ ಸಂಭವಿಸಿದ್ದು ವೈದ್ಯ, ಆತನ ಪತ್ನಿ ಸೇರಿ ಐವರು ಮೃತಪಟ್ಟಿದ್ದಾರೆ. ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ, ಶನಿವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಮೃತಪಟ್ಟವರನ್ನು ವೈದ್ಯಕೀಯ ಸಂಸ್ಥೆಯ ಮಾಲೀಕ ಡಾ.ವಿಕಾಸ್ ಹಜ್ರಾ, ಅವರ ಪತ್ನಿ ಡಾ.ಪ್ರೇಮಾ ಹಜ್ರಾ, ಅವರ ಸೋದರಳಿಯ ಸೋಹನ್ ಖಮರಿ ಮತ್ತು ಮನೆಯ ಸಹಾಯಕಿ ತಾರಾದೇವಿ ಎಂದು ಗುರುತಿಸಲಾಗಿದೆ.
#WATCH | Jharkhand: Five people, including a doctor and his wife, died in a fire in the residential complex of a hospital in Dhanbad. pic.twitter.com/pVEmV7Z5MW
— ANI (@ANI) January 28, 2023
ಸ್ಟೋರ್ ರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಉಸಿರುಗಟ್ಟಿದ ಕಾರಣ ಮಾಲೀಕರು ಮತ್ತು ಅವರ ಪತ್ನಿ ಸೇರಿದಂತೆ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಓರ್ವ ವ್ಯಕ್ತಿಯೂ ಗಾಯಗೊಂಡಿದ್ದಾರೆ. ಬೆಂಕಿಗೆ ಕಾರಣ ಏನೆಂಬುವುದು ಇನ್ನೂ ಖಚಿತವಾಗಬೇಕಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ. ನಾಲ್ವರು ಮೃತರನ್ನು ಗುರುತಿಸಲಾಗಿದ್ದು, ಐದನೇ ವ್ಯಕ್ತಿಯನ್ನು ಇನ್ನೂ ಗುರುತಿಸಬೇಕಾಗಿದೆ ಎಂದು ಧನ್‌ಬಾದ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಪ್ರೇಮ್ ಕುಮಾರ್ ತಿವಾರಿ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:33 am, Sat, 28 January 23