ಅಮೆರಿಕದಿಂದ ಭಾರತಕ್ಕೆ ಆಕ್ಸಿಜನ್​ ನೆರವು; ಇಂದು ದೆಹಲಿ ತಲುಪಲಿದೆ 5 ಟನ್​ ಆಮ್ಲಜನಕ ಸಾಂದ್ರಕಗಳನ್ನು ಹೊತ್ತ ಏರ್​ ಇಂಡಿಯಾ

ಈ ಹಿಂದೆ ಮೊದಲನೇ ಅಲೆಯಲ್ಲಿ ಕೊವಿಡ್​ ಸೋಂಕಿನಿಂದ ಕಂಗೆಟ್ಟಿದ್ದ ಅಮೆರಿಕಕ್ಕೆ ಭಾರತ ಸಹಾಯ ಮಾಡಿದೆ. ಈಗ ಭಾರತಕ್ಕೆ ಅಗತ್ಯವಿರುವ ನೆರವನ್ನು ನಾವು ನೀಡುತ್ತೇವೆ ಎಂದು ಜೋ ಬೈಡನ್ ಟ್ವೀಟ್ ಮಾಡಿದ್ದಾರೆ.

ಅಮೆರಿಕದಿಂದ ಭಾರತಕ್ಕೆ ಆಕ್ಸಿಜನ್​ ನೆರವು; ಇಂದು ದೆಹಲಿ ತಲುಪಲಿದೆ 5 ಟನ್​ ಆಮ್ಲಜನಕ ಸಾಂದ್ರಕಗಳನ್ನು ಹೊತ್ತ ಏರ್​ ಇಂಡಿಯಾ
ಅಮೆರಿಕ ಅಧ್ಯಕ್ಷ ಜೋ ಬೈಡನ್​ (ಸಂಗ್ರಹ ಚಿತ್ರ)
Follow us
Lakshmi Hegde
|

Updated on: Apr 26, 2021 | 1:17 PM

ವಾಷಿಂಗ್ಟನ್​ ಡಿಸಿ: ಆಕ್ಸಿಜನ್ ಅಭಾವದ ಸವಾಲಿನೊಂದಿಗೆ ಗುದ್ದಾಡುತ್ತಿರುವ ಭಾರತದ ಸಹಾಯಕ್ಕೆ ಅಮೆರಿಕ ನಿಂತಿದೆ. 5 ಟನ್​ಗಳಷ್ಟು ಆಮ್ಲಜನಕ ಸಾಂದ್ರಕಗಳು ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ನ್ಯೂಯಾರ್ಕ್​ನಿಂದ ಭಾರತಕ್ಕೆ ಕಳಿಸಲಾಗಿದೆ. ಹಾಗೇ, ಭಾರತಕ್ಕೆ ಅಗತ್ಯವಿರುವ ಎಲ್ಲ ರೀತಿಯ ಸಹಾಯ ಮಾಡಲೂ ಅಮೆರಿಕ ಸಿದ್ಧವಿದೆ ಎಂದು ಅಧ್ಯಕ್ಷ ಜೋ ಬೈಡನ್​ ಹೇಳಿದ್ದಾರೆ.

ಈ ಹಿಂದೆ ಮೊದಲನೇ ಅಲೆಯಲ್ಲಿ ಕೊವಿಡ್​ ಸೋಂಕಿನಿಂದ ಕಂಗೆಟ್ಟಿದ್ದ ಅಮೆರಿಕಕ್ಕೆ ಭಾರತ ಸಹಾಯ ಮಾಡಿದೆ. ಈಗ ಭಾರತಕ್ಕೆ ಅಗತ್ಯವಿರುವ ನೆರವನ್ನು ನಾವು ನೀಡುತ್ತೇವೆ ಎಂದು ಜೋ ಬೈಡನ್ ಟ್ವೀಟ್ ಮಾಡಿದ್ದಾರೆ. ಏರ್​ ಇಂಡಿಯಾದ ಎ 102 ವಿಮಾನವು 5000 ಕೆಜಿ ಆಕ್ಸಿಜನ್ ಸಾಂದ್ರಕಗಳನ್ನು ನ್ಯೂಯಾರ್ಕ್​​ ಜಾನ್​ ಎಫ್​ ಕೆನಡಿ ವಿಮಾನನಿಲ್ದಾಣದಿಂದ ನವದೆಹಲಿಗೆ ಸೋಮವಾರ ಮಧ್ಯಾಹ್ನದ ಹೊತ್ತಿಗೆ ತರಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಹಾಗೇ, ನಾಳೆ (ಏಪ್ರಿಲ್​ 27)ರಂದು ಇನ್ನೊಂದು ವಿಮಾನ ಆಮ್ಲಜನಕವನ್ನು ಹೊತ್ತು ಭಾರತಕ್ಕೆ ಬರಲಿದೆ. ಕಳೆದ ವರ್ಷ ಅಲ್ಲಿನ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್​ ಮನವಿ ಮೇರೆಗೆ 50 ಮಿಲಿಯನ್​ಗಳಷ್ಟು ಹೈಡ್ರಾಕ್ಸಿಕ್ಲೊರೋಕ್ವಿನ್​ನ್ನು ಅಮೆರಿಕಕ್ಕೆ ಕಳಿಸಿತ್ತು. ಇದೀಗ ಆ ಸಹಾಯವನ್ನು ನೆನಪಿಸಿಕೊಂಡಿರುವ ಜೋ ಬೈಡನ್​ ತಾವು ಈಗ ಭಾರತಕ್ಕೆ ಸಹಾಯ ಮಾಡಲು ನಿರ್ಧರಿಸಿದ್ದಾಗಿ ಹೇಳಿಕೊಂಡಿದ್ದಾರೆ.

ಅಮೆರಿಕ ಉಪಾಧ್ಯಕ್ಷ ಕಮಲಾ ಹ್ಯಾರಿಸ್​ ಕೂಡ ಭಾರತದೊಂದಿಗೆ ನಾವಿದ್ದೇವೆ ಎಂಬ ಭರವಸೆ ನೀಡಿದ್ದಾರೆ. ಭಾರತಕ್ಕೆ ಅಗತ್ಯ ಇರುವ ಸಹಾಯ ನೀಡುವ ಜತೆ, ಅಲ್ಲಿನ ಜನರು, ಆರೋಗ್ಯ ಕಾರ್ಯಕರ್ತರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇವೆ ಎಂದೂ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Oxygen Shortage: ಹರ್ಯಾಣದ ಆಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕ ಸಿಗದೆ 5 ರೋಗಿಗಳು ಸಾವು

ಮಂಗಳೂರಿನಲ್ಲಿ ಬೈಕ್​ಗೆ ಶ್ವಾನವನ್ನು ಕಟ್ಟಿಕೊಂಡು ಧರಧರ ಎಳೆದೊಯ್ದ ಕಿರಾತಕರು; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್, ಓರ್ವ ಬಂಧನ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್