ಸಿಕ್ಕಿಂ ಪ್ರವಾಹ; 8 ಸೇನಾ ಸಿಬ್ಬಂದಿಗಳ ಮೃತದೇಹ ಪತ್ತೆಯಾಗಿದೆ: ರಾಜನಾಥ್ ಸಿಂಗ್
Flash floods in Sikkim: ಸಿಕ್ಕಿಂನಲ್ಲಿ ಹಿಮನದಿ ಸರೋವರ ಒಡೆದು ಇತ್ತೀಚೆಗೆ ಉಂಟಾದ ಪ್ರವಾಹದಲ್ಲಿ ಎಂಟು ಸೇನಾ ಸಿಬ್ಬಂದಿ ಸೇರಿದಂತೆ ಅಮೂಲ್ಯ ಜೀವಗಳ ನಷ್ಟದಿಂದ ತೀವ್ರ ನೋವಾಗಿದೆ. ಕಾಣೆಯಾದ 23 ಸೈನಿಕರಲ್ಲಿ ಒಬ್ಬರನ್ನು ರಕ್ಷಿಸಲಾಯಿತು. ಎಂಟು ವೀರ ಸೈನಿಕರ ಮೃತದೇಹಗಳು ಸಿಕ್ಕಿವೆ. ಅವರ ತ್ಯಾಗ, ದೇಶ ಸೇವೆ ಮರೆಯಲಾಗದು ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ದೆಹಲಿ ಅಕ್ಟೋಬರ್ 07: ಸಿಕ್ಕಿಂನಲ್ಲಿ ಹಠಾತ್ ಪ್ರವಾಹದ ನಂತರ ನಾಪತ್ತೆಯಾಗಿದ್ದ ಸೈನಿಕರ ಗುಂಪಿನ ಭಾಗವಾಗಿದ್ದ ಎಂಟು ಸೇನಾ ಸಿಬ್ಬಂದಿಯ ಮೃತದೇಹ ಪತ್ತೆಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಹೇಳಿದ್ದಾರೆ. ಸಿಕ್ಕಿಂನಲ್ಲಿ ಮೇಘಸ್ಫೋಟದಿಂದಾಗಿ ತೀಸ್ತಾ ನದಿಯಲ್ಲಿ ಬುಧವಾರ ಭಾರಿ ಪ್ರವಾಹ ಉಂಟಾಗಿ 23 ಸೇನಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಅದೇ ದಿನ ಒಬ್ಬ ಯೋಧನನ್ನು ರಕ್ಷಿಸಲಾಗಿತ್ತು
ಹಠಾತ್ ಪ್ರವಾಹದಲ್ಲಿ ಎಂಟು ಸೇನಾ ಸಿಬ್ಬಂದಿ ಸೇರಿದಂತೆ ಅಮೂಲ್ಯ ಜೀವಗಳ ದುರಂತದ ನಷ್ಟದಿಂದ ನನಗೆ ತೀವ್ರ ನೋವಾಗಿದೆ. ಉಳಿದ 14 ಯೋಧರು ಮತ್ತು ನಾಪತ್ತೆಯಾಗಿರುವ ನಾಗರಿಕರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದರು.
Deeply pained by the tragic loss of precious lives including eight Army personnel in the recent flash floods arising out of glacial lake burst in Sikkim.
Out of the 23 missing soldiers, one was rescued while mortal remains of eight brave soldiers were recovered. Their…
— Rajnath Singh (@rajnathsingh) October 7, 2023
“ಸಿಕ್ಕಿಂನಲ್ಲಿ ಹಿಮನದಿ ಸರೋವರ ಒಡೆದು ಇತ್ತೀಚೆಗೆ ಉಂಟಾದ ಪ್ರವಾಹದಲ್ಲಿ ಎಂಟು ಸೇನಾ ಸಿಬ್ಬಂದಿ ಸೇರಿದಂತೆ ಅಮೂಲ್ಯ ಜೀವಗಳ ನಷ್ಟದಿಂದ ತೀವ್ರ ನೋವಾಗಿದೆ. ಕಾಣೆಯಾದ 23 ಸೈನಿಕರಲ್ಲಿ ಒಬ್ಬರನ್ನು ರಕ್ಷಿಸಲಾಯಿತು. ಎಂಟು ವೀರ ಸೈನಿಕರ ಮೃತದೇಹಗಳು ಸಿಕ್ಕಿವೆ. ಅವರ ತ್ಯಾಗ, ದೇಶ ಸೇವೆ ಮರೆಯಲಾಗದು. ಉಳಿದ 14 ಸೈನಿಕರು ಮತ್ತು ಕಾಣೆಯಾದ ನಾಗರಿಕರನ್ನು ರಕ್ಷಿಸಲು ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ” ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: ಸಿಕ್ಕಿಂನಲ್ಲಿ ಮೇಘಸ್ಫೋಟ: ಸಾವಿನ ಸಂಖ್ಯೆ 56ಕ್ಕೆ ಏರಿಕೆ, ನಾಪತ್ತೆಯಾದ 142 ಜನ
ಹಠಾತ್ ಪ್ರವಾಹವು 25,000 ಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ. 1,200 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿ. ಸಿಕ್ಕಿಂನಲ್ಲಿ 13 ಸೇತುವೆಗಳು ಕೊಚ್ಚಿಹೋಗಿವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ