ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರದಂದು ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿವಿವಿಧ ವಿಚಾರಗಳ ಬಗ್ಗೆ ವಿವರಿಸಿ ಕೊರೊನಾ ಜಾಗತಿಕ ಬಿಕ್ಕಟ್ಟಿನಿಂದ ಪರಿಣಾಮ ಉಂಟಾದ ವಿವಿಧ ವಲಯಗಳಿಗೆ 8 ಅಂಶಗಳ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
1. ಆರೋಗ್ಯ ವಲಯಕ್ಕೆ 50,000 ಕೋಟಿ ರೂಪಾಯಿ, ಇತರ ವಲಯಗಳಿಗೆ 60,000 ಸಾವಿರ ಕೋಟಿ ರೂಪಾಯಿ
2. 1.5 ಲಕ್ಷ ಕೋಟಿ ರೂಪಾಯಿ ಹೆಚ್ಚುವರಿ ಮೊತ್ತ ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್
3. ಮೈಕ್ರೋಫೈನಾನ್ಸ್ ಮೂಲಕ 25 ಲಕ್ಷ ಮಂದಿಗೆ ಒದಗಿಸುವ ವ್ಯಕ್ತಿಗಳಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆ ಮೂಲಕ ಸಾಲ ಒದಗಿಸಲಾಗುತ್ತದೆ.
4. ಪ್ರವಾಸೋದ್ಯಮದ ಪುನರುತ್ಥಾನ: 11,000ಕ್ಕೂ ಹೆಚ್ಚಯ ನೋಂದಾಯಿತ ಪ್ರವಾಸಿ ಗೈಡ್ಗಳು/ಟ್ರಾವೆಲ್ ಮತ್ತು ಇತರ ಪ್ರವಾಸೋದ್ಯಮ ವಲಯದಲ್ಲಿ ತೊಡಗಿಕೊಂಡವರಿಗೆ ಒದಗಿಸಲಾಗುತ್ತದೆ.
5. 5 ಲಕ್ಷ ಮಂದಿಗೆ ಉಚಿತ ವೀಸಾ ನೀಡುವ ಯೋಜನೆ.
6. ಆತ್ಮನಿರ್ಭರ್ ಭಾರತ್ ರೋಜ್ಗಾರ್ ಯೋಜನಾ ವಿಸ್ತರಣೆ
7. ಡಿಎಪಿ ಮತ್ತು ಪಿಅಂಡ್ಕೆ ಗೊಬ್ಬರದ ಮೇಲೆ ಹೆಚ್ಚುವರಿ ಸಬ್ಸಿಡಿ (ಈ ಹಿಂದೆ ಘೋಷಣೆ ಮಾಡಲಾಗಿತ್ತು)
8. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ವಿಸ್ತರಣೆ (PMGKAY) (ಈ ಹಿಂದೆ ಘೋಷಣೆ ಮಾಡಲಾಗಿತ್ತು)
ಇದನ್ನೂ ಓದಿ: ಕೊವಿಡ್ ಬಾಧಿತ ವಲಯಗಳಿಗೆ 1.1 ಲಕ್ಷ ಕೋಟಿ ಸಾಲ ಖಾತರಿ ಯೋಜನೆ ಘೋಷಿಸಿದ ನಿರ್ಮಲಾ ಸೀತಾರಾಮನ್
ಕೊವಿಡ್ ವ್ಯಾಕ್ಸಿನೇಶನ್ ಜಾಗೃತಿ ಮೂಡಿಸಲು ಹೊಸ ಪ್ರಯತ್ನ; ಕಲೆಗಾರನ ಕರಾಮತ್ತಿಗೆ ಪ್ರಶಂಸೆ
(FM Nirmala Sitharaman announces 8 Relief Package in press meet)
Published On - 3:48 pm, Mon, 28 June 21