Jammu And Kashmir: ಜಮ್ಮುವಿನಲ್ಲಿ ಬೈಸಾಖಿ ಸಂಭ್ರಮಾಚರಣೆ ವೇಳೆ ಕಾಲು ಸೇತುವೆ ಕುಸಿದು 40 ಮಂದಿಗೆ ಗಾಯ
ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ಬೈಸಾಖಿ ಸಂಭ್ರಮಾಚರಣೆ ವೇಳೆ ಕಾಲು ಸೇತುವೆ ಕುಸಿದು 40 ಮಂದಿಗೆ ಗಾಯಗೊಂಡಿದ್ದಾರೆ.
ಉಧಂಪುರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಉಧಂಪುರದಲ್ಲಿ ಬೈಸಾಖಿ ಸಂಭ್ರಮಾಚರಣೆ ವೇಳೆ ಕಾಲು ಸೇತುವೆ ಕುಸಿದು 40 ಜನರು ಗಾಯಗೊಂಡಿದ್ದಾರೆ. ಬೈಸಾಖಿ ಆಚರಣೆಯ ಸಂದರ್ಭದಲ್ಲಿ ಚೆನಾನಿ ಬ್ಲಾಕ್‌ನ ಬೈನ್ ಗ್ರಾಮದ ಬೇಣಿ ಸಂಗಮದಲ್ಲಿ ಈ ಘಟನೆ ವರದಿಯಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ವಿಭಾಗೀಯ ಆಯುಕ್ತ (ಜಮ್ಮು) ರಮೇಶ್ ಕುಮಾರ್, ಸೇತುವೆಯ ಮೇಲೆ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ್ದರಿಂದ ಓವರ್‌ಲೋಡ್‌ನಿಂದ ಸೇತುವೆ ಕುಸಿದಿದೆ. ಪೊಲೀಸರು ಮತ್ತು ಪರಿಹಾರ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ.
#WATCH | J&K: A footbridge collapsed during the Baisakhi celebration at Beni Sangam in Bain village in Udhampur’s Chenani Block
Six people were injured during the incident. A rescue operation is underway. Police and other teams have reached the site: Dr Vinod, SSP Udhampur… pic.twitter.com/2jGn1QxLpX
— ANI (@ANI) April 14, 2023
ಜಿಲ್ಲೆಯ ಬೈನ್ ಗ್ರಾಮದ ಬೇಣಿ ಸಂಗಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ 40 ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಪೊಲೀಸರು ಮತ್ತು ಇತರ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿದೆ ಎಂದು ಎಸ್‌ಎಸ್‌ಪಿ ಉಧಂಪುರ ಡಾ.ವಿನೋದ್ ತಿಳಿಸಿದ್ದಾರೆ.
Published On - 3:45 pm, Fri, 14 April 23