ವಿದೇಶಿಯರಿಗೂ ಭಾರತದಲ್ಲಿ ಕೊವಿಡ್ ಲಸಿಕೆ ಪಡೆಯಬಹುದು; ಕೊವಿನ್​​ನಲ್ಲಿ ನೋಂದಣಿ ಅಗತ್ಯ

ವಿದೇಶಿಯರಿಗೂ ಭಾರತದಲ್ಲಿ ಕೊವಿಡ್ ಲಸಿಕೆ ಪಡೆಯಬಹುದು; ಕೊವಿನ್​​ನಲ್ಲಿ ನೋಂದಣಿ ಅಗತ್ಯ
ಪ್ರಾತಿನಿಧಿಕ ಚಿತ್ರ

COVID19 vaccine: ದೇಶಿ ಪ್ರಜೆಗಳು ಈಗ ಭಾರತದಲ್ಲಿ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಸೋಮವಾರ ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ.

TV9kannada Web Team

| Edited By: Rashmi Kallakatta

Aug 09, 2021 | 7:47 PM

ದೆಹಲಿ:  ವಿದೇಶಿಯರಿಗೂ ಭಾರತದಲ್ಲಿ ಕೊರೊನಾವೈರಸ್  ವಿರುದ್ಧದ ಲಸಿಕೆಗಳನ್ನು  ಪಡೆಯಬಹುದಾಗಿದೆ. ಅದಕ್ಕಾಗಿ ಕೊವಿನ್ (CoWIN) ಪೋರ್ಟಲ್​​ನಲ್ಲಿ  ನೋಂದಣಿ  ಮಾಡಿರಬೇಕು. ವಿದೇಶಿ ಪ್ರಜೆಗಳು ಈಗ ಭಾರತದಲ್ಲಿ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಸೋಮವಾರ ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ. CoWIN ಪೋರ್ಟಲ್‌ನಲ್ಲಿ ನೋಂದಣಿ ಮಾಡುವಾಗ ವಿದೇಶಿ ಪ್ರಜೆಗಳು ತಮ್ಮ ಪಾಸ್‌ಪೋರ್ಟ್ ಅನ್ನು ಗುರುತಿನ ದಾಖಲೆಯಾಗಿ ಬಳಸಬಹುದು. ಒಮ್ಮೆ ಅವರು ಈ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡ ನಂತರ, ಅವರು ಲಸಿಕೆಗಾಗಿ ಸ್ಲಾಟ್ ಪಡೆಯುತ್ತಾರೆ ಎಂದು ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಗಮನಾರ್ಹ ಸಂಖ್ಯೆಯ ವಿದೇಶಿ ಪ್ರಜೆಗಳು ಭಾರತದಲ್ಲಿ ವಾಸಿಸುತ್ತಿದ್ದಾರೆ, ವಿಶೇಷವಾಗಿ ದೊಡ್ಡ ಮಹಾನಗರಗಳಲ್ಲಿ ಇವರು ಹೆಚ್ಚಿನ  ಸಂಖ್ಯೆಯಲ್ಲಿದ್ದಾರೆ.  ಈ ಪ್ರದೇಶಗಳಲ್ಲಿ ಹೆಚ್ಚಿನ ಜನಸಂಖ್ಯಾ ಸಾಂದ್ರತೆಯಿಂದಾಗಿ ಕೊವಿಡ್ -19 ಹರಡುವ ಸಾಧ್ಯತೆ ಹೆಚ್ಚಾಗಿದೆ. ಅಂತಹ ಯಾವುದೇ ಸಂಭವನೀಯತೆಯನ್ನು ಎದುರಿಸಲು, ಎಲ್ಲಾ ಅರ್ಹ ವ್ಯಕ್ತಿಗಳಿಗೆ ಲಸಿಕೆ ಹಾಕುವುದು ಮುಖ್ಯವಾಗಿದೆ.

ಈ ಕ್ರಮವು ಭಾರತದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಅದೇ ವೇಳೆ ಭಾರತದಲ್ಲಿ ವಾಸಿಸುತ್ತಿರುವ ಲಸಿಕೆ ಹಾಕದ ವ್ಯಕ್ತಿಗಳಿಂದ ಸೋಂಕಿನ ಮತ್ತಷ್ಟು ವರ್ಗಾವಣೆಯ ಸಾಧ್ಯತೆಗಳನ್ನು ತಗ್ಗಿಸುತ್ತದೆ. ಇದು ಕೊವಿಡ್ -19 ವೈರಸ್ ಹರಡುವುದರಿಂದ ಒಟ್ಟಾರೆ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.

ರಾಷ್ಟ್ರೀಯ ಕೊವಿಡ್ -19 ಲಸಿಕೆ ಕಾರ್ಯಕ್ರಮವನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 16 ನೇ ಜನವರಿ 2021 ರಿಂದ ಜಾರಿಗೆ ತರಲಾಗಿದೆ. ಪ್ರಸ್ತುತ ಹಂತದಲ್ಲಿ ಲಸಿಕೆ ಕಾರ್ಯಕ್ರಮವು 18 ವರ್ಷ ಮತ್ತು ಮೇಲ್ಪಟ್ಟ ಎಲ್ಲ ನಾಗರಿಕರನ್ನು ಒಳಗೊಂಡಿದೆ. 9 ನೇ ಆಗಸ್ಟ್, 2021 ರ ಹೊತ್ತಿಗೆ ಭಾರತವು ದೇಶಾದ್ಯಂತ 51 ಕೋಟಿಗೂ ಹೆಚ್ಚು ಲಸಿಕೆ ಪ್ರಮಾಣವನ್ನು ನೀಡಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಇದನ್ನೂ ಓದಿ:ಇಸ್ರೇಲ್‌ನ ಎನ್​ಎಸ್​ಒ ಗ್ರೂಪ್ ಕಂಪನಿ ಜತೆ ವ್ಯವಹಾರ ನಡೆಸಿಲ್ಲ: ರಾಜ್ಯಸಭೆಯಲ್ಲಿ ಕೇಂದ್ರದ ರಕ್ಷಣಾ ಇಲಾಖೆಯಿಂದ ಉತ್ತರ 

(Foreigners now can get covid vaccine in India have to register in CoWIN portal)

Follow us on

Related Stories

Most Read Stories

Click on your DTH Provider to Add TV9 Kannada