ಜೆಪಿ ನಡ್ಡಾ, ಅಣ್ಣಾಮಲೈ ಸಮ್ಮುಖದಲ್ಲಿ ಎಐಎಡಿಎಂಕೆ ಮಾಜಿ ನಾಯಕರು ಬಿಜೆಪಿಗೆ ಸೇರ್ಪಡೆ

|

Updated on: Feb 07, 2024 | 1:03 PM

ಎಐಎಡಿಎಂಕೆಯ ಮಾಜಿ ನಾಯಕರು ಬುಧವಾರ ನವದೆಹಲಿಯಲ್ಲಿ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದರು. ಬಿಜೆಪಿಗೆ ಸೇರ್ಪಡೆಯಾದ ಮಾಜಿ ಎಐಎಡಿಎಂಕೆ ನಾಯಕರಲ್ಲಿ ಕೆ ವಡಿವೇಲ್, ಎಂವಿ ರತ್ನಂ, ಆರ್ ಚಿನ್ನಸ್ವಾಮಿ ಮತ್ತು ಪಿ ಎಸ್ ಕಂದಸಾಮಿ ಸೇರಿದ್ದಾರೆ. ಈ ನಾಯಕರು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಂತೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮತ್ತು ಇತರ ಹಿರಿಯ ಬಿಜೆಪಿ ನಾಯಕರು ಉಪಸ್ಥಿತರಿದ್ದರು.

ಜೆಪಿ ನಡ್ಡಾ, ಅಣ್ಣಾಮಲೈ ಸಮ್ಮುಖದಲ್ಲಿ ಎಐಎಡಿಎಂಕೆ ಮಾಜಿ ನಾಯಕರು ಬಿಜೆಪಿಗೆ ಸೇರ್ಪಡೆ
ಬಿಜೆಪಿ
Follow us on

ಎಐಎಡಿಎಂಕೆ(AIADMK) ಜತೆಗಿನ ಸಂಬಂಧ ಕಡಿದುಕೊಂಡ ಬಳಿಕ ಮುಂಬರುವ ಲೋಕಸಭೆ ಚುನಾವಣೆ(Lok Sabha Election)ಗೆ ತಮಿಳುನಾಡಿನಲ್ಲಿ ತೃತೀಯ ರಂಗ ರಚನೆಗೆ ತೀವ್ರ ಪ್ರಯತ್ನ ನಡೆಸುತ್ತಿರುವ ಬಿಜೆಪಿ, ಇತರ ಪಕ್ಷಗಳ ನಾಯಕರನ್ನೂ ಸೇರಿಸಿ ಪಕ್ಷದ ನೆಲೆಯನ್ನು ವಿಸ್ತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ತಮಿಳುನಾಡು ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ, ಮಾಜಿ ಶಾಸಕರು ಸೇರಿದಂತೆ ಎಐಎಡಿಎಂಕೆ ಪಾಳೆಯದ ನಾಯಕರ ಗುಂಪು ಬಿಜೆಪಿಗೆ ಸೇರ್ಪಡೆಗೊಂಡಿದೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಪಕ್ಷದ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಅವರೊಂದಿಗೆ ನಿನ್ನೆ ಸಂಜೆ ರಾಷ್ಟ್ರ ರಾಜಧಾನಿಗೆ ಆಗಮಿಸಿದ ನಾಯಕರ ಸಂಪೂರ್ಣಪಟ್ಟಿ ಇಲ್ಲಿದೆ.
ಕೆ ವಡಿವೇಲ್ ಮಾಜಿ ಶಾಸಕ – ಕರೂರ್

ಪಿ.ಎಸ್.ಕಂದಸಾಮಿ- ಅರವಕುರಿಚಿ

ವಲಂಗೈಮಾನ್‌ನ ಎಐಎಡಿಎಂಕೆ ಮಾಜಿ ಸಚಿವ ಗೋಮತಿ ಶ್ರೀನಿವಾಸನ್

ಕೊಯಮತ್ತೂರಿನ ಸಿಂಗಾನಲ್ಲೂರಿನ ಆರ್ ಚಿನ್ನಸಾಮಿ

ಕೊಯಮತ್ತೂರಿನಿಂದ ಆರ್ ದುರೈಸಾಮಿ ಮೈತ್ರಿಕೂಟದ ಚಾಲೆಂಜರ್ ದುರೈ (ಎಐಎಡಿಎಂಕೆ ಮಾಜಿ ಶಾಸಕ)

ಎಂವಿ ರತ್ನಂ – ಪೊಲ್ಲಾಚಿ

ಎಸ್ ಎಂ ವಾಸನ್ – ವೇದಚಂದೂರು

ಎಸ್ ಮುತ್ತುಕೃಷ್ಣನ್ – ಕನ್ನಿಯಾಕುಮಾರಿ

ಭುವನಗಿರಿಯಿಂದ ಪಿಎಸ್ ಅರುಲ್

ಕುರಿಜಿಪಾಡಿಯಿಂದ ಆರ್ ರಾಜೇಂದ್ರನ್

ಎ ಪ್ರಭು – ಕಲ್ಲಕುರಿಚಿ ಮತ್ತು ತೇಣಿಯಿಂದ ವಿ.ಆರ್.ಜಯರಾಮನ್

ಕೆ ಬಾಲಸುಬ್ರಮಣ್ಯಂ ಸೀರ್ಕಾಜಿ

ಎ ಚಂದ್ರಶೇಖರನ್ – ಚೋಜಾವಂದನ್

ಕೆ ಆರ್ ತಂಗರಸು ಅಂಡಿಮಾಡಂ (ಕಾಂಗ್ರೆಸ್ ಪಕ್ಷದಿಂದ)

ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಎಐಎಡಿಎಂಕೆ ನಾಯಕರನ್ನು ಪಕ್ಷಕ್ಕೆ ಕರೆತರುವ ಮೂಲಕ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆಯಲ್ಲಿ ಡಿಎಂಕೆ, ಎಐಎಡಿಎಂಕೆ ಮತ್ತು ಬಿಜೆಪಿ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ.

ಮತ್ತಷ್ಟು ಓದಿ: ನಮಗೆ ಪ್ರಜಾಪ್ರಭುತ್ವದ ಬಗ್ಗೆ ಉಪನ್ಯಾಸ ನೀಡಬೇಡಿ: ಎಂಕೆ ಸ್ಟಾಲಿನ್​​​ಗೆ ಬಿಜೆಪಿ ನಾಯಕ ಅಣ್ಣಾಮಲೈ ತಿರುಗೇಟು

ಡಿಎಂಕೆ ತಂಡದಲ್ಲಿ ಕಾಂಗ್ರೆಸ್, ಎಡಪಂಥೀಯರು ಹಲವರಿದ್ದಾರೆ. ಎಸ್‌ಟಿಬಿಐ ಸೇರಿದಂತೆ ಸಣ್ಣ ಪಕ್ಷಗಳು ಎಐಎಡಿಎಂಕೆ ತಂಡವನ್ನು ಸೇರಿಕೊಂಡಿವೆ.

AAMUK ಬಿಜೆಪಿಯೊಂದಿಗೆ ಸೀಟು ಹಂಚಿಕೆ ಕುರಿತು ಮಾತುಕತೆ ನಡೆಸುತ್ತಿದೆ. ಬಮಕ ಸೇರಿದಂತೆ ಹೊಸ ಪಕ್ಷಗಳು ಯಾವುದೇ ನಿಲುವು ತಳೆದಂತಿಲ್ಲ, ನಾಮ್ ತಮಿಳರ್ ಪಕ್ಷ ಎಂದಿನಂತೆ ಏಕಾಂಗಿಯಾಗಿ ಸ್ಫರ್ದಿಸುತ್ತಿದೆ. ತಮಿಳುನಾಡಿನಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದಲ್ಲಿ ಎಐಎಡಿಎಂಕೆ ಕೂಡ ಭಾಗವಾಗಿತ್ತು.

ಮೋದಿ ಭೇಟಿ: ಪ್ರಧಾನಿ ಮೋದಿ ಇದೇ 25ರಂದು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ಪಲ್ಲಡಂನಲ್ಲಿ ನಡೆಯುತ್ತಿರುವ ಮಹಾ ಚುನಾವಣಾ ಪ್ರಚಾರ ಸಭೆಯಲ್ಲಿ ಮೋದಿ ಭಾಗವಹಿಸಿದ್ದಾರೆ. ಪ್ರಧಾನಿ ಮೋದಿಯವರ ಭೇಟಿಯ ವೇಳೆ ಇನ್ನೂ ಕೆಲವು ಪ್ರಮುಖ ರಾಜಕೀಯ ನಾಯಕರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಅಣ್ಣಾಮಲೈ ಯೋಜಿಸಿದ್ದಾರೆ. ತಮಿಳುನಾಡಿನಲ್ಲಿ ಪರ್ಯಾಯ ಪಕ್ಷಗಳನ್ನು ಬಗ್ಗುಬಡಿಯಲು ಬಿಜೆಪಿ ನಿಜವಾಗಿಯೂ ಆಪರೇಷನ್ ತಾಮರೈ ಜಾರಿಗೆ ಮುಂದಾಗಿದೆ ಎಂಬುದಕ್ಕೆ ಇಂತಹ ಕ್ರಮಗಳು ಬೆಳಕು ಚೆಲ್ಲುತ್ತವೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ