ದೆಹಲಿಯಲ್ಲಿ ಇಂದು ರಾಹುಲ್ ಗಾಂಧಿ, ಪ್ರಿಯಾಂಕಾರನ್ನು ಭೇಟಿಯಾಗಲಿದ್ದಾರೆ ನವಜೋತ್ ಸಿಂಗ್ ಸಿಧು

| Updated By: ರಶ್ಮಿ ಕಲ್ಲಕಟ್ಟ

Updated on: Jun 29, 2021 | 11:15 AM

Navjot Singh Sidhu: ಪಿಪಿಸಿಸಿ ಮುಖ್ಯಸ್ಥರ ಹುದ್ದೆಗೆ ಸಿಧು ಲೆಕ್ಕಾಚಾರದಲ್ಲಿದ್ದಾರೆ ಎಂಬ ವರದಿಗಳು ಬಂದಿದ್ದರೂ, ಪಕ್ಷವು ಸಿದ್ಧುವಿಗೆ ಅನೇಕ ಜವಾಬ್ದಾರಿಗಳನ್ನು ನೀಡಲಿದೆ ಎಂದು ಹೇಳಿದೆ.  ಮೂಲಗಳ ಪ್ರಕಾರ, ಕ್ರಿಯೆಯ ಹಾದಿಯನ್ನು ನಿರ್ಧರಿಸಲು ಮಂಗಳವಾರದ ಸಭೆ ನಿರ್ಣಾಯಕವಾಗಿದೆ

ದೆಹಲಿಯಲ್ಲಿ ಇಂದು ರಾಹುಲ್ ಗಾಂಧಿ, ಪ್ರಿಯಾಂಕಾರನ್ನು ಭೇಟಿಯಾಗಲಿದ್ದಾರೆ ನವಜೋತ್ ಸಿಂಗ್ ಸಿಧು
ನವಜೋತ್ ಸಿಂಗ್ ಸಿಧು
Follow us on

ದೆಹಲಿ: ಎಐಸಿಸಿ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿ ಮಾಡಲು ಪಂಜಾಬ್​​ನ ಮಾಜಿ ಸಚಿವ ನವಜೋತ್ ಸಿಂಗ್ ಸಿಧು  ಮಂಗಳವಾರ ಪಟಿಯಾಲದಿಂದ ದೆಹಲಿಗೆ ತೆರಳಿದ್ದಾರೆ. ಕಾಂಗ್ರೆಸ್ ತನ್ನ ಪಂಜಾಬ್ ಘಟಕದೊಳಗಿನ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸುವ ಪ್ರಯತ್ನಗಳ ಮಧ್ಯೆ ಈ ಸಭೆ ಬಂದಿದೆ.

ಈ ತಿಂಗಳ ಆರಂಭದಲ್ಲಿ, ಪಂಜಾಬ್ ಕಾಂಗ್ರೆಸ್ ಒಳಗಿನ ಭಿನ್ನಾಭಿಪ್ರಾಯ ಬಗೆಹರಿಸಲು ಕಾಂಗ್ರೆಸ್ ಸ್ಥಾಪಿಸಿದ ಮೂವರು ಸದಸ್ಯರ ಸಮಿತಿಯ ಮುಂದೆ ಸಿಧು ಹಾಜರಾಗಿದ್ದರು. ಈಗ, ರಾಹುಲ್ ಗಾಂಧಿ ಅವರೊಂದಿಗಿನ ಭೇಟಿಯು ಮಾಜಿ ಎಐಸಿಸಿ ಮುಖ್ಯಸ್ಥರು, ಪಂಜಾಬ್‌ನ ಪಕ್ಷದ ಮುಖಂಡರನ್ನು ಭೇಟಿ ಮಾಡಿದ ಬೆನ್ನಲ್ಲೇ ನಡೆಯುತ್ತಿದೆ.

ಪಿಪಿಸಿಸಿ ಮುಖ್ಯಸ್ಥರ ಹುದ್ದೆಗೆ ಸಿಧು ಲೆಕ್ಕಾಚಾರದಲ್ಲಿದ್ದಾರೆ ಎಂಬ ವರದಿಗಳು ಬಂದಿದ್ದರೂ, ಪಕ್ಷವು ಸಿದ್ಧುವಿಗೆ ಅನೇಕ ಜವಾಬ್ದಾರಿಗಳನ್ನು ನೀಡಲಿದೆ ಎಂದು ಹೇಳಿದೆ.  ಮೂಲಗಳ ಪ್ರಕಾರ, ಕ್ರಿಯೆಯ ಹಾದಿಯನ್ನು ನಿರ್ಧರಿಸಲು ಮಂಗಳವಾರದ ಸಭೆ ನಿರ್ಣಾಯಕವಾಗಿದೆ

ಕ್ರಿಕೆಟಿಗ-ರಾಜಕಾರಣಿ ಸಿಧು, ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ಆಡಳಿತಾರೂಢ ಪಂಜಾಬ್ ಕಾಂಗ್ರೆಸ್‌ನಲ್ಲಿ ಬಂಡಾಯವೆದ್ದಿದ್ದಾರೆ. ಕಳೆದ ಎರಡು ವಾರಗಳಲ್ಲಿ, ಬಿಕ್ಕಟ್ಟನ್ನು ಪರಿಹರಿಸುವ ಉದ್ದೇಶದಿಂದ ರಾಹುಲ್ ಗಾಂಧಿ ತಮ್ಮ ನವದೆಹಲಿ ನಿವಾಸದಲ್ಲಿ ಪಂಜಾಬ್‌ನ ನಾಯಕರನ್ನು ಭೇಟಿಯಾಗುತ್ತಿದ್ದಾರೆ. ವಿಜೇಂದ್ರ ಸಿಂಗ್ಲಾ, ರಾಣಾ ಗುರ್ಜಿತ್ ಸಿಂಗ್, ರಾಜ್ಯಸಭಾ ಸಂಸತ್ (ಸಂಸದ) ಶಂಷರ್ ಸಿಂಗ್ ಧಿಲ್ಲೋನ್, ಮತ್ತು ಶಾಸಕ ಲಖ್ವೀರ್ ಸಿಂಗ್ ಸೇರಿದಂತೆ ನಾಯಕರು ಕಳೆದ ವಾರ ರಾಹುಲ್ ಗಾಂಧಿ ಅವರನ್ನು ಭೇಟಿಯಾದರು.

2017 ರ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಯನ್ನು ತೊರೆದ ನಂತರ ಸಿಧು ಕಾಂಗ್ರೆಸ್ ಸೇರಿದ್ದರು. ತಮ್ಮ ಖಾತೆ ಬದಲಾವಣೆಯ ಬಗ್ಗೆ ಅಸಮಾಧಾನ ಹೊಂದಿ ಅವರು 2019 ರಲ್ಲಿ ಅಮರಿಂದರ್ ಸಿಂಗ್ ಸಂಪುಟದಿಂದ ಹೊರಬಂದರು. ಕಳೆದ ಐದು ತಿಂಗಳಲ್ಲಿ ಸಿಧು ಬಹಿರಂಗವಾಗಿ ಅಮರಿಂದರ್ ವಿರುದ್ಧ ಟೀಕಾ ಪ್ರಹಾರ ಮಾಡುತ್ತಿದ್ದು ಮುಖ್ಯಮಂತ್ರಿಯನ್ನು ಸುಳ್ಳುಗಾರ ಎಂದೂ ಹೇಳಿದ್ದರು.


ಗುರು ಗ್ರಂಥ ಸಾಹೀಬ್ ಅಪವಿತ್ರ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದ ವರದಿಯನ್ನು ಹೈಕೋರ್ಟ್ ಆದೇಶ ರದ್ದುಪಡಿಸಿದ ನಂತರ ಸಿಧು ಮತ್ತು ಸಿಂಗ್ ವಾಗ್ವಾದ ನಡೆದಿದ್ದು ಹೊಸ ತಂಡವನ್ನು ಸ್ಥಾಪಿಸಲು ರಾಜ್ಯಕ್ಕೆ ಹೇಳಿದ್ದರು.

ಈ ತಿಂಗಳ ಆರಂಭದಲ್ಲಿ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ರಚಿಸಿದ ಮೂರು ಸದಸ್ಯರ ಸಮಿತಿಯು ಅಮರಿಂದರ್ ಸಿಂಗ್ ಅವರು ರಾಜ್ಯದ ಪಕ್ಷದ ನಾಯಕರಾಗಲು ಯೋಗ್ಯರು ಎಂದು ಶಿಫಾರಸು ಮಾಡಿದ್ದರು.
ಕಾಂಗ್ರೆಸ್ ಗೆ ಪಂಜಾಬ್ ನಿರ್ಣಾಯಕವಾಗಿದೆ ಏಕೆಂದರೆ ಅದು ಆಳುವ ಮೂರು ರಾಜ್ಯಗಳಲ್ಲಿ ಇದೂ ಕೂಡಾ ಒಂದು. ಪಕ್ಷ ಅಧಿಕಾರದಲ್ಲಿರುವ ಇತರ ಎರಡು ರಾಜ್ಯಗಳು ರಾಜಸ್ಥಾನ ಮತ್ತು ಛತ್ತೀಸಗಡ.

2017 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 117 ಸ್ಥಾನಗಳಲ್ಲಿ 77 ಸ್ಥಾನಗಳನ್ನು ಗಳಿಸಿ ಜಯಗಳಿಸಿತು. ಎಎಪಿ 20 ಮತ್ತು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) 15 ಸ್ಥಾನಗಳನ್ನು ಗೆದ್ದಿದೆ.

ಇದನ್ನೂ ಓದಿ:  ಸಮಸ್ಯೆಗಳನ್ನು ಬಗೆಹರಿಸಿದರೆ ನಾನು ಅಮರಿಂದರ್ ಸಿಂಗ್ ಜತೆ ಕೆಲಸ ಮಾಡಲು ಸಿದ್ಧ: ನವಜೋತ್ ಸಿಂಗ್ ಸಿಧು

ಇದನ್ನೂ ಓದಿ:  ಚುನಾವಣೆ ಗೆಲ್ಲಲು ಬಳಸುವ ಶೋಪೀಸ್ ನಾನಲ್ಲ: ನವಜೋತ್ ಸಿಂಗ್ ಸಿಧು

(Former Punjab minister Navjot Singh Sidhu to meet AICC leaders Rahul Gandhi and Priyanka in Delhi today)