ದೆಹಲಿ: 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳನ್ನು ಬೆನ್ನಟ್ಟಿ ಚಾಕು ಇರಿತ, ಓರ್ವ ವಿದ್ಯಾರ್ಥಿ ಗಂಭೀರ
ಸರ್ಕಾರಿ ಶಾಲೆಯ ಹೊರಗೆ ಜಗಳ ನಡೆದಿದ್ದು ಪಾಂಡವನಗರದ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಚೂರಿ ಇರಿತದಿಂದ ಗಾಯಗೊಂಡ ವಿದ್ಯಾರ್ಥಿಯ ಅಮ್ಮಂದಿರ ಆಕ್ರಂದನ ಕೇಳಿ ಬಂದಿದೆ. ಉದ್ಯಾನದ ಹಲವೆಡೆ ಪೊಲೀಸರಿಗೆ ರಕ್ತದ ಕುರುಹುಗಳು ಪತ್ತೆಯಾಗಿವೆ.
ದೆಹಲಿ: ಪೂರ್ವ ದೆಹಲಿಯ(East Delhi) ಶಾಲೆಯೊಂದರ ಹೊರಗೆ 10 ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳನ್ನು ಬೆನ್ನಟ್ಟಿ ಚಾಕುವಿನಿಂದ ಇರಿದ ಘಟನೆ ಶನಿವಾರ ನಡೆದಿದ್ದು , ಹದಿಹರೆಯ ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೂರ್ವ ದೆಹಲಿಯ ಮಯೂರ್ ವಿಹಾರ್ (Mayur Vihar area) ಪ್ರದೇಶದಲ್ಲಿರುವ ಸರ್ವೋದಯ ಬಾಲ ವಿದ್ಯಾಲಯದಲ್ಲಿ(Sarvodaya Bal Vidyalaya) 10 ನೇ ತರಗತಿಯ ಪರೀಕ್ಷೆಯನ್ನು ಮುಗಿಸಿ, ವಿದ್ಯಾರ್ಥಿಗಳು ಶಾಲಾ ಆವರಣದಿಂದ ಹೊರಬರುತ್ತಿದ್ದಾಗ ಬೇರೆ ಶಾಲೆಯ ಹುಡುಗರ ಗುಂಪೊಂದು ಅವರನ್ನು ಹಿಂಬಾಲಿಸಿ ಚಾಕುವಿನಿಂದ ಇರಿದಿದೆ. 10 ನೇ ತರಗತಿಯ ವಿದ್ಯಾರ್ಥಿಗಳು ಆಗಷ್ಟೇ ಪರೀಕ್ಷೆ ಮುಗಿಸಿ ಹೊರಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ ತಮ್ಮನ್ನು ಉಳಿಸಿಕೊಳ್ಳುವ ಸಲುವಾಗಿ ವಿದ್ಯಾರ್ಥಿಗಳು ದುಷ್ಕರ್ಮಿಗಳೊಂದಿಗೆ ಹತ್ತಿರದ ಉದ್ಯಾನವನದ ಕಡೆಗೆ ಓಡಿಹೋದಾಗ, ನಾಲ್ವರು ಸಿಕ್ಕಿಬಿದ್ದಿದ್ದಾರೆ ಮತ್ತು ಇರಿದಿದ್ದಾರೆ ಎಂದು ಶಾಲೆಯ ವಿದ್ಯಾರ್ಥಿಗಳು ತಿಳಿಸಿದ್ದಾರೆ. 10ನೇ ತರಗತಿ ವಿದ್ಯಾರ್ಥಿಗಳನ್ನು ಗೌತಮ್, ರೆಹಾನ್, ಫೈಜಾನ್ ಮತ್ತು ಆಯುಷ್ ಎಂದು ಗುರುತಿಸಲಾಗಿದೆ. ತ್ರಿಲೋಕಪುರಿ ಸರ್ಕಾರಿ ಬಾಲಕರ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದ ಈ ನಾಲ್ವರು ಬಾಲಕರು ಪರೀಕ್ಷೆಗಾಗಿ ಸರ್ವೋದಯ ಬಾಲ ವಿದ್ಯಾಲಯ ಕೇಂದ್ರಕ್ಕೆ ಬಂದಿದ್ದರು. ಘಟನೆಯ ನಂತರ, ಅಪರಾಧದ ಸ್ಥಳದಿಂದ ಇತರ ವಿದ್ಯಾರ್ಥಿಗಳು ನಾಲ್ವರು ಹುಡುಗರನ್ನು ದೆಹಲಿಯ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ಸಾಗಿಸಿದರು. ಆ ಸಮಯದಲ್ಲಿ ಹುಡುಗರು ಸಾಕಷ್ಟು ಪ್ರಮಾಣದ ರಕ್ತವನ್ನು ಕಳೆದುಕೊಂಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸರ್ಕಾರಿ ಶಾಲೆಯ ಹೊರಗೆ ಜಗಳ ನಡೆದಿದ್ದು ಪಾಂಡವನಗರದ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಚೂರಿ ಇರಿತದಿಂದ ಗಾಯಗೊಂಡ ವಿದ್ಯಾರ್ಥಿಯ ಅಮ್ಮಂದಿರ ಆಕ್ರಂದನ ಕೇಳಿ ಬಂದಿದೆ. ಉದ್ಯಾನದ ಹಲವೆಡೆ ಪೊಲೀಸರಿಗೆ ರಕ್ತದ ಕುರುಹುಗಳು ಪತ್ತೆಯಾಗಿವೆ.
ಶಾಲೆಯೊಂದರಲ್ಲಿ ಬಾಲಕರ ನಡುವೆ ನಡೆದ ಜಗಳದ ಕುರಿತು ಪಾಂಡವನಗರ ಪೊಲೀಸ್ ಠಾಣೆಗೆ ಮೂರು ಪ್ರತ್ಯೇಕ ಕರೆಗಳು ಬಂದಿದ್ದವು. ಅವರು ಘಟನಾ ಸ್ಥಳಕ್ಕೆ ತಲುಪಿದಾಗ ದೆಹಲಿ ಪೊಲೀಸರು ನಾಲ್ವರು ಅಪ್ರಾಪ್ತರು ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಯಿತು ಎಂದು ಪೂರ್ವ ಜಿಲ್ಲಾ ಪೊಲೀಸ್ ಕಮಿಷನರ್ (ಡಿಸಿಪಿ) ತಿಳಿಸಿದ್ದಾರೆ.
ಚೂರಿ ಇರಿತದಲ್ಲಿ ಗಾಯಗೊಂಡಿರುವ ಎಲ್ಲಾ ಬಾಲಕರು 15 ರಿಂದ 16 ವರ್ಷದೊಳಗಿನವರು. ಮೂವರು ಬಾಲಕರನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ಬಿಡುಗಡೆ ಮಾಡಲಾಗಿದೆ. ಒಬ್ಬರು ಇನ್ನೂ ದೆಹಲಿಯ ಏಮ್ಸ್‌ನಲ್ಲಿರುವ ಟ್ರಾಮಾ ಸೆಂಟರ್‌ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸ್ತುತ ದಾಳಿಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ, ದುಷ್ಕರ್ಮಿಗಳು ಯಾರು ಎಂಬುದನ್ನು ನಿರ್ಧರಿಸಲು ಪೊಲೀಸರು ಹತ್ತಿರದ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಗಳನ್ನು ಸ್ಕ್ಯಾನ್ ಮಾಡಿದ್ದಾರೆ. ದಾಳಿ ನಡೆಸಿರುವ ವಿದ್ಯಾರ್ಥಿಗಳು ಆರ್.ಎಸ್. ಬಾಲ ವಿದ್ಯಾಲಯದವರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ: ನಾಳೆ ಕಾಶಿ ವಿಶ್ವನಾಥ್ ಕಾರಿಡಾರ್ ಉದ್ಘಾಟಿಸಲಿದ್ದಾರೆ ನರೇಂದ್ರ ಮೋದಿ, ಹೇಗಿದೆ ಪ್ರಧಾನಿಯವರ ಕನಸಿನ ಯೋಜನೆ?