ಕನಿಮೊಳಿಗೆ ಟಿಕೆಟ್‌ ವಿವಾದ; ಕೆಲಸ ಕಳೆದುಕೊಂಡ ತಮಿಳುನಾಡಿನ ಬಸ್ ಚಾಲಕಿಗೆ ಹೊಸ ಕಾರು ಗಿಫ್ಟ್ ನೀಡಿದ ಕಮಲ್ ಹಾಸನ್

ತಮ್ಮ ವಯಸ್ಸಿನ ಮಹಿಳೆಯರಿಗೆ ಉತ್ತಮ ಮಾದರಿಯಾಗಿರುವ ಶರ್ಮಿಳಾ ಅವರ ಬಗ್ಗೆ ಕೇಳಿದಾಗ ನನಗೆ ತುಂಬಾ ದುಃಖವಾಯಿತು. ಶರ್ಮಿಳಾ ಕೇವಲ ಚಾಲಕಿಯಾಗದೆ ಸಾವಿರಾರು ಶರ್ಮಿಳಾರನ್ನು ಸೃಷ್ಟಿಸಬೇಕು ಎಂದು ನಾನು ನಂಬುತ್ತೇನೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.

ಕನಿಮೊಳಿಗೆ ಟಿಕೆಟ್‌ ವಿವಾದ; ಕೆಲಸ ಕಳೆದುಕೊಂಡ ತಮಿಳುನಾಡಿನ ಬಸ್ ಚಾಲಕಿಗೆ ಹೊಸ ಕಾರು ಗಿಫ್ಟ್ ನೀಡಿದ ಕಮಲ್ ಹಾಸನ್
ಚೆಕ್ ಹಸ್ತಾಂತರಿಸಿದ ಕಮಲ್ ಹಾಸನ್
Follow us
ರಶ್ಮಿ ಕಲ್ಲಕಟ್ಟ
|

Updated on: Jun 26, 2023 | 3:59 PM

ಚೆನ್ನೈ: ಡಿಎಂಕೆ ಸಂಸದೆ ಕನಿಮೊಳಿ (DMK MP Kanimozhi) ಅವರಿಗೆ ಬಸ್ ಟಿಕೆಟ್ ನೀಡುವ ವಿಚಾರದಲ್ಲಿ ಉಂಟಾದ ವಿವಾದದಲ್ಲಿ ಇತ್ತೀಚೆಗೆ ಕೆಲಸ ಕಳೆದುಕೊಂಡ ಕೊಯಮತ್ತೂರಿನ ಮೊದಲ ಮಹಿಳಾ ಬಸ್ ಚಾಲಕಿ ಶರ್ಮಿಳಾ ಅವರಿಗೆ ನಟ-ರಾಜಕಾರಣಿ ಮತ್ತು ಮಕ್ಕಳ್ ನೀಧಿ ಮೈಯಂ (Makkal Needhi Maiam-MNM) ಮುಖ್ಯಸ್ಥ ಕಮಲ್ ಹಾಸನ್ (Kamal Haasan)ಸೋಮವಾರ ಹೊಸ ಕಾರು ಉಡುಗೊರೆಯಾಗಿ ನೀಡಿದ್ದಾರೆ. ಕಮಲ್ ಹಾಸನ್ ಅವರು ಶರ್ಮಿಳಾ ಅವರನ್ನು ಅವರ ಕುಟುಂಬದೊಂದಿಗೆ ಸೋಮವಾರ ಬೆಳಿಗ್ಗೆ ಅಲ್ವಾರ್‌ಪೇಟ್‌ನಲ್ಲಿರುವ ಅವರ ಚೆನ್ನೈ ಕಚೇರಿಗೆ ಆಹ್ವಾನಿಸಿ, ಹೊಸ ಕಾರು ಖರೀದಿಗೆ ಮತ್ತು ಉದ್ಯಮಿಯಾಗಿ ಅವರ ಪ್ರಯಾಣವನ್ನು ಮುಂದುವರಿಸಲು ಚೆಕ್ ಅನ್ನು ಹಸ್ತಾಂತರಿಸಿದರು.

“ತಮ್ಮ ವಯಸ್ಸಿನ ಮಹಿಳೆಯರಿಗೆ ಉತ್ತಮ ಮಾದರಿಯಾಗಿರುವ ಶರ್ಮಿಳಾ ಅವರ ಬಗ್ಗೆ ಕೇಳಿದಾಗ ನನಗೆ ತುಂಬಾ ದುಃಖವಾಯಿತು. ಶರ್ಮಿಳಾ ಕೇವಲ ಚಾಲಕಿಯಾಗದೆ ಸಾವಿರಾರು ಶರ್ಮಿಳಾರನ್ನು ಸೃಷ್ಟಿಸಬೇಕು ಎಂದು ನಾನು ನಂಬುತ್ತೇನೆ. ಕಮಲ್ ಕಲ್ಚರಲ್ ಸೆಂಟರ್ ಶರ್ಮಿಳಾ ಅವರಿಗೆ ಉದ್ಯಮಿಯಾಗಿ ತಮ್ಮ ಪ್ರಯಾಣವನ್ನು ಪುನರಾರಂಭಿಸಲು ಹೊಸ ಕಾರನ್ನು ಉಡುಗೊರೆಯಾಗಿ ನೀಡಿತು ಎಂದು ಕಮಲ್ ಹಾಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಏನಿದು ವಿವಾದ?

ಜೀವನೋಪಾಯಕ್ಕಾಗಿ ಬಸ್ ಓಡಿಸುತ್ತಿದ್ದ ಶರ್ಮಿಳಾ ಅವರು ಕನಿಮೊಳಿಗೆ ಉಚಿತವಾಗಿ ಪ್ರಯಾಣಿಸಲು ಅನುಮತಿ ನೀಡಿದ್ದರು. ಇದಕ್ಕಾಗಿ ಮಹಿಳಾ ಬಸ್ ಕಂಡಕ್ಟರ್ ಜೊತೆ ವಾಗ್ವಾದಕ್ಕಿಳಿದಿದ್ದರು. ಈ ಕಾರಣದಿಂದಾ ಆಕೆಯನ್ನು ಮಾಲೀಕರು ಕೆಲಸದಿಂದ ವಜಾಗೊಳಿಸಿದ್ದರು. ಶರ್ಮಿಳಾ ಅವರನ್ನು ವಜಾಗೊಳಿಸಿರುವ ಕುರಿತು ತಿಳಿದ ಬಳಿಕ ಆಕೆಗೆ ದೂರವಾಣಿ ಕರೆ ಮಾಡಿದ ಕನಿಮೋಳಿ, ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಜತೆಗೆ, ವೃತ್ತಿ ಜೀವನಕ್ಕೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಡಿಎಂಕೆ ಸಂಸದೆಗೆ ಬಸ್​​ನಲ್ಲಿ ಪ್ರಯಾಣಕ್ಕೆ ಅನುವು ಮಾಡಿಕೊಟ್ಟದ್ದಕ್ಕೆ ತಮಿಳುನಾಡಿನ ಮೊದಲ ಬಸ್ ಚಾಲಕಿಯ ಉದ್ಯೋಗಕ್ಕೇ ಕುತ್ತು

ಕನಿಮೊಳಿ ಅವರನ್ನು ಸತ್ಕರಿಸಿ ಬಸ್ಸಿನಲ್ಲಿ ಉಚಿತವಾಗಿ ಕರೆದೊಯ್ದ ಸ್ವಲ್ಪ ಸಮಯದ ನಂತರ ಶರ್ಮಿಳಾಳನ್ನು ಖಾಸಗಿ ಸಾರಿಗೆ ಕಂಪನಿಯು ಕೆಲಸದಿಂದ ವಜಾಗೊಳಿಸಿತ್ತು.ಕನಿಮೋಳಿ ಅವರನ್ನು ಬಸ್ಸಿನಲ್ಲಿ ಕರೆದೊಯ್ಯುವ ಬಗ್ಗೆ ಚಾಲಕಿ, ನಿರ್ವಾಹಕಿ ಮಧ್ಯೆ ವಾಗ್ವಾದವೂ ನಡೆದಿತ್ತು ಎಂದು ಕೆಲವು ಮಾಧ್ಯಮ ವರದಿಗಳು ಉಲ್ಲೇಖಿಸಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ