ಪ್ರಧಾನಿ ಮೋದಿಯವರ ರಷ್ಯಾ ಭೇಟಿ ಬಗ್ಗೆ ಅಮೆರಿಕದ ಅಧಿಕಾರಿಯ ಕಳವಳಕ್ಕೆ ಭಾರತ ತೀಕ್ಷ್ಣ ಪ್ರತಿಕ್ರಿಯೆ
ಮಂಗಳವಾರ ನಡೆದ ಯುಎಸ್ ಕಾಂಗ್ರೆಸ್ ಸಂದರ್ಭದಲ್ಲಿ, ದಕ್ಷಿಣ ಮತ್ತು ಮಧ್ಯ ಏಷ್ಯಾದ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಲು ಅವರು ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಮಾಸ್ಕೋ ಪ್ರವಾಸದ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದರು. “ಪ್ರಧಾನಿ ಮೋದಿಯವರ ಮಾಸ್ಕೋ ಪ್ರವಾಸದ ಸಾಂಕೇತಿಕತೆ ಮತ್ತು ಸಮಯದ ಬಗ್ಗೆ ನನಗೆ ಸಹಮತ ಇಲ್ಲ, ನಾವು ನಮ್ಮ ಭಾರತೀಯ ಸ್ನೇಹಿತರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಯುಎಸ್ ಅಧಿಕಾರಿ ಹೇಳಿದ್ದರು.
ದೆಹಲಿ ಜುಲೈ 25: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ರಷ್ಯಾ (Russia) ಭೇಟಿಯ ಸಾಂಕೇತಿಕತೆ ಮತ್ತು ಸಮಯದ ಬಗ್ಗೆ ಅಮೆರಿಕ (US) ನಿರಾಶೆಗೊಂಡಿದೆ ಎಂಬ ಯುಎಸ್ ಅಧಿಕಾರಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ಭಾರತ, ಎಲ್ಲಾ ದೇಶಗಳು ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನು “ಪರಸ್ಪರ ಆಸಕ್ತಿಯ ಆಧಾರದ ಮೇಲೆ ನಿರ್ಧರಿಸಲು “ಆಯ್ಕೆಯ ಸ್ವಾತಂತ್ರ್ಯ” ಹೊಂದಿದೆ ಎಂದು ಹೇಳಿದೆ. ಈ ಮೂಲಕ ಭಾರತ ರಷ್ಯಾದೊಂದಿಗೆ ದೀರ್ಘಕಾಲದ ಸಂಬಂಧವನ್ನು ಒತ್ತಿಹೇಳಿತು. ಮಾಧ್ಯಮಗಳೊಂದಿಗೆ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಭಾರತವು ರಷ್ಯಾದೊಂದಿಗೆ ಪರಸ್ಪರ ಹಿತಾಸಕ್ತಿಗಳ ಆಧಾರದ ಮೇಲೆ ದೀರ್ಘಕಾಲದ ಸಂಬಂಧವನ್ನು ಹೊಂದಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಬಹುಧ್ರುವೀಯ ಜಗತ್ತಿನಲ್ಲಿ, ಎಲ್ಲಾ ದೇಶಗಳು ಆಯ್ಕೆಯ ಸ್ವಾತಂತ್ರ್ಯವನ್ನು ಹೊಂದಿವೆ. ಇಂತಹ ಸತ್ಯಗಳನ್ನು ಎಲ್ಲರೂ ಮನಗಾಣುವುದು ಮತ್ತು ಪ್ರಶಂಸಿಸುವುದು ಅತ್ಯಗತ್ಯ ಎಂದಿದ್ದಾರೆ.
ಮಂಗಳವಾರ ನಡೆದ ಯುಎಸ್ ಕಾಂಗ್ರೆಸ್ ಸಂದರ್ಭದಲ್ಲಿ, ದಕ್ಷಿಣ ಮತ್ತು ಮಧ್ಯ ಏಷ್ಯಾದ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಲು ಅವರು ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಮಾಸ್ಕೋ ಪ್ರವಾಸದ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದರು. “ಪ್ರಧಾನಿ ಮೋದಿಯವರ ಮಾಸ್ಕೋ ಪ್ರವಾಸದ ಸಾಂಕೇತಿಕತೆ ಮತ್ತು ಸಮಯದ ಬಗ್ಗೆ ನನಗೆ ಸಹಮತ ಇಲ್ಲ, ನಾವು ನಮ್ಮ ಭಾರತೀಯ ಸ್ನೇಹಿತರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಯುಎಸ್ ಅಧಿಕಾರಿಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಕಾಕಸ್ ಆಫ್ ಇಂಡಿಯಾ ಮತ್ತು ಇಂಡಿಯನ್ ಅಮೆರಿಕನ್ಸ್‌ನ ಮಾಜಿ ಸಹ-ಅಧ್ಯಕ್ಷ ಕಾಂಗ್ರೆಸ್‌ನ ಜೋ ವಿಲ್ಸನ್ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ರಷ್ಯಾ ಭೇಟಿಯ ಕುರಿತು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ.
ಉಕ್ರೇನ್‌ನ ರಾಜಧಾನಿ ಕೈವ್‌ನಲ್ಲಿರುವ ಮಕ್ಕಳ ಆಸ್ಪತ್ರೆಯ ಮೇಲೆ ರಷ್ಯಾ ದಾಳಿ ನಡೆಸಿದಾಗ ಈ ಭೇಟಿ ಸಂಭವಿಸಿದೆ ಎಂದು ಲು ಹೇಳಿದ್ದಾರೆ.
ಭಾರತವು ಯಾವುದೇ ಪ್ರಮುಖ ರಕ್ಷಣಾ ಒಪ್ಪಂದಗಳು ಅಥವಾ ತಂತ್ರಜ್ಞಾನ ಸಹಕಾರಕ್ಕೆ ಸಹಿ ಹಾಕಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ಪುಟಿನ್ ಅವರಲ್ಲಿ, ಯುದ್ಧ ಭೂಮಿಯಲ್ಲಿ ಯುದ್ಧ ಗೆಲ್ಲಲಾಗುವುದಿಲ್ಲ ಅಂದಿದ್ದಾರೆ.
ರಷ್ಯಾದೊಂದಿಗಿನ ಭಾರತದ ರಕ್ಷಣಾ ಸಹಕಾರವನ್ನು ಉಲ್ಲೇಖಿಸಿದ ಲು, ಈ ಕಳವಳಗಳನ್ನು ನಾನು ಅವರೊಂದಿಗೆ ಹಂಚಿಕೊಳ್ಳುವೆ. ಆದರೆ ರಷ್ಯಾದಿಂದ ಭಾರತದ ರಕ್ಷಣಾ ಆಮದು ಕಡಿಮೆಯಾಗುತ್ತಿದೆ. ಈ ಕಳೆದ ಎರಡೂವರೆ ವರ್ಷಗಳಲ್ಲಿ ಭಾರತೀಯರು ರಕ್ಷಣಾ ಖರೀದಿಗಳಲ್ಲಿ ಶತಕೋಟಿ ಡಾಲರ್‌ಗಳನ್ನು ರದ್ದುಗೊಳಿಸಿದ್ದಾರೆ ಏಕೆಂದರೆ ರಷ್ಯನ್ನರು ಇನ್ನು ಮುಂದೆ ತಲುಪಿಸಲು ಸಾಧ್ಯವಿಲ್ಲ. ಆದ್ದರಿಂದ, ನಾವು ಅದರ ಬಗ್ಗೆ ತುಂಬಾ ಶ್ರಮಿಸುತ್ತಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: PAHAL ಮತ್ತು ಉಜ್ವಲ ಯೋಜನೆಗಳಿಗಾಗಿ ಎಲ್ಪಿಜಿ ಗ್ರಾಹಕರಿಗೆ ಆಧಾರ್ ದೃಢೀಕರಣ ಸಕ್ರಿಯಗೊಳಿಸಿದ ಸರ್ಕಾರ
ಜುಲೈ ಮೊದಲ ವಾರದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡಿದ್ದರು. ಅವರ ರಾಜತಾಂತ್ರಿಕ ಸಂಬಂಧದ 75 ವರ್ಷಗಳ ನೆನಪಿಗಾಗಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಶೃಂಗ ಮಟ್ಟದ ಮಾತುಕತೆ ನಡೆಸಿದರು. ಉಕ್ರೇನ್‌ನಲ್ಲಿನ ಯುದ್ಧದ ಬಗ್ಗೆ ಭಾರತವು ತನ್ನ ಕಳವಳವನ್ನು ವ್ಯಕ್ತಪಡಿಸಿತು. ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ನೀಡಿದ ಕೊಡುಗೆಯನ್ನು ಗುರುತಿಸಲು ಪ್ರಧಾನಿ ಮೋದಿ ಅವರಿಗೆ ಅಧ್ಯಕ್ಷ ಪುಟಿನ್ ಅವರು ‘ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ತಲ್’ ಪ್ರಶಸ್ತಿಯನ್ನು ನೀಡಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ