AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೀಲ್​ಚೇರ್​ನಲ್ಲೇ ಬಂದು ಪ್ರಧಾನಿ ಭೇಟಿಯಾದ ದೇವೇಗೌಡ: ಹೆಚ್​ಡಿಡಿ ನೀಡಿದ ಕಲಾಕೃತಿಗೆ ಮೋದಿ ಫಿದಾ

ನವದೆಹಲಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಅವರು ಭೇಟಿ ಮಾಡಿದ್ದಾರೆ. ಮೋದಿ ಭೇಟಿಗೆ ದೇವೇಗೌಡರು ವೀಲ್​ಚೇರ್​ನಲ್ಲಿ ಬಂದಿದ್ದು ವಿಶೇಷ. ಈ ವೇಳೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕೂಡ ಉಪಸ್ಥಿತರಿದ್ದರು. ಹೆಚ್​ಡಿ ದೇವೇಗೌಡರು ನೀಡಿದ ಕಲಾಕೃತಿಗೆ ಮೋದಿ ಫಿದಾ ಆಗಿದ್ದಾರೆ.

ವೀಲ್​ಚೇರ್​ನಲ್ಲೇ ಬಂದು ಪ್ರಧಾನಿ ಭೇಟಿಯಾದ ದೇವೇಗೌಡ: ಹೆಚ್​ಡಿಡಿ ನೀಡಿದ ಕಲಾಕೃತಿಗೆ ಮೋದಿ ಫಿದಾ
ವೀಲ್​ಚೇರ್​ನಲ್ಲೇ ಬಂದು ಪ್ರಧಾನಿ ಭೇಟಿಯಾದ ದೇವೇಗೌಡ, ಎಚ್​ಡಿಡಿ ನೀಡಿದ ಕಲಾಕೃತಿಗೆ ಮೋದಿ ಫಿದಾ
Sunil MH
| Edited By: |

Updated on:Jul 25, 2024 | 10:20 PM

Share

ದೆಹಲಿ, ಜುಲೈ 25: ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರು (Shiroor) ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಅವರು ಪ್ರಸ್ತಾಪಿಸಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಹೆಚ್​ಡಿ ದೇವೇಗೌಡ ಅವರು ವೀಲ್​ಚೇರ್​ನಲ್ಲಿ ಬಂದು ಭೇಟಿ ಮಾಡಿದ್ದಾರೆ. ಈ ವೇಳೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಉಪಸ್ಥಿತರಿದ್ದು, ಮಹತ್ವದ ಚರ್ಚೆ ಮಾಡಲಾಗಿದೆ.

ಇತ್ತೀಚೆಗೆ ಕೇಂದ್ರ ಸರ್ಕಾರ ಬಜೆಟ್​ ಮಂಡಿಸಿದ್ದು, ಪ್ರತ್ಯೇಕವಾಗಿ ಕರ್ನಾಟಕಕ್ಕೆ ಏನು ಘೋಷಿಸಿರಲಿಲ್ಲ. ಹಾಗಾಗಿ ಟೀಕೆ ಕೂಡ ವ್ಯಕ್ತವಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಹೆಚ್​ಡಿ ಕುಮಾರಸ್ವಾಮಿ ಬೇರೆ ಬೇರೆ ಯೋಜನೆಗಳನ್ನು ಕರ್ನಾಟಕ್ಕೆ ತರುವ ಬಗ್ಗೆ ಪ್ರಸ್ತಾಪಿಸಿದ್ದರು. ಅದರ ಬೆನ್ನೆಲ್ಲೇ ಇದೀಗ ಪ್ರಧಾನಿ ಮೋದಿ ಭೇಟಿ ಮಾಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಈ ಬಗ್ಗೆ ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದು, ಲೋಕಕಲ್ಯಾಣ ಮಾರ್ಗವಾಗಿ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರನ್ನು ಭೇಟಿ ಮಾಡಿರುವುದು ಗೌರವದ ಸಂಗತಿ. ವಿವಿಧ ವಿಷಯಗಳ ಬಗ್ಗೆ ಅವರಿಗಿರುವ ಬುದ್ಧಿವಂತಿಕೆ ಮತ್ತು ದೃಷ್ಟಿಕೋನವು ತುಂಬಾ ಆಳ ಮತ್ತು ಮೌಲ್ಯಯುತವಾದದ್ದು.

ಪ್ರಧಾನಿ ಮೋದಿ ಟ್ವೀಟ್

ಅವರು ನನಗೆ ನೀಡಿದ ಕಲಾಕೃತಿಗೆ ನಾನು ಕೃತಜ್ಞನಾಗಿದ್ದೇನೆ. ಇದು ನನ್ನ ಇತ್ತೀಚಿನ ಕನ್ಯಾಕುಮಾರಿ ಭೇಟಿಯನ್ನು ನೆನಪಿಸಿತು ಎಂದು ತಮ್ಮ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ರಾಜ್ಯ ಸರ್ಕಾರಕ್ಕೆ ಹೆಚ್​.ಡಿ.ದೇವೇಗೌಡ ಪ್ರಶ್ನೆ

ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಪ್ರಕರಣ ಬಗ್ಗೆ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಹೆಚ್​.ಡಿ.ದೇವೇಗೌಡ, ದುರಂತ ನಡೆದು 6 ದಿನವಾದ್ರೂ ರಾಜ್ಯ ಸರ್ಕಾರದಿಂದ ಯಾರೊಬ್ಬರೂ ಭೇಟಿ ನೀಡಿರಲಿಲ್ಲ. ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಭೇಟಿ ಬಳಿಕ ಸೇನಾ ತಂಡ ಕಾರ್ಯಾಚರಣೆ ಮಾಡುತ್ತಿದೆ. ಆ ನಂತರ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರು ಭೇಟಿ ನೀಡಿ ಪರಿಶೀಲಿಸಿದರು ಎಂದಿದ್ದಾರೆ.

ಇದನ್ನೂ ಓದಿ: ಒಂದು ಲಕ್ಷ ಮನೆ ಯೋಜನೆ ಫಲಾನುಭವಿಗಳಿಗೆ ಸಿಹಿ ಸುದ್ದಿ ನೀಡಿದ ಸಿದ್ದರಾಮಯ್ಯ

ಇದು ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಅನ್ನೋದನ್ನು ತೋರಿಸುತ್ತೆ. ಜನರು ಸತ್ತಿದ್ದಾರೆ, ರಾಜ್ಯ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:12 pm, Thu, 25 July 24