Kargil Vijay Diwas 2024 : ದೇಶಾಭಿಮಾನ ಹಾಗೂ ಸೈನಿಕರ ಬಗೆಗಿನ ಮಹಾನ್ ವ್ಯಕ್ತಿಗಳ ನುಡಿಮುತ್ತುಗಳಿವು
ಭಾರತೀಯರಿಗೆ ಜುಲೈ 26 ಮಹತ್ವದ ದಿನ. ಭಾರತವೂ ಪಾಕಿಸ್ತಾನದ ಕುತಂತ್ರವನ್ನು ಸದೆಬಡಿದು, ಭಾರತದ ಭಾಗವನ್ನು ಪಡೆದ ದಿನವಾಗಿದೆ. ಹೀಗಾಗಿ ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್ ಎಂದು ದೇಶದ್ಯಾಂತ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಈ ದಿನವು 1999 ರಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಮೇಲೆ ಮಹತ್ವದ ಮಿಲಿಟರಿ ವಿಜಯವಾದ ಆಪರೇಷನ್ ವಿಜಯ್ ವಿಜಯವನ್ನು ಸ್ಮರಿಸಲಾಗುತ್ತದೆ. ದೇಶ ಹಾಗೂ ಸೈನಿಕರ ಬಗೆಗಿನ ಮಹಾನ್ ವ್ಯಕ್ತಿಗಳ ನುಡಿಮುತ್ತುಗಳ ಬಗೆಗಿನ ಮಾಹಿತಿ ಇಲ್ಲಿದೆ.

ಕ್ಯಾಪ್ಟನ್ ವಿಕ್ರಂ ಬಾತ್ರ, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ಅಟಲ್ ಬಿಹಾರಿ ವಾಜಪೇಯಿ
1999 ರಲ್ಲಿ, ಪಾಕಿಸ್ತಾನವು ಆಕ್ರಮಿಸಿಕೊಂಡಿದ್ದ ಪ್ರದೇಶವನ್ನು ಭಾರತವು ಹಿಂತೆಗೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಸರಿಸುಮಾರು 60 ದಿನಗಳ ಕಾಲ ನಡೆದಿದ್ದ ಕಾರ್ಗಿಲ್ ಯುದ್ಧವು 26 ಜುಲೈ 1999 ರಂದು ಕೊನೆಗೊಂಡಿತ್ತು. ಈ ಯುದ್ಧದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಸೇರಿದಂತೆ 527 ಕ್ಕೂ ಹೆಚ್ಚು ಭಾರತೀಯ ಯೋಧರು ಪ್ರಾಣತೆತ್ತರು. 1999 ರಲ್ಲಿ ಆಪರೇಷನ್ ವಿಜಯ್ ಯಶಸ್ಸಿನ ಸ್ಮರಣಾರ್ಥವಾಗಿ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಗುತ್ತದೆ.
- ಒಂದೋ ನಾನು ತ್ರಿವರ್ಣ ಧ್ವಜವನ್ನು ಹಾರಿಸಿ ಬರುತ್ತೇನೆ ಅಥವಾ ನನ್ನನ್ನು ತ್ರಿವರ್ಣ ಧ್ವಜದಲ್ಲಿ ಸುತ್ತಿ ತರಲಾಗುವುದು ಆದರೆ ನಾನು ಖಂಡಿತವಾಗಿ ಬಂದೇ ಬರುತ್ತೇನೆ – ಕ್ಯಾಪ್ಟನ್ ವಿಕ್ರಂ ಬಾತ್ರ
- ಸೈನಿಕ ಎಂಬುವುದು ಒಬ್ಬ ವ್ಯಕ್ತಿಯಲ್ಲ, ನಮ್ಮ ದೇಶದ ಹೆಮ್ಮೆ, ಸೈನ್ಯ ನಮ್ಮ ವೈಭವ, ನಾವು ಪಡೆಯುವ ಗೌರವ – ಕೌಶಿಕ್ ಧಾಕಾಟೆ
- ನನ್ನ ಈ ದೇಶಕ್ಕಾಗಿ ಜೀವ ಕೊಡಲು ಬರೀ ಒಂದೇ ಜೀವನ ಮಾತ್ರ ಇರುವುದಕ್ಕೆ ಬೇಸರವಿದೆ –ಪ್ರೇಮ್ ಚಂದಾನಿ
- ನನ್ನ ದೇಶಕ್ಕಾಗಿ ನೀಡಲು ನನಗೆ ಒಂದೇ ಜೀವನವಿದೆ ಎಂದು ವಿಷಾದಿಸುತ್ತೇನೆ’ – ಪ್ರೇಮ್ ರಾಮ್‌ಚಂದಾನಿ
- ನನ್ನ ರಕ್ತವನ್ನು ಸಾಬೀತುಪಡಿಸುವ ಮೊದಲು ಸಾವು ಸಂಭವಿಸಿದರೆ, ನಾನು ಸಾವನ್ನು ಕೊಲ್ಲುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತೇನೆ’ – ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ
- ನಾವು ಭಾರತೀಯರು, ಮೊದಲನೆಯದಾಗಿ ಮತ್ತು ಕೊನೆಯದಾಗಿ’ – ಬಿ.ಆರ್.ಅಂಬೇಡ್ಕರ್
- ಪೌರತ್ವವು ದೇಶದ ಸೇವೆಯಲ್ಲಿ ಒಳಗೊಂಡಿದೆ – ಜವಾಹರಲಾಲ್ ನೆಹರು
- ನಾವು ಶಾಂತಿಯನ್ನು ಬಯಸುತ್ತೇವೆ ಆದರೆ ಅದು ಏಕಪಕ್ಷೀಯವಾಗಿರಲು ಸಾಧ್ಯವಿಲ್ಲ – ಅಟಲ್ ಬಿಹಾರಿ ವಾಜಪೇಯಿ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




