ಚಳಿಯಿಂದಾಗಿ ಮಂಟಪದಲ್ಲಿ ವರ ಮೂರ್ಛೆ ಹೋಗಿದ್ದಕ್ಕೆ ಮದುವೆಯೇ ರದ್ದು

ಉತ್ತರ ಭಾರತದಲ್ಲಿ ಚಳಿಗಾಲದಲ್ಲಿ ವಿಪರೀತ ಚಳಿ ಇರುತ್ತದೆ, ಜಾರ್ಖಂಡ್​ನ ದಿಯೋಗಢದಲ್ಲಿ ಚಳಿಯಿಂದಾಗಿ ಮದುವೆಯೇ ರದ್ದುಗೊಂಡಿದೆ. ವಿಪರೀತ ಚಳಿಯಿಂದಾಗಿ ವರ ಮದುವೆ ಮಂಟಪದಲ್ಲೇ ಮೂರ್ಛೆ ಹೋಗಿದ್ದರು. ಇದೇ ಕಾರಣವನ್ನಿಟ್ಟುಕೊಂಡು ವಧು ಮದುವೆಯನ್ನೇ ರದ್ದುಗೊಳಿಸಿರುವ ಘಟನೆ ನಡೆದಿದೆ. ಡಿಸೆಂಬರ್ 15ರಂದು ದಿಯೋಗಢದ ಘೋರ್ಮಾರಾದಲ್ಲಿ ವರ ಆರ್ನವ್ ಬಿಹಾರದ ಭಾಗಲ್‌ಪುರದ ಅಂಕಿತಾ ಅವರನ್ನು ವಿವಾಹವಾಗಬೇಕಿತ್ತು.

ಚಳಿಯಿಂದಾಗಿ ಮಂಟಪದಲ್ಲಿ ವರ ಮೂರ್ಛೆ ಹೋಗಿದ್ದಕ್ಕೆ ಮದುವೆಯೇ ರದ್ದು
ಮದುವೆ

Updated on: Dec 17, 2024 | 2:15 PM

ಉತ್ತರ ಭಾರತದಲ್ಲಿ ಚಳಿಗಾಲದಲ್ಲಿ ವಿಪರೀತ ಚಳಿ ಇರುತ್ತದೆ, ಜಾರ್ಖಂಡ್​ನ ದಿಯೋಗಢದಲ್ಲಿ ಚಳಿಯಿಂದಾಗಿ ಮದುವೆಯೇ ರದ್ದುಗೊಂಡಿದೆ. ವಿಪರೀತ ಚಳಿಯಿಂದಾಗಿ ವರ ಮದುವೆ ಮಂಟಪದಲ್ಲೇ ಮೂರ್ಛೆ ಹೋಗಿದ್ದರು. ಇದೇ ಕಾರಣವನ್ನಿಟ್ಟುಕೊಂಡು ವಧು ಮದುವೆಯನ್ನೇ ರದ್ದುಗೊಳಿಸಿರುವ ಘಟನೆ ನಡೆದಿದೆ. ಡಿಸೆಂಬರ್ 15ರಂದು ದಿಯೋಗಢದ ಘೋರ್ಮಾರಾದಲ್ಲಿ ವರ ಆರ್ನವ್ ಬಿಹಾರದ ಭಾಗಲ್‌ಪುರದ ಅಂಕಿತಾ ಅವರನ್ನು ವಿವಾಹವಾಗಬೇಕಿತ್ತು. ಅನಾರೋಗ್ಯದ ಕಾರಣ ಚಳಿಯನ್ನು ತಡೆದುಕೊಳ್ಳಲಾಗದೆ ಮೂರ್ಛೆ ಹೋಗಿದ್ದರು. ಆದರೆ ವಧು ಇದೇ ಕಾರಣಕ್ಕೆ ಮದುವೆಯನ್ನೇ ರದ್ದುಗೊಳಿಸಿದ್ದಾಳೆ.

ಮದುವೆಯು ಸ್ಥಳೀಯ ಪಟ್ಟಣವೊಂದರಲ್ಲಿ ನಡೆಯುತ್ತಿತ್ತು. ವಧುವಿನ ಕುಟುಂಬ ಮತ್ತು ಸಂಬಂಧಿಕರು ಎಲ್ಲರೂ ವರನಿದ್ದ ಸ್ಥಳವನ್ನು ತಲುಪಿದರು. ಸಂಪ್ರದಾಯದಂತೆ ಸಕಲ ವಿಧಿವಿಧಾನಗಳು ನೆರವೇರಿದ್ದು, ಶೀತ ವಾತಾವರಣದ ನಡುವೆ ಬಯಲಿನಲ್ಲಿ ವರಮಾಲಾ ಸಮಾರಂಭವೂ ಸಂತಸದಿಂದ ನೆರವೇರಿತು. ನಂತರ ಎರಡು ಕುಟುಂಬಗಳು, ವಧು ಮತ್ತು ವರನೊಂದಿಗೆ ರಾತ್ರಿ ಊಟ ಮಾಡಿ ಸಪ್ತಪದಿ ತುಳಿಯಲು ಸಿದ್ಧರಾಗಿದ್ದರು. ಪುರೋಹಿತರು ಮಂತ್ರ ಪಠಿಸುತ್ತಿದ್ದಂತೆ ವರ ನಡುಗಲು ಶುರು ಮಾಡಿದ್ದ ತಕ್ಷನವೇ ಪ್ರಜ್ಞೆ ತಪ್ಪಿ ಬಿದ್ದಿದ್ದ.

ಗಾಬರಿಯಾದ ಮದುಮಗನ ಮನೆಯವರು ಆತನನ್ನು ಸಮೀಪದ ಕೋಣೆಗೆ ಕರೆದೊಯ್ದು ಆತನ ಅಂಗೈ ಮತ್ತು ಅಡಿಭಾಗವನ್ನು ಉಜ್ಜಿ ಪ್ರಜ್ಞೆಗೆ ತರಲು ಪ್ರಯತ್ನಿಸಿದರು. ವೈದ್ಯರನ್ನು ಕರೆಸಲಾಯಿತು. ಒಂದೂವರೆ ಗಂಟೆಗಳ ಬಳಿಕ ಪ್ರಜ್ಞೆಗೆ ಮರಳಿದ್ದರು. ಆದರೆ ವಧು ಈ ಮದುವೆಯನ್ನು ನಿರಾಕರಿಸಿದ್ದಾಳೆ. ಆರ್ನವ್ ಯಾವುದೋ ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಆತ ಚಳಿಯಲ್ಲಿ ಮೂರ್ಛೆ ಹೋಗಿದ್ದಾನೆ ಎಂಬ ಭಯ ಕಾಡುತ್ತಿದೆ ಎಂದು ಅಂಕಿತಾ ಹೇಳಿದ್ದಾರೆ.

ಮತ್ತಷ್ಟು ಓದಿ: ಮದುವೆ ದಿನ ರಾತ್ರಿ ಮಧುಮಗಳು ಮಾಡಿದ ಕೆಲಸದಿಂದ ಪತಿ ಆಸ್ಪತ್ರೆ ಸೇರುವಂತಾಯ್ತು

ಎರಡು ಕುಟುಂಬಗಳ ನಡುವೆ ಕಲಹ ಉಂಟಾಗಿತ್ತು, ವಧುವಿನ ಮನೆಯವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ವಿವಾದ ಬಗೆಹರಿಸಲು ಪೊಲೀಸರಿಗೆ ಕರೆ ಮಾಡಿದ್ದಾರೆ. ಬಾಕಿ ಉಳಿದಿರುವ ವಿವಾಹದ ವಿಧಿವಿಧಾನಗಳನ್ನು ಮುಂದುವರಿಸಲು ಎರಡೂ ಕಡೆಯವರನ್ನು ಮನವೊಲಿಸಲು ಪೊಲೀಸರು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು.

ಆದಾಗ್ಯೂ, ಮರುದಿನ ಬೆಳಿಗ್ಗೆ ತನಕ ಪರಿಸ್ಥಿತಿ ಸುಧಾರಿಸಲಿಲ್ಲ ಮತ್ತು ಅಂತಿಮವಾಗಿ ಎರಡು ಕಡೆಯವರ ಒಪ್ಪಿಗೆಯೊಂದಿಗೆ ಮದುವೆಯನ್ನು ರದ್ದುಗೊಳಿಸಲಾಯಿತು. ಆರ್ನವ್ ಅವರ ಕುಟುಂಬವು ಘೋರ್ಪಾರಾದಲ್ಲಿರುವ ತಮ್ಮ ಮನೆಗೆ ಹಿಂದಿರುಗಿದರೆ, ಅಂಕಿತಾ ಅವರ ಕುಟುಂಬ ಮತ್ತು ಸಂಬಂಧಿಕರು ಭಾಗಲ್ಪುರಕ್ಕೆ ಹಿಂತಿರುಗಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 2:05 pm, Tue, 17 December 24

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us