AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ದಿನ ರಾತ್ರಿ ಮಧುಮಗಳು ಮಾಡಿದ ಕೆಲಸದಿಂದ ಪತಿ ಆಸ್ಪತ್ರೆ ಸೇರುವಂತಾಯ್ತು

ವ್ಯಕ್ತಿಯೊಬ್ಬ ತುಂಬಾ ಇಷ್ಟ ಪಟ್ಟು ಯುವತಿಯೊಬ್ಬಳನ್ನು ಮದುವೆ ಮಾಡಿಕೊಂಡು ಮನೆಗೆ ಬಂದಿದ್ದ. ಆದರೆ ಮದುವೆಯ ಮೊದಲ ರಾತ್ರಿ ನವವಧು ಮಾಡಿದ ಕೆಲಸಕ್ಕೆ ಆತ ಆಸ್ಪತ್ರೆ ಸೇರುವಂತಾಗಿತ್ತು. ಮಧ್ಯಪ್ರದೇಶದ ಛತ್ತರ್​ಪುರ್​ನಲ್ಲಿ ಈ ಘಟನೆ ನಡೆದಿದೆ. ವಧು ತನ್ನ ಗಂಡನಿಗೆ ಹಾಲಿನ ಲೋಟ ಕೈಗಿಟ್ಟಿದ್ದಳು, ಗೃಹ ಪ್ರವೇಶ ಮುಗಿದು ಇಬ್ಬರೂ ಮಲಗಿದ್ದರು. ಹಾಲು ಕುಡಿದ ತಕ್ಷಣ ಪತಿ ಪ್ರಜ್ಞೆ ತಪ್ಪಿ ಬಿದ್ದಿದ್ದ. ಬೆಳಗ್ಗೆ ಎದ್ದಾಗ ಆಘಾತ ಕಾದಿತ್ತು, ಆಕೆ ಬೆಳ್ಳಿ, ಬಂಗಾರವನ್ನೆಲ್ಲಾ ಕದ್ದು ಮನೆಯಿಂದ ಪರಾರಿಯಾಗಿದ್ದಳು. ನಂತರ ಮತ್ತು ಬರುವ ಹಾಲು ಕುಡಿದು ಅವರ ಆರೋಗ್ಯವೂ ಕೆಟ್ಟು ಆಸ್ಪತ್ರೆಗೆ ದಾಖಲಾಗಬೇಕಾಯಿತು. ಮದುವೆಯಾಗಿ 24 ಗಂಟೆಯ ಒಳಗೇ ವಧು ಓಡಿ ಹೋಗಿದ್ದಾಳೆ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯ ಒಡವೆಗಳೊಂದಿಗೆ ಪರಾರಿಯಾಗಿದ್ದಾಳೆ.

ಮದುವೆ ದಿನ ರಾತ್ರಿ ಮಧುಮಗಳು ಮಾಡಿದ ಕೆಲಸದಿಂದ ಪತಿ ಆಸ್ಪತ್ರೆ ಸೇರುವಂತಾಯ್ತು
ಮದುವೆ
ನಯನಾ ರಾಜೀವ್
|

Updated on: Dec 16, 2024 | 12:21 PM

Share

ವ್ಯಕ್ತಿಯೊಬ್ಬ ತುಂಬಾ ಇಷ್ಟ ಪಟ್ಟು ಯುವತಿಯೊಬ್ಬಳನ್ನು ಮದುವೆ ಮಾಡಿಕೊಂಡು ಮನೆಗೆ ಬಂದಿದ್ದ. ಆದರೆ ಮದುವೆಯ ಮೊದಲ ರಾತ್ರಿ ನವವಧು ಮಾಡಿದ ಕೆಲಸಕ್ಕೆ ಆತ ಆಸ್ಪತ್ರೆ ಸೇರುವಂತಾಗಿತ್ತು. ಮಧ್ಯಪ್ರದೇಶದ ಛತ್ತರ್​ಪುರ್​ನಲ್ಲಿ ಈ ಘಟನೆ ನಡೆದಿದೆ. ವಧು ತನ್ನ ಗಂಡನಿಗೆ ಹಾಲಿನ ಲೋಟ ಕೈಗಿಟ್ಟಿದ್ದಳು, ಗೃಹ ಪ್ರವೇಶ ಮುಗಿದು ಇಬ್ಬರೂ ಮಲಗಿದ್ದರು. ಹಾಲು ಕುಡಿದ ತಕ್ಷಣ ಪತಿ ಪ್ರಜ್ಞೆ ತಪ್ಪಿ ಬಿದ್ದಿದ್ದ.

ಬೆಳಗ್ಗೆ ಎದ್ದಾಗ ಆಘಾತ ಕಾದಿತ್ತು, ಆಕೆ ಬೆಳ್ಳಿ, ಬಂಗಾರವನ್ನೆಲ್ಲಾ ಕದ್ದು ಮನೆಯಿಂದ ಪರಾರಿಯಾಗಿದ್ದಳು. ನಂತರ ಮತ್ತು ಬರುವ ಹಾಲು ಕುಡಿದು ಅವರ ಆರೋಗ್ಯವೂ ಕೆಟ್ಟು ಆಸ್ಪತ್ರೆಗೆ ದಾಖಲಾಗಬೇಕಾಯಿತು. ಮದುವೆಯಾಗಿ 24 ಗಂಟೆಯ ಒಳಗೇ ವಧು ಓಡಿ ಹೋಗಿದ್ದಾಳೆ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯ ಒಡವೆಗಳೊಂದಿಗೆ ಪರಾರಿಯಾಗಿದ್ದಾಳೆ.

ಯುವಕನ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಆಕೆಯ ಸಹೋದರ ಮತ್ತು ಸಹೋದರನ ಸ್ನೇಹಿತ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಾಲ್ವರು ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ. ಅಶೋಕ್ ರಾವತ್ ಅವರ 29 ವರ್ಷದ ಮಗ ರಾಜದೀಪ್ ರಾವತ್ ಡಿಸೆಂಬರ್ 11 ರಂದು ಹಿಂದೂ ಸಂಪ್ರದಾಯದಂತೆ ಚರ್ಖಾರಿ ನಿವಾಸಿ ಖುಷಿ ತಿವಾರಿ ಅವರನ್ನು ವಿವಾಹವಾದರು ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಮದುವೆ ಮಂಟಪದಿಂದ ಹತ್ತಾರು ಬಾರಿ ಎದ್ದು ಹೋಗ್ತಿದ್ದ ವರ, ಅನುಮಾನ ಬಂದು ಹಿಂದೆ ಹೋದಾಗ ಕಂಡಿದ್ದೇನು?

ವಧು ತನ್ನ ಪತಿ ರಾಜ್‌ದೀಪ್ ರಾವತ್‌ಗೆ ಹಾಲು ಕುಡಿಯಲು ಕೊಟ್ಟಳು. ಹಾಲು ಕುಡಿದು ಕುಡಿದ ಅಮಲಿನಲ್ಲಿ ರಾವತ್ ನಿದ್ದೆಗೆ ಜಾರಿದ್ದರು. ಮದುವೆಗೆ ಸುಮಾರು 17 ದಿನಗಳ ಮೊದಲು, ಉತ್ತರ ಪ್ರದೇಶದ ಚರಖಾರಿ ಜಿಲ್ಲೆಯ ಮಹೋಬಾದ ಗುಡಾ ಗ್ರಾಮದ ನಿವಾಸಿಗಳಾದ ಪಪ್ಪು ರಜಪೂತ್ ಮತ್ತು ಶಕುನ್ ಪಾಠಕ್ ಅವರು ಚರಖಾರಿಯ ಹನುಮಾನ್ ದೇವಸ್ಥಾನದಲ್ಲಿ ಹುಡುಗಿಯನ್ನು ವಿವಾಹವಾಗಿದ್ದರು.

ಯುವತಿ ಖುಷಿ ತಿವಾರಿ ಜೊತೆಗೆ ಆಕೆಯ ಸಹೋದರ ಛೋಟು ತಿವಾರಿ ಮತ್ತು ಸ್ನೇಹಿತ ವಿನಯ್ ತಿವಾರಿ ಕೂಡ ಬಂದಿದ್ದರು. ಬಾಲಕಿಯ ತಾಯಿ ಅಸ್ವಸ್ಥಳಾಗಿದ್ದು, ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ವಿವಾಹವಾಗಬೇಕಿದೆ ಎಂದು ತಿಳಿಸಿದರು. ಡಿಸೆಂಬರ್ 11 ರಂದು ಮದುವೆಯ ದಿನಾಂಕವನ್ನು ನಿಗದಿಪಡಿಸಲಾಯಿತು ಮತ್ತು ಮದುವೆಯ ನಂತರ ಆಕೆ ಪರಾರಿಯಾಗಿದ್ದಾಳೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ