ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಎರಡು ಮನೆಗಳಿಗೆ ಬೆಂಕಿ
Manipur violence: ಘಟನೆಯ ನಂತರ ಮೈತಿ ಮಹಿಳೆಯರ ಗುಂಪೊಂದು ಪ್ರದೇಶದಲ್ಲಿ ಜಮಾಯಿಸಿತು. ಆದರೆ ಭದ್ರತಾ ಪಡೆಗಳು ಅವರು ಮತ್ತಷ್ಟು ಮುಂದುವರಿಯದಂತೆ ತಡೆದರು ಎಂದು ಪೊಲೀಸರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ಹೇಳಿದ್ದಾರೆ.
ಇಂಫಾಲ್ ಅಕ್ಟೋಬರ್ 05: ಮಣಿಪುರದ (Manipur) ಇಂಫಾಲ್ (Imphal) ಪಶ್ಚಿಮ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಹೊಸ ಹಿಂಸಾಚಾರ (violence) ವರದಿಯಾಗುತ್ತಿದ್ದಂತೆ ಎರಡು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ರಾತ್ರಿ 10 ಗಂಟೆ ಸುಮಾರಿಗೆ ಪಟ್ಸೋಯಿ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಕೀತೆಲ್ಮನ್ಬಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಅಪರಿಚಿತ ದುಷ್ಕರ್ಮಿಗಳು ಹಲವಾರು ಸುತ್ತಿನ ಬುಲೆಟ್‌ಗಳನ್ನು ಹಾರಿಸಿ ಘಟನೆಯ ರ ಸ್ಥಳದಿಂದ ಪರಾರಿಯಾಗಿದ್ದಾರೆ. ಭದ್ರತಾ ಪಡೆಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ಮೈತಿ ಮಹಿಳೆಯರ ಗುಂಪೊಂದು ಪ್ರದೇಶದಲ್ಲಿ ಜಮಾಯಿಸಿತು. ಆದರೆ ಭದ್ರತಾ ಪಡೆಗಳು ಅವರು ಮತ್ತಷ್ಟು ಮುಂದುವರಿಯದಂತೆ ತಡೆದರು ಎಂದು ಪೊಲೀಸರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ಹೇಳಿದ್ದಾರೆ.
ಮಣಿಪುರದಲ್ಲಿ ಮೊದಲ ಬಾರಿಗೆ ಮೇ 3 ರಂದು ಚುರಾಚಂದ್‌ಪುರ ಪಟ್ಟಣದಲ್ಲಿ ಬುಡಕಟ್ಟು ಗುಂಪುಗಳು ರಾಜ್ಯದ ಮೀಸಲಾತಿ ನೀತಿಗೆ ಪ್ರಸ್ತಾವಿತ ತಿದ್ದುಪಡಿ ವಿರೋಧಿಸಿ ಪ್ರತಿಭಟನೆಗೆ ಕರೆ ನೀಡಿದ ನಂತರ ಘರ್ಷಣೆಗಳು ಪ್ರಾರಂಭವಾದವು. ಈ ತಿದ್ದುಪಡಿ ಮೈತಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನವನ್ನು ನೀಡುತ್ತವೆ.
ಹಿಂಸಾಚಾರದಿಂದಾಗಿ ಮಣಿಪುರದಲ್ಲಿ ಕನಿಷ್ಠ 175 ಜನರು ಸಾವಿಗೀಡಾಗಿದ್ದು, 50,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ನೂರಾರು ಮನೆಗಳು ಬೆಂಕಿಗೆ ಆಹುತಿಯಾಗಿದ್ದು ವ್ಯಾಪಾರಗಳು ನಷ್ಟವಾಗಿವೆ. ಸುಮಾರು 4,500 ಶಸ್ತ್ರಾಸ್ತ್ರಗಳು ಮತ್ತು ಸುಮಾರು 650,000 ಸುತ್ತು ಮದ್ದುಗುಂಡುಗಳು ನಾಪತ್ತೆಯಾಗಿವೆ ಎಂದು ರಾಜ್ಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಮಣಿಪುರ ಪೊಲೀಸರು ಮತ್ತು ಭದ್ರತಾ ಪಡೆಗಳು ಇದುವರೆಗೆ 1,500 ಶಸ್ತ್ರಾಸ್ತ್ರಗಳು ಮತ್ತು ಸುಮಾರು 15,000 ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರಕ್ಕೆ 5 ತಿಂಗಳು: ಪ್ರಧಾನಿ ಮೋದಿಗೆ 4 ಪ್ರಶ್ನೆಗಳನ್ನು ಕೇಳಿದ ಕಾಂಗ್ರೆಸ್
ಮಣಿಪುರದ ಕುಕಿ ಗುಂಪುಗಳು ರಾಜ್ಯ ಪೊಲೀಸರು ಪಕ್ಷಪಾತಿ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಅಸ್ಸಾಂ ರೈಫಲ್ಸ್ ಅನ್ನು ಉಳಿಸಿಕೊಳ್ಳಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ